ಮೂಡುಬಿದಿರೆ

ಮೂಡುಬಿದಿರೆ ಸ್ಥಳಾಂತರಿತ ಶಾಖೆ ಜಿ. ಎಲ್. ಆಚಾರ್ಯ ಜುವೆಲರ್ಸ್ ಉದ್ಘಾಟನೆ

ಮೂಡುಬಿದಿರೆ : ಪುತ್ತೂರಿನ ಹೆಸರಾಂತ ಹಾಗೂ ದಕ್ಷಿಣ ಕರ್ನಾಟಕದ ವಿಶ್ವಾಸಾರ್ಹ ಚಿನ್ನಾಭರಣ ಸಂಸ್ಥೆ ಜಿ. ಎಲ್. ಆಚಾರ್ಯ ಜುವೆಲರ್ಸ್‌ನ ಮೂಡುಬಿದಿರೆಯ ಸ್ಥಳಾಂತರಿತ ಶಾಖೆಯನ್ನು ಎ. 12 ರಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಉದ್ಘಾಟಿಸಿದರು.


1957ರಲ್ಲಿ ಪುತ್ತೂರಿನಲ್ಲಿ ಆರಂಭಗೊಂಡ ಈ ಸಂಸ್ಥೆ ಸಮಾಜದ ಪರಿಕಲ್ಪನೆಗೆ ತಕ್ಕಂತೆ ಹೇಗೆ ಬದುಕಬೇಕು ಎಂಬುವುದನ್ನು ತೋರಿಸಿ ಕೊಟ್ಟಿದೆ. ಉದ್ದಿಮೆ ಮಾತ್ರವಲ್ಲದೆ ಸಮಾಜಕ್ಕೆ ತಕ್ಕಂತೆ ಈ ಸಂಸ್ಥೆ ಬೆಳೆದು ನಿಂತಿದೆ. ಈ ಸಂಸ್ಥೆ ಮತ್ತಷ್ಟು ಯಶಸ್ಸು ಕಾಣುವಂತಾಗಲಿ ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಬಂಗಾರ, ಬೆಳ್ಳಿಯ ಒಡವೆಗಳ ಸುಂದರ ಸಂಗ್ರಹ ಇಲ್ಲಿದೆ. ಮೂಡುಬಿದಿರೆಯ ಉತ್ತಮ ಮಲ್ಟಿಸ್ಟೋರ್ ಕಟ್ಟಡ ಇದಾಗಿದೆ. ಇದು ಮತ್ತಷ್ಟು ಜನಮನ್ನಣೆ ಪಡೆಯುವಂತಾಗಲಿ ಎಂದರು.

ಧನಲಕ್ಷ್ಮೀ ಕ್ಯಾಶೂಸ್‌ನ ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ., ನವಮಿ ಗ್ರೂಪ್ ಆಡಳಿತ ನಿರ್ದೇಶಕ ನಂದಕುಮಾರ್ ಕುಡ್ಡ ಜಿ.ಎಲ್. ಆಚಾರ್ಯಜುವೆಲರ್ಸ್‌ನಚೇರ್ಮನ್ ಬಲರಾಮ ಆಚಾರ್ಯ, ರಾಜೀವ ಬಲರಾಮ್, ನಿರ್ದೇಶಕರಾದ ಲಕ್ಷ್ಮೀ ಕಾಂತ ಆಚಾರ್ಯ, ಸುಧನ್ವ ಆಚಾರ್ಯ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ನವಮಿ ಪ್ಲಾಜಾ ಕಟ್ಟಡಕ್ಕೆ ಸ್ಥಳಾಂತರ : 2024ರಲ್ಲಿ ಮೂಡುಬಿದಿರೆಯಲ್ಲಿ ಆರಂಭಗೊಂಡಿದ್ದ ಶಾಖೆ ಈಗ ಬಸ್ ನಿಲ್ದಾಣದ ಮುಂಭಾಗದ ನವಮಿಪ್ಲಾಜಾ ಕಟ್ಟಡಕ್ಕೆ ಸ್ಥಳಾಂತರ ಗೊಂಡಿದೆ. ನೂತನ ಮಳಿಗೆ ಉದ್ಘಾಟನೆ ಸಲುವಾಗಿ ಎ.20ರ ವರೆಗೆ ಗ್ರಾಹಕರಿಗಾಗಿ ವಿಶೇಷ ಕೊಡುಗೆ ಗಳು ಲಭ್ಯವಿವೆ. 10 ಗ್ರಾಂ ಚಿನ್ನಾಭರಣ ಗಳ ಮೇಲೆ 5000 ರೂ. ರಿಯಾಯಿತಿ, ಬೆಳ್ಳಿ ಆಭರಣಗಳ ಮೇಲೆ ಪ್ರತೀ ಕೆ.ಜಿ.ಗೆ 6000ರೂ. ರಿಯಾಯಿತಿ, ವಜ್ರದ ಆಭರಣಗಳ ಮೇಲೆ ಪ್ರತೀ ಕ್ಯಾರಟ್‌ಗೆ 7000ರೂ. ನೀಡಲಾಗುತ್ತಿದೆ.

ಈ ನೂತನ ಮಳಿಗೆಯಲ್ಲಿ ಸಾಂಪ್ರ ದಾಯಿಕ ಹಾಗೂ ಆಧುನಿಕ ವಿನ್ಯಾಸ ಗಳ ಚಿನ್ನಾಭರಣಗಳು, ಬೆಳ್ಳಿ ಮತ್ತು ವಜ್ರಾಭರಣಗಳ ವೈವಿಧ್ಯಮಯ ಸಂಗ್ರಹ ಲಭ್ಯವಿದ್ದು, ಎಲ್ಲ ವಯೋ ಮಾನದ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಚಿನ್ನ ಬೆಳ್ಳಿಮತ್ತು ವಜ್ರಾಭರಣಗಳ ವಿನೂತನ ಕಲೆಕ್ಷನ್ ಗಳು ಇಲ್ಲಿ ಲಭ್ಯವಿವೆ. ವಿಶಾಲವಾದ ಪ್ರದರ್ಶನ ವ್ಯವಸ್ಥೆ ಸುಸಜ್ಜಿತ ಒಳಾಂಗಣ ವಿನ್ಯಾಸ ಮತ್ತು ಅತ್ಯಾಧುನಿಕ ಭದ್ರತ ವ್ಯವಸ್ಥೆಗಳು ಶೋರೂಂನ ಪ್ರಮುಖ ವೈಶಿಷ್ಟ್ಯಗಳಾಗಿವೆ ಎಂದು ಸಂಸ್ಥೆಯ ಮಾಲಕರು ತಿಳಿಸಿದರು.
ದೀಕ್ಷಾ ಬಂಗೇರ ನಿರೂಪಿಸಿದರು.

Related posts

ಜ 21:ಬೋರುಗುಡ್ಡೆ ಶ್ರೀ ಸತ್ಯನಾರಾಯಣ ದೇವಸ್ಥಾನದ ಗರ್ಭಗೃಹ ಶಿಲಾನ್ಯಾಸ

Madhyama Bimba

ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ  ವರ್ಧಂತ್ಯುತ್ಸವ ಗಣ್ಯರ ಶುಭಾಶಯ

Madhyama Bimba

 ಮಹಿಳೆ ನಾಪತ್ತೆ, ಪೊಲೀಸ್ ಸಂಪರ್ಕಿಸಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More