ಕಾರ್ಕಳ

ಶಿರ್ಲಾಲಿನಲ್ಲಿ ಆ. 16ರಂದು ದ್ವಿತೀಯ ವರ್ಷದ ಕುಣಿತ ಭಜನಾ ಸ್ಪರ್ಧೆ

ಯವವಾಹಿನಿ (ರಿ) ಕಾರ್ಕಳ ಘಟಕ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣರು ಸಮಾಜ ಸೇವಾ ಸಂಘ (ರಿ.) ಶಿರ್ಲಾಲು ಇವರ ಸಹಕಾರದೊಂದಿಗೆ ಶಿವ ಶಿವ ಎನ್ನಿರೋ…! ಕುಣಿದು ಭಜಿಸಿರೋ- 2026 ದ್ವಿತೀಯ ವರ್ಷದ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಬಿಲ್ಲವ ಸಂಘಗಳ ಕುಣಿತ ಭಜನಾ ಸ್ಪರ್ಧೆ ಆ. 16 ರವಿವಾರದಂದು ಬೆಳಿಗ್ಗೆ ಗಂಟೆ 9.00ರಿಂದ ಶಿರ್ಲಾಲು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಜರಗಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ನೇರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಕಾರ್ಕಳ ಘಟಕದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಆನೆಕೆರೆ ಶ್ರೀ ಕೃಷ್ಣ ಕ್ಷೇತ್ರದ ಆಡಳಿತ ಮೊಕ್ತಸರರಾದ ಭಾಸ್ಕರ ಎಸ್. ಕೋಟ್ಯಾನ್, ಕಾರ್ಕಳ ಕಾಳಿಕಾಂಬ ವೈದಿಕರಾದ ಪ್ರಸಾದ್ ಭಟ್, ತೆಳ್ಳಾರು ಶ್ರೀ ದುರ್ಗಾದೇವಿ ಮಂದಿರದ ಅನುವಂಶಿಕ ಆಡಳಿತ ಮೋಕ್ತಸರರಾದ ಸುಶಾಂತ್ ಸುಧಾಕರ್, ಶಿರ್ಲಾಲು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣ ಪೂಜಾರಿ, ದುರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಯಶೋಧರ್ ಎಂ., ಮಂಗಳೂರು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶುಭಕರ್, ಬೋಳ ಉದ್ಯಮಿ ಸತೀಶ್ ಪೂಜಾರಿ, ಮುಲ್ಕಿ ಉದ್ಯಮಿ ಚೇತನ್ ಕೆ. ಕೋಟ್ಯಾನ್ ಅತ್ತೂರು, ಅಜೆಕಾರು ಉದ್ಯಮಿ ತಾರಾನಾಥ್ ಪೂಜಾರಿ, ಕಾರ್ಕಳ ನೆಕ್ಲಾಜೆ ಸಾಫ್ಟ್‌ವೇರ್‌ನ ನಿರ್ದೇಶಕರಾದ ನವೀನ್ ಸುವರ್ಣ, ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರಭಾಕರ ಬಂಗೇರ, ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ತಾರಾನಾಥ್ ಕೋಟ್ಯಾನ್ ಸೂರಾಲು, ಉದ್ಯಮಿ ಸುಶಾಂತ್ ಬಜಗೋಳಿ ಭಾಗವಹಿಸಲಿದ್ದಾರೆ.

 

Related posts

ಕಾರ್ಕಳ ಜ್ಞಾನಸುಧಾ : ವಿಶ್ವಯೋಗ ದಿನಾಚರಣೆ

Madhyama Bimba

ಐಶ್ವರ್ಯವಿಲ್ಲದೆಯೂ ಸಮಾಜಕ್ಕೆ ಕೊಡುಗೆ ನೀಡಬಹುದು ಎಂಬುದನ್ನು ಶೇಖರ್ ಅಜೆಕಾರು ತೋರಿಸಿಕೊಟ್ಟರು: ಡಾ. ಮೋಹನ್ ಆಳ್ವ

Madhyama Bimba

ಕಾರ್ಕಳ ತಾಲೂಕು ಮಹಿಳಾ ಒಕ್ಕೂಟ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More