ಮೂಡುಬಿದಿರೆ

ಮೂಡುಬಿದಿರೆ ಲಯನ್ಸ್, ಲಿಯೋ ಕ್ಲಬ್ ಪದಗ್ರಹಣ

ಮೂಡಬಿದ್ರಿ ಲಯನ್ಸ್ ಹಾಗೂ ಲಿಯೋ ಕ್ಲಬ್ 2026- 27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮೂಡುಬಿದಿರೆ ಕೀರ್ತಿ ನಗರದ ಬಳಿ ಇರುವ ನೂತನ ಲಯನ್ಸ್ ಹರಿಭವ ಸಭಾಭವನದಲ್ಲಿ ನಡೆಯಿತು.

ಪದಗ್ರಹಣ ನೆರವೇರಿಸಿ ಮಾತನಾಡಿದ ಲಯನ್ಸ್ ಜಿಲ್ಲಾ ಜಿಎಲ್ಟಿ ಕೋ ಆರ್ಡಿನೇಟರ್ ಓಸ್ವಾಲ್ಡ್ ಡಿಸೋಜಾ ಮಾತನಾಡಿ ಕ್ಲಬ್ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿ ವಿಶ್ವಾದ್ಯಂತ ಜನಪ್ರಿಯವಾಗಿದೆ. ದೇಶದ ಪ್ರಗತಿಯಲ್ಲಿ ಪೂರಕ ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದರು. ಸಭೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಪಿಗೆ ಹೋಲಿ ಸ್ಪಿರಿಟ್ ಚರ್ಚಿನ ಧರ್ಮಗುರು ವಿನ್ಸೆಂಟ್ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಈಶ ಸೇವೆ, ದೇಶ ಸೇವೆ, ಜನ ಸೇವೆ, ಕಲಾ ಸೇವೆ ಮನುಷ್ಯನಿಗೆ ಅತಿ ಅಗತ್ಯ. ಸೇವೆಯಿಂದ ಸಿಗುವ ತೃಪ್ತಿ ನಿಜಕ್ಕೂ ಶ್ರೇಯಸ್ಕರ. ದೇವರ ಕೃಪೆ- ಶಾಂತಿ ಜೀವನದಲ್ಲಿ ಹೆಚ್ಚಳವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಎಸ್ ಎಸ್ ಎಲ್ ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾಕಯ್ಯ ಮನೆ ನಿರ್ಮಾಣಕ್ಕೆ ಸಹಾಯಧನ, ಒಂಟಿಕಟ್ಟೆ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರಕ್ಕೆ ಸಹಾಯ, ಸಿಯೋನ್ ಆಶ್ರಮವಾಸಿಗಳಿಗೆ ಧನ ಸಹಾಯ, ಜಾನೆಟ್ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವ ಮೂಲಕ ಸಮಾಜ ಸೇವಾ ಕಾರ್ಯಕ್ರಮಗಳನ್ನು ವ್ಯಕ್ತಪಡಿಸಲಾಯಿತು.

ಉಪ ರಾಜ್ಯಪಾಲ ವೆಂಕಟೇಶ್ ಹೆಬ್ಬಾರ್, ಪೂರ್ವ ರಾಜ್ಯಪಾಲ ಮೆಲ್ವಿನ್, ವಲಯ ಅಧ್ಯಕ್ಷರಾದ ದೇವದಾಸ್ ಶೆಟ್ಟಿ, ದಿನೇಶ್ ಎಂ. ಕೆ., ವಲಯ ಪ್ರತಿನಿಧಿ ಜೆಸಿಂತಾ ಮೆಂಡೋನ್ಸ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಿಕಟಪೂರ್ವ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಮಾತನಾಡಿ ಜವಾಬ್ದಾರಿಯುತವಾಗಿ ಕೆಲಸ ಮಾಡಲು ಸಹಕರಿಸಿದವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ನಿಕಟಪೂರ್ವ ಕಾರ್ಯದರ್ಶಿ ಒಸ್ವಾಲ್ಡ್ ಡಿಕೋಸ್ಟಾ, ಕೋಶಾಧಿಕಾರಿ ಹರೀಶ್ ತಂತ್ರಿ, ನೂತನ ಅಧ್ಯಕ್ಷ ರಿಚಾರ್ಡ್ ಕಾರ್ಡೋಜ, ನೂತನ ಕಾರ್ಯದರ್ಶಿ ಹರ್ಷ, ಕೋಶಾಧಿಕಾರಿ ಅರುಣ್ ಡಿಸಿಲ್ವಾ, ಲಿಯೋ ಕ್ಲಬ್ ನೂತನ ಅಧ್ಯಕ್ಷೆ ಎಮ್. ಕೆ. ಶಿವಾನಿ, ಕಾರ್ಯದರ್ಶಿ ರಾಹುಲ್ ಪಿ. ಹೆಗ್ಡೆ, ಕೋಶಾಧಿಕಾರಿ ವ್ಯಾಲೆನ್ಸ್ ಮೆಂಡೋನ್ಸ, ನಿಕಟ ಪೂರ್ವ ಅಧ್ಯಕ್ಷ ಪ್ರಖ್ಯಾತ ಹೆಗ್ಡೆ, ಕಾರ್ಯದರ್ಶಿ ಶಶಾಂಕ್, ಕೋಶಾಧಿಕಾರಿ ಸ್ವಯಂ ಪೂಜಾರಿ,ಹಾಗೂ ಪ್ರಮೀಳಾ ಕಾರ್ಡೋಜ ಮತ್ತು ಪ್ರಾಂತ್ಯದ ವಿವಿಧ ಕ್ಲಬ್ ಗಳ ಅಧ್ಯಕ್ಷರುಗಳು ವೇದಿಕೆಯಲ್ಲಿದ್ದರು.

ಶಿವಪ್ರಸಾದ್ ಹೆಗ್ಡೆ ಸ್ವಾಗತಿಸಿ, ಹರ್ಷ ಧನ್ಯವಾದವಿತ್ತರು. ದಯಾನಂದ್ ಕಾರ್ಯಕ್ರಮ ನಿರೂಪಿಸಿದರು. ಡಾ. ಎಸ್. ಎನ್. ವೆಂಕಟೇಶ್ ನಾಯಕ್, ಶಿವಕುಮಾರ್, ಗೌತಮ್, ನವೀನ್ ಪಿರೇರ, ನಾಗೇಶ್, ಪ್ರದೀಪ್ ಪಿಂಟೋ ಕ್ಲಬ್ ಗೆ ಹೊಸ ಸದಸ್ಯರುಗಳಾಗಿ ಸೇರ್ಪಡೆಯಾದರು.

Related posts

ಸರಕಾರದ ಕಠಿಣ ನಿಯಾಮಾವಳಿ- ಬಗರ್ ಹುಕುಂ ಅಕ್ರಮ ಸಕ್ರಮ ಸಭೆ ನಿಧಾನಗತಿ: ಶಾಸಕ ಕೋಟ್ಯಾನ್

Madhyama Bimba

ಪಂಚಾಯತ್ ನೌಕಕರ ಮುಷ್ಕರ: ಜನಸೇವೆಯಲ್ಲಿ ವ್ಯತ್ಯಯ

Madhyama Bimba

 ಚೇತನ ಯುವಕ ಮಂಡಲದ ವಾರ್ಷಿಕೋತ್ಸವ- ಮಾರ್ನಾಡಿನ ಸೇವಾ ಮಾಣಿಕ್ಯ ರಾಘು ಸಿ ಪೂಜಾರಿಯವರಿಗೆ ಹುಟ್ಟೂರ ಗೌರವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More