ಸಿಐಡಿ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನೂ ತೆರವುಗೊಳಿಸಿ ಆದೇಶ
ಹೈಕೋರ್ಟ್ ಆದೇಶ ಸ್ವಾಗತಾರ್ಹ- ಶುಭದರಾವ್
ಪರಶುರಾಮ ಕಂಚಿನ ಪ್ರತಿಮೆ ಎಂದು ನಂಬಿಸಿ ನಕಲಿ ಪ್ರತಿಮೆ ನಿರ್ಮಾಣ ಮಾಡಿದ ಪರಿಣಾಮ ಕಾರ್ಕಳ ನಗರ ಠಾಣೆಯಲ್ಲಿ ತನ್ನ ವಿರುದ್ದ ದಾಖಲಾಗಿರುವ ಎಫ್ಐಆರ್ ರದ್ದು ಮಾಡಬೇಕು ಎಂದು ಪ್ರತಿಮೆ ನಿರ್ಮಾತ ಕೃಷ್ಣ ನಾಯಕ್ ಸಲ್ಲಿಸಿರುವ ಮೇಲ್ಮನವಿಯನ್ನು ತಿರಸ್ಕರಿಸಿ ಹೈಕೋರ್ಟ್ ನೀಡಿದ ತೀರ್ಪನ್ನು ಗೌರವ ಪೂರ್ವಕವಾಗಿ ಸ್ವಾಗತಿಸುತ್ತೇವೆ, ಹಾಗೂ ಪ್ರತಿಮೆ ಬಗ್ಗೆ ಮೊದಲಿನಿಂದಲೂ ನಾವು ಮಾಡುತ್ತಿದ್ದ ಅರೋಪ ಸತ್ಯವಾದದ್ದು ಎಂಬುದು ನ್ಯಾಯಾಧೀಶರು ತನ್ನ ಆದೇಶದಲ್ಲಿ ನೀಡಿದ ವಿವರಣೆಯಿಂದ ಸ್ಪಷ್ಟವಾಗುತ್ತದೆ ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ತಿಳಿಸಿದ್ದಾರೆ.
ಕಳಪೆ ಗುಣಮಟ್ಟದ ಮೂರ್ತಿ ತಯಾರಿಗೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಅದ್ದರಿಂದ ಪ್ರಕರಣದ ತನಿಖೆ ನಡೆಸುವುದು ಅಗತ್ಯತೆ ಇದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಧೀಶರು ಸಿಐಡಿ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನೂ ತೆರವುಗೊಳಿಸಿ ನೀಡಿದ ಆದೇಶ ಸತ್ಯಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಮೆ ನಿರ್ಮಾಣದ ಪ್ರಕರಣ ಕೇವಲ ಭ್ರಷ್ಠಾಚಾರ ಮಾತ್ರವಲ್ಲದೆ ಇದೊಂದು ಧಾರ್ಮಿಕ ನಂಬಿ ದ್ರೋಹದ ಪ್ರಕರಣವಾಗಿದೆ ಶಾಸಕರೊಬ್ಬರು ತನ್ನ ರಾಜಕೀಯ ತೆವಲಿಗೆ ಮುಗ್ದ ಜನರು, ಅಧಿಕಾರಿಗಳು, ಹಾಗೂ ಕಲಾವಿದರನ್ನು ಹೇಗೆ ಬಳಸಿಕೊಳ್ಳತ್ತಾರೆ ಮತ್ತು ಆ ಮೂಲಕ ಅವರನ್ನು ಹೇಗೆ ಬಲಿ ಪಡೆಯುತ್ತಾರೆ ಎಂಬುದಕ್ಕೆ ಈ ಪ್ರಕರಣ ಬಹುದೊಡ್ಡ ಸಾಕ್ಷಿಯಾಗಿದೆ, ಪ್ರತಿಮೆ ನಿರ್ಮಾತ ಕೃಷ್ಣ ನಾಯಕ್ ಮತ್ತು ಅಮಾನತು ಆಗಿರುವ ನಿರ್ಮಿತಿ ಕೇಂದ್ರ ಅಧಿಕಾರಿಯನ್ನು ತಕ್ಷಣ ಬಂಧಿಸಿ ವಿಚಾರಣೆ ನಡೆಸಿದರೆ ಉಳಿದ ಸತ್ಯವೂ ಹೊರಬರುತ್ತದೆ ಉಡುಪಿ ಎಸ್ಪಿಯವರು ಅದನ್ನು ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.
ಸುಳ್ಳು ಸ್ವಲ್ಪ ಸಮಯ ವಿಜ್ರಂಬಿಸಬಹುದು ಆದರೆ ಸತ್ಯವನ್ನು ಹೆಚ್ಚು ದಿನಗಳ ಕಾಲ ಮುಚ್ಚಿಡಲು ಸಾದ್ಯವಿಲ್ಲ ಅದೇ ಪ್ರಕೃತಿ ನಿಯಮ ಹೈಕೋರ್ಟ್ ನೀಡಿರುವ ಈ ಆದೇಶದಿಂದ ಉಳಿದಿರುವ ಎಲ್ಲಾ ಸತ್ಯ ಹೊರ ಬರುವ ಸಂಪೂರ್ಣ ಬರವಸೆ ಇದೆ ಎಂದರು
ಕಾರ್ಕಳ ಶಿಲ್ಪ ಕಲೆಯ ತವರೂರು ವಿಶ್ವದ ಅನೇಕ ಕಡೆಗಳಲ್ಲಿ ಪೂಜಿಸಲ್ಪಡುವ ಮತ್ತು ಗೌರವಿಸಲ್ಪಡುವ ಪ್ರತಿಮೆಗಳು ,ಮೂರ್ತಿಗಳು ನಮ್ಮೂರಿನಲ್ಲೇ ನಿರ್ಮಾಣವಾದ ಭವ್ಯ ಇತಿಹಾಸವಿದೆ, ಅಂತಹ ಅನುಭವಿ ಶಿಲ್ಪಿಗಳಿಂದ ಪ್ರತಿಮೆ ನಿರ್ಮಾಣ ಮಾಡದೆ ಏನೂ ತಿಳಿಯದ ವ್ಯಕ್ತಿಯ ಬಳಿ ಪ್ರತಿಮೆ ಮಾಡಿಸಿ ಶಿಲ್ಪ ಕಲೆ ಹಾಗೂ ಶಿಲ್ಪಿಗಳಿಗೂ ಮಾಡಿದ ಅವಮಾನವಾಗಿದೆ ಎಂದು ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.