ಮೂಡುಬಿದಿರೆ

ನೀಟ್ ಫಲಿತಾಂಶದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೀಟ್-2026 ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ. ಒಂದೇ ಕ್ಯಾಂಪಸ್‌ನ ಕ್ಲಾಸ್‌ ರೂಮ್ ವ್ಯವಸ್ಥೆಯಲ್ಲಿ ವ್ಯಾಸಂಗ ಮಾಡಿದ 21 ವಿದ್ಯಾರ್ಥಿಗಳು 99 ಪರ್ಸಂಟೈಲ್ ಗಿಂತ ಅಧಿಕ ಅಂಕಗಳನ್ನು ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿತಂದಿದ್ದಾರೆ.

ಅಳ್ವಾಸ್‌ನ ಸೂರ್ಯಕಾಂತ್ ಪಾಟೀಲ್ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 97ನೇ ರ್‍ಯಾಂಕ್, ಚೇತನ್ ಯರನಾಳ್‌ 239ನೇ ರ್‍ಯಾಂಕ್, ಕ್ಲಾರೆನ್ಸ್ ಡಿ’ಸೋಜಾ 724 ರ್‍ಯಾಂಕ್  ಹಾಗೂ ದೀಕ್ಷಿತಾ ಕೆ.ಎಸ್ 951 ರ್‍ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಳ್ವಾಸ್‌ನ 10 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕಗಳನ್ನು, 161 ವಿದ್ಯಾರ್ಥಿಗಳು 500ಕ್ಕೂ ಅಧಿಕ ಅಂಕಗಳನ್ನು ಪಡೆದಿದ್ದಾರೆ. ಒಟ್ಟು 467 ವಿದ್ಯಾರ್ಥಿಗಳು 450ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದು, ಈ ಪೈಕಿ 450ಕ್ಕೂ ಅಧಿಕ ವಿದ್ಯಾರ್ಥಿಗಳು ಸರಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆಯುವ ಸಾಧ್ಯತೆ ಇದೆ.

ಅಖಿಲ ಭಾರತ ಮಟ್ಟದ ವೈದ್ಯಕೀಯ ರ್‍ಯಾಂಕ್ ನಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮೆರೆದಿದ್ದಾರೆ. ಕೆಟಗರಿ ವಿಭಾಗದಲ್ಲಿ ಟಾಪ್ 500 ಯಾಂಕ್‌ನ ಒಳಗೆ 03 ವಿದ್ಯಾರ್ಥಿಗಳು, ಟಾಪ್ 1000 ಬ್ಯಾಂಕ್‌ನ ಒಳಗೆ 14 ವಿದ್ಯಾರ್ಥಿಗಳು, ಟಾಪ್ 2000 ರ್‍ಯಾಂಕ್ ನ ಒಳಗೆ 26 ವಿದ್ಯಾರ್ಥಿಗಳು ಹಾಗೂ ಟಾಪ್ 5000 ರ್‍ಯಾಂಕ್  ನ ಒಳಗೆ 72 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.

