Blog

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ವೈದ್ಯರ ದಿನಾಚರಣೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ವಾರದ ವಿಶೇಷ ಸಭೆಯಲ್ಲಿ ವೈದ್ಯರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಳೆದ ಒಂದು ದಶಕಕ್ಕೂ ಹೆಚ್ಚು ವರ್ಷಗಳ ಅವಧಿಯಲ್ಲಿ ಡಾ. ಟಿ. ಎಂ. ಎ. ಪೈ. ರೋಟರಿ ಹಾಸ್ಪಿಟಲ್, ಕಾರ್ಕಳದಲ್ಲಿ ಕಮ್ಯುನಟಿ ಮೆಡಿಸಿನ್ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿದ್ದು, ಸದರಿ ಹಾಸ್ಪಿಟಲ್‌ನ ಮುಖ್ಯ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಈ ಪರಿಸರದಲ್ಲಿ ಸಾರ್ವಜನಿಕವಾಗಿ ಸರ್ವರ ಪ್ರಶಂಸೆಗೆ ಹಾಗೂ ಪ್ರೀತಿ ಪಾತ್ರರಾಗಿ, ಪ್ರಸ್ತುತ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ವರ್ಗಾವಣೆಗೊಂಡಿರುವ ಡಾ. ಕೀರ್ತಿನಾಥ ಬಲ್ಲಾಳ್‌ರವರನ್ನು ಸನ್ಮಾನಿಸಲಾಯಿತು.


ಸನ್ಮಾನ ಸ್ವೀಕರಿಸಿ ಡಾ. ಕೀರ್ತಿನಾಥ ಬಲ್ಲಾಳ್ ರವರು ಮಾತನಾಡಿ ಕಾರ್ಕಳದಲ್ಲಿ ವೈದ್ಯಕೀಯ ವೃತ್ತಿಯಲ್ಲಿ ತಾವು ತೊಡಗಿಸಿಕೊಂಡ ಅವಧಿಯನ್ನು ನೆನಪಿಸಿಕೊಂಡರು.

ಪೂರ್ವ ಅಧ್ಯಕ್ಷರಾದ ರೊ. ಸುರೇಂದ್ರ ನಾಯಕ್‌ರವರು ಸನ್ಮಾನಿತರ ಪರಿಚಯಗೈದು ರೋಟರಿ ಕ್ಲಬ್ ಹಾಗೂ ರೋಟರಿ ಹಾಸ್ಪಿಟಲ್ ನಡುವಿನ ಅವಿನಾಭಾವ ಸಂಬಂಧವನ್ನು ಪ್ರಸ್ತಾಪಿಸಿ, ಕ್ಲಬ್ ನ ‘ಗ್ಲೋಬಲ್ ಗ್ರಾಂಟ್’ ಮೂಲಕ ಆಸ್ಪತ್ರೆಗೆ ಒದಗಿಸಿದ ‘ಟ್ರೋಮಾ ಸೆಂಟರ್ ’ ವ್ಯವಸ್ಥೆ ಬಗ್ಗೆ ಡಾ. ಕೀರ್ತಿನಾಥ ಬಲ್ಲಾಳ್ ರವರು ನೀಡಿದ ಸಹಕಾರಕ್ಕಾಗಿ ಆಭಾರ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಪ್ರಸ್ತುತ ರೋಟರಿ ಹಾಸ್ಪಿಟಲ್ ಕಾರ್ಕಳ ಇದರ ಮುಖ್ಯ ವೈದ್ಯಾಧಿಕಾರಿ ನಿಯುಕ್ತರಾಗಿರುವ ಡಾ.ಸಂಜಯ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ಡಾ.ಕೀರ್ತಿನಾಥ್ ಬಲ್ಲಾಳ್ ರವರ ಕಾರ್ಯ ವೈಖರಿ, ಸಹ ವೈದ್ಯರು ಹಾಗೂ ಸಿಬ್ಬಂದಿಗಳ ನಡುವಿನ ಒಡನಾಟಗಳ ಬಗ್ಗೆ ಮಾತುಗಳನ್ನಾಡಿದರು.

ಈ ವಿಶೇಷ ಆಹ್ವಾನಿತರಾಗಿ ರೋಟರಿ ಆಸ್ಪತ್ರೆಯ ವಿವಿಧ ವಿಭಾಗಗಳ ವೈದ್ಯರು ಉಪಸ್ಥಿತರಿದ್ದು ಅವರನ್ನು ಗುರುತಿಸಿ ಗೌರವಿಸಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಕ್ಲಬ್‌ನ ಮಾರ್ಗದರ್ಶಕರಾದ ರೊ. ಡಾ. ಭರತೇಶ್ ಆದಿರಾಜ್ ರವರು ರೋಟರಿ ಸಂಸ್ಥೆ, ವೈದ್ಯಕೀಯ ವೃತ್ತಿ ಹಾಗೂ ಸ್ಥಳೀಯ ಆಸ್ಪತ್ರೆಗಳಿಗೆ ರೋಟರಿ ಕ್ಲಬ್‌ಗಳ ಕೊಡುಗೆಗಳ ಬಗ್ಗೆ ಪ್ರಸ್ತಾಪಿಸಿ ಡಾ.ಕೀರ್ತಿನಾಥ ಬಲ್ಲಾಳ್ ರವರ ವ್ಯಕ್ತಿತ್ವವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ರೊ. ಸುರೇಂದ್ರ ನಾಯಕ್ ರವರ ತಂದೆಯವರ 81ನೇ ಹುಟ್ಟು ಹಬ್ಬವನ್ನು ಅವರ ಕುಟುಂಬದವರು, ಮುಖ್ಯ ಅತಿಥಿಗಳು ಹಾಗೂ ಎಲ್ಲಾ ರೋಟರಿ ಬಂಧುಗಳ ಸಮ್ಮುಖದಲ್ಲಿ ಆಚರಿಸಲಾಯಿತು.

ರೊ.ಪ್ರಶಾಂತ್ ಬೆಳಿರಾಯ ಉಪಸ್ಥಿತರಿದ್ದರು.

ಸಭಾಧ್ಯಕ್ಷರಾದ ರೊ.ಮಂಜುನಾಥ್ ಹೆಗ್ಡೆ ಸ್ವಾಗತಿಸಿದರು. ಆನೆಟ್ ಕು.ಅವನಿ ಉಪಾಧ್ಯ ಪ್ರಾರ್ಥಿಸಿದರು. ರೊ.ಚಿರಾಗ್ ರಾವ್ ರೋಟರಿ ಮಾಹಿತಿ ಓದಿದರು. ರೊ.ಸುಬ್ರಮಣ್ಯ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರೊ. ಗಣೇಶ್ ಬರ್ಲಾಯ ಧನ್ಯವಾದವಿತ್ತರು.

Related posts

ನಿಂಜೂರು ಜಗನ್ನಾಥ ಶೆಟ್ಟಿ ನಿಧನ

Madhyama Bimba

ಕೌಡೂರು ಯುವಸಂಗಮ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಮತ್ತು ಪ್ರತಿಭಾ ಪುರಸ್ಕಾರ

Madhyama Bimba

ಪರಶುರಾಮ ಥೀಮ್ ಪಾರ್ಕ್ ನಲ್ಲಿ ಕಳ್ಳತನ ಇಬ್ಬರ ಬಂಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More