ಕಾರ್ಕಳ

ಕಾರ್ಕಳದ ಎಸ್‌ವಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ನಶಾ ಮುಕ್ತ ಭಾರತ” ಕಾರ್ಯಕ್ರಮ

ಕಾರ್ಕಳದ ಎಸ್‌ವಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ನಶಾ ಮುಕ್ತ ಭಾರತ” ಕಾರ್ಯಕ್ರಮ
ಕಾರ್ಕಳ: ಕಾರ್ಕಳದ ಎಸ್‌ವಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೆಸಿಐ ರೂರಲ್ ಕಾರ್ಕಳ ಇದರ ಸಹಯೋಗದಲ್ಲಿ “ನಶಾ ಮುಕ್ತ ಭಾರತ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಕಳ ನಗರ ಠಾಣೆಯ ಪಿಎಸ್‌ಐ ಶಿವಕುಮಾರ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಸ್ವಸ್ಥ, ನಾಗರಿಕ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನತೆಯ ಪಾತ್ರ ಮತ್ತು ವ್ಯಸನ ಮುಕ್ತ ಸಮಾಜ ಹಾಗೂ ಅದರ ರಕ್ಷಣೆಗಾಗಿ ಪೊಲೀಸ್ ಇಲಾಖೆ ನಡೆಸುತ್ತಿರುವ ಪ್ರಯತ್ನಗಳನ್ನು ವಿವರಿಸಿತ್ತ ವಿದ್ಯಾರ್ಥಿಗಳು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಉತ್ತಮ ಭವಿಷ್ಯದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳ ಬೇಕೆಂದು ಕರೆಕೊಟ್ಟರು.

ಜೂನಿಯರ್ ಜೆಸಿ ಅಧ್ಯಕ್ಷೆ ದಿಯಾ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.

ಜೆ ಸಿ ಐ ರೂರಲ್‌ನ ಪದಾಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು, ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ಪಿ. ಶೆಣೈ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಾಲಿನಿ ಕೆ ಮತ್ತು ಅಧ್ಯಾಪಕ ವೃಂದ ರವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಕಾರ್ಕಳ: ಸಾಣೂರಿನಲ್ಲಿ ಕೋಳಿ ಅಂಕ- ಪ್ರಕರಣ ದಾಖಲು

Madhyama Bimba

ಮಾತಿಬೆಟ್ಟು ಬಿಲ್ಲವ ಸಂಘದ ಯುವ ಘಟಕದ ವತಿಯಿಂದ ಆದಿತ್ಯ ಹರೀಶ್ ಪೂಜಾರಿಯವರಿಗೆ ಅಭಿನಂದನೆ

Madhyama Bimba

ಹೆಬ್ರಿ ಎಸ್ ಆರ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಕುರಿತು ವಿಶೇಷ ಮಾರ್ಗದರ್ಶನ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More