ಹೆಬ್ರಿ: ಶಿವಪುರ ಗ್ರಾಮದ ಹಾಲಿನ ಡೈರಿ ಬಳಿ ಬಸ್‌ಗೆ ಮೋಟಾರ್ ಸೈಕಲ್ ಡಿಕ್ಕಿಯಾದ ಘಟನೆ ಅ. 07ರಂದು ನಡೆದಿದೆ.
ಉಡುಪಿಯಿಂದ ಭದ್ರಾವತಿ ಕಡೆಗೆ ಹೋಗುತ್ತಿದ್ದ ಬಸ್‌ಗೆ ಮೋಟಾರ್ ಸೈಕಲ್ ಸವಾರ ಫಕೀರಪ್ಪ ಸಹಸವಾರನೊಂದಿಗೆ ಅತೀ ವೇಗದಿಂದ ಸವಾರಿ ಮಾಡಿಕೊಂಡು ಬಂದು ಎದುರಿನಿಂದ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ಪರಿಣಾಮ ಸವಾರರು ಗಾಯಗೊಂಡು ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