ಸೂರ್ಯಕಾಂತ್ ಪಾಟೀಲ್-653, ಕ್ಲಾರೆನ್ಸ್ ಡಿ’ಸೋಜ 612, ವೈಭವಿ ಎಮ್-611, ಆಯುಶ್ ಕಲ್ಲುಡಿ-611. ಪರಿಣಿತ್ ಗೌಡ ಬಿ.ಎಲ್- 605, ಲೋಕೆಶ್ ಬಿ.ಎನ್- 605, ದೀಕ್ಷಿತ ಕೆ.ಎಸ್ 604, ಬಶೀರ್ ಅಹಮ್ಮದ್ – 601, ಸುಹರ್ಷ ಎಚ್.ಎಚ್- 600 ಹಾಗೂ ಮಲ್ಲಿಕಾರ್ಜುನ ಎಸ್.ಎಚ್-600 ಅಂಕಗಳನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳಾದ ಸೂರ್ಯಕಾಂತ್ ಪಾಟೀಲ್, ಕ್ಲಾರೆನ್ಸ್ ಡಿ’ಸೋಜ, ವೈಭವಿ ಎಮ್, ಆಯುಶ್ ಕಲ್ಲುಡಿ, ಪರಿಣಿತ್ ಗೌಡ ಬಿ.ಎಲ್, ಲೋಕೆಶ್ ಬಿ.ಎನ್, ದೀಕ್ಷಿತ ಕೆ.ಎಸ್. ಸುಹರ್ಷ ಎಚ್. ಎಚ್. ಮಲ್ಲಿಕಾರ್ಜುನ್ ಎಸ್.ಎಚ್. ಕೀರ್ತನ ವೈ.ಸಿ, ರಾಹುಲ್ ಜಂಬಗಿ, ಸಿದ್ಧರೂಢ ಶ್ರೀಶೈಲ, ತ್ವಿಶಾ ಎಸ್ ಭಂಡಾರಿ, ಕುಶಲ್ ಗೌಡ ಎಮ್.ಎಸ್. ಮಹಮ್ಮದ್ ಅಶೀಮ್, ಸೃಜನ್ ವಿ. ಗೋಕುಲ್ ಎಸ್, ಸಂಕೇತ್ ಎ.ಜಿ. ಯಶಸ್ವಿನಿ ವೈ.ಇ.ಬಶೀರ್ ಅಹಮ್ಮದ್, ದರ್ಶನ್ ಕಲ್ಲಯ್ಯ ಪೂಜಾರ್ – ಈ ವಿದ್ಯಾರ್ಥಿಗಳು 99 ಪರ್ಸಂಟೈಲ್ ಗಿಂತ ಅಧಿಕ ಅಂಕ ಪಡೆದಿದ್ದಾರೆ.

ಜನರಲ್ ಕೆಟಗರಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಹೈದ್ರಾಬಾದ್ ಕರ್ನಾಟಕ, ಗ್ರಾಮೀಣ ಕೋಟಾ, ಕನ್ನಡ ಮಾಧ್ಯಮ, ವಿಶಿಷ್ಟ ಚೇತನರು ಹಾಗೂ ಆರ್ಥಿಕ ಹಿಂದುಳಿದ ವರ್ಗದ ಕೋಟಾದಲ್ಲಿ ಸುಮಾರು 450ಕ್ಕೂ ಅಧಿಕ ವಿದ್ಯಾರ್ಥಿಗಳು ಸರಕಾರಿ ಕೋಟಾದಲ್ಲಿ ಎಂಬಿಬಿಎಸ್ ಸೀಟು ಪಡೆಯುವ ನಿರೀಕ್ಷೆ ಇದೆ.

ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಂ. ಮೋಹನ ಆಳ್ವ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಂ. ಸದಾಕತ್ ಹಾಗೂ ಆಡಳಿತಾಧಿಕಾರಿ ಪ್ರೊ. ಪ್ರದೀಪ ಕುಮಾರ್ ಎಂ. ಉಪಸ್ಥಿತರಿದ್ದರು.

Related posts

ಫ್ರೆಂಡ್ಸ್ ಇಲೆವೆನ್ ನಿಂದ ಪುಸ್ತಕ ವಿತರಣೆ

Madhyama Bimba

ಅಭಿನಯ ಜೀವನ ಕೌಶಲ್ಯ; ಎಲ್ಲ ಕ್ಷೇತ್ರಗಳಲ್ಲೂ ಅಗತ್ಯ: ವಿವೇಕ್ ಆಳ್ವ

Madhyama Bimba

ಜುಲೈ 26 ರಂದು ಪ್ರಸಾದ್ ನೇತ್ರಾಲಯದಲ್ಲಿ ಉಚಿತ ಲಾಸಿಕ್ ಲೇಸರ್ ಕಣ್ಣಿನ ತಪಾಸಣಾ ಶಿಬಿರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More