ಕಾರ್ಕಳ

ಬಸ್ರಿ ಬೈಲೂರು ಶಾಲೆಯಲ್ಲಿ ಯಕ್ಷಗಾನ ತರಬೇತಿ ಹಾಗೂ ಕರಾಟೆ ತರಗತಿ ಉದ್ಘಾಟನೆ

ಪಟ್ಲ ಫೌಂಡೇಶನ್ ಮಂಗಳೂರು (ರಿ) ಇದರ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  ಬಸ್ರಿ ಬೈಲೂರು ಇಲ್ಲಿಯ ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ ಹಾಗೂ ಶಾಲಾ ಪೋಷಕರ ವತಿಯಿಂದ ಕರಾಟೆ ತರಗತಿಯ ಉದ್ಘಾಟನಾ ಸಮಾರಂಭ ನಡೆಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಉಪಾಧ್ಯಕ್ಷರಾದ ರೂಪ ಆಚಾರ್ಯ ವಹಿಸಿದ್ದರು.
ಅತಿಥಿಗಳಾದ ಕಾರ್ಕಳ ಯಕ್ಷ ಕಲಾರಂಗ ಅಧ್ಯಕ್ಷರಾದ ವಿಜಯ ಶೆಟ್ಟಿ ಮಾತನಾಡಿ ಯಕ್ಷಗಾನದ ಬಗ್ಗೆ ಮಕ್ಕಳೆಲ್ಲರೂ ಆಸಕ್ತಿ ಬೆಳೆಸಿ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಯಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.

ಕಾರ್ಕಳ ಯಕ್ಷ ಕಲಾರಂಗ ಉಪಾಧ್ಯಕ್ಷರಾದ ಬೇಬಿ ಈಶ್ವರಮಂಗಲ ಯಕ್ಷಗಾನದ ಮಹತ್ವ ಮಕ್ಕಳಿಗೆ ಮನವರಿಕೆ ಮಾಡಿದರು.

ಕರಾಟೆ ಶಿಕ್ಷಕರಾದ ಸಂದೇಶ ಆಚಾರ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ದಾನಿಗಳಾದ ವಿನಯದಾಸ್ ಶೆಟ್ಟಿ ಜಾರ್ಕಳ, ಚೈಯಬ್ಬ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಕೊಡೆಗಳನ್ನು ಒದಗಿಸಲು ಧನ ಸಹಾಯವಿತ್ತ ವಿನಯದಾಸ್ ಶೆಟ್ಟಿ ಜಾರ್ಕಳ ಹಾಗೂ ಬಾಬರ್‌ರ ಪರವಾಗಿ ಅವರ ತಂದೆ ಚೈಯಬ್ಬ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಕಳ ಯಕ್ಷಕಲಾ ರಂಗ ಸಂಚಾಲಕರಾದ ಮಹಾವೀರ ಪಾಂಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮುಖ್ಯೋಪಾಧ್ಯಾಯರಾದ ಶ್ರೀಮತಿ ವಸಂತಿ ಎಚ್. ಜಿ. ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಕಾವೇರಿ ವಂದಿಸಿದರು. ದಿನೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು, ಪೋಷಕರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Related posts

ಕಾರ್ಕಳ: ಅಕ್ರಮ ಮದ್ಯ ಮಾರಾಟ – ಪ್ರಕರಣ ದಾಖಲು

Madhyama Bimba

ಕಾರ್ಕಳ ರೋಟರಿ ಕ್ಲಬ್ ವತಿಯಿಂದ “ದೇವರ ಮಕ್ಕಳೊಂದಿಗೆ ನಮ್ಮ ಸಮಯ” ವಿಶೇಷ ಸೇವಾ ಕಾರ್ಯಕ್ರಮ

Madhyama Bimba

ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ : ” ಶತರಥ ” ಶಾಲಾ ಮಕ್ಕಳ ವಾಹನ ವ್ಯವಸ್ಥೆಗೆ ಚಾಲನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More