ಹೆಬ್ರಿ: : ಸ್ಕೂಟಿ ಮತ್ತು ಆಟೋರಿಕ್ಷಾ ನಡುವೆ ಮುಖಾಮುಖಿ ಅಪಘಾತವಾದ ಘಟನೆ ಅ. 07ರಂದು ವರದಿಯಾಗಿದೆ.
ಸ್ಕೂಟಿ ಸವಾರ ಕಾರ್ತಿಕ್ (20) ಗಾಯಗೊಂಡವರು.
ಕಾರ್ತಿಕ್ ಪ್ಲಿಪ್ ಕಾರ್ಟ್ ಪಾರ್ಸಲ್ ಕೊಡಲು ಹೆಬ್ರಿಯಿಂದ ಶಿವಪುರ ಕಡೆಗೆ ಹೋಗುತ್ತಿರುವಾಗ ಹೆಬ್ರಿ ಕೆಳಪೇಟೆ ಬಳಿ ಶಿವಪುರ ಕಡೆಗೆ ಆಟೋ ರಿಕ್ಷಾವನ್ನು ಚಾಲಕ ಉದಯ ವಿರುದ್ದ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ಪರಿಣಾಮ ಕಾರ್ತಿಕ್ ಗಾಯಗೊಂಡು ಚಿಕಿತ್ಸೆಗಾಗಿ ಹೆಬ್ರಿ ಹೆಲ್ತ್ ಕೇರ್‌ನಲ್ಲಿ ದಾಖಲಾಗಿರುತ್ತಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
