ಕಾರ್ಕಳ

ಜೇಸಿ ಇಂಟರ್‌ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಕಾರ್ಕಳ: ಜೇಸಿ ಇಂಟರ್‌ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವು ಸ್ವರಾಜ್ ಮೈದಾನದಲ್ಲಿ ನಡೆಯಿತು. ಕಾರ್ಕಳದ ಉದ್ಯಮಿ ಮಹಾವೀರ ಹೆಗ್ಡೆಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು “ಜೇಸಿ ವಿದ್ಯಾಸಂಸ್ಥೆಯು ಇತರ ಖಾಸಗಿ ಶಾಲೆಗಳಿಗಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತೋಷದ ಸಂಗತಿ. ಇಲ್ಲಿ ವಿದ್ಯಾರ್ಥಿಗಳ ಮೇಲಿನ ಕಾಳಜಿ ಮತ್ತು ಶಿಸ್ತು ಮೆಚ್ಚುವಂತದ್ದು. ಜೀವನದಲ್ಲಿ ಸೋಲು-ಗೆಲುವು, ಏಳು-ಬೀಳುಗಳು ಸಹಜ. ಕ್ರೀಡಾ ಕ್ಷೇತ್ರದಲ್ಲಿಯೂ ಈ ಶಾಲೆಯು ಕಾರ್ಕಳ ಮಾತ್ರವಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವುದು ಹೆಮ್ಮೆಯ ವಿಚಾರ. ಎಬಿಸಿಡಿಯಿಂದ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಚಲನಚಿತ್ರ ಹಾಡುಗಳ ಮೂಲಕವೂ ಶಾಲೆ ಗಮನ ಸೆಳೆಯುತ್ತಿದೆ. ವಂದನಾ ರೈ ಅವರು ತಮ್ಮ ಸಾಧನೆಯ ಮೂಲಕ ಶಾಲೆ, ಶಿಕ್ಷಕರು ಹಾಗೂ ಇಡೀ ಸಂಸ್ಥೆಯನ್ನು ಜನಪ್ರಿಯಗೊಳಿಸಿರುವುದು ಸಂತಸದ ಸಂಗತಿ. ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ,” ಎಂದು ಶುಭ ಹಾರೈಸಿದರು.

ರಾಷ್ಟ್ರೀಯ ಯೋಗ ತರಬೇತುದಾರ ನರೇಂದ್ರ ಕಾಮತ್ ಮಾತನಾಡಿ, “ಒಂದು ಶಾಲೆಯ ಸಮಗ್ರ ಅಭಿವೃದ್ಧಿಗೆ ಕ್ರೀಡೆ, ವಾರ್ಷಿಕೋತ್ಸವ ಹಾಗೂ ಶೈಕ್ಷಣಿಕ ಪ್ರವಾಸಗಳು ಅಗತ್ಯ. ಇದಕ್ಕೆ ಜೇಸಿ ಶಾಲೆಯೇ ಪ್ರತ್ಯಕ್ಷ ಸಾಕ್ಷಿ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್‌ನಲ್ಲಿಯೂ ಸಾಧನೆ ಮಾಡಲಿ. ಅತ್ಯಂತ ಶಿಸ್ತುಬದ್ಧವಾಗಿ ಕ್ರೀಡಾಕೂಟವನ್ನು ಆಯೋಜಿಸಿದ ಸಂಸ್ಥೆಯನ್ನು ಅಭಿನಂದಿಸುತ್ತೇನೆ. ಈ ಶಾಲೆಯಲ್ಲಿ ಉತ್ತಮ ತಂಡದ ಕೆಲಸವಿದೆ,” ಎಂದರು.

 

ಜೇಸಿ ಚಿತ್ತರಂಜನ್ ಶೆಟ್ಟಿ ಮಾತನಾಡಿ, “ ನರೇಂದ್ರ ಕಾಮತ್ ಅವರು ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಯೋಗ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಮಹಾವೀರ ಹೆಗ್ಡೆಯವರು ಸಂಸ್ಥೆಯ ಪೋಷಕರಷ್ಟೇ ಅಲ್ಲದೆ, ಜೇಸಿ ಸಂಸ್ಥೆಗೆ ಅಪಾರ ಕೊಡುಗೆ ನೀಡಿದವರು. ನಮ್ಮ ಶಾಲೆಯ ಶ್ರಾವಣಿ ಅವರು ಖೇಲೋ ಇಂಡಿಯಾ ತಂಡಕ್ಕೆ ಆಯ್ಕೆಯಾಗಿರುವುದು ಸಂತೋಷದ ವಿಷಯ. ಡಿವಿಜನಲ್ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲು ಹೆಮ್ಮೆಯಾಗುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ವಿಜೇತರೇ. ಈ ಅನುಭವವು ನಿಮ್ಮ ಜೀವನದ ಯಶಸ್ಸಿಗೆ ದಾರಿಯಾಗಲಿ,” ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಹಾವೀರ ಹೆಗ್ಡೆಯವರು ಧ್ವಜಾರೋಹಣ ನೆರವೇರಿಸಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು.

ಈ ಸಂದರ್ಭದಲ್ಲಿ ಜೇಸಿ ಪದ್ಮಪ್ರಸಾದ್ ಜೈನ್, ಜೇಸಿ ಮುರಳೀಧರ್ ಭಟ್, ಜೇಸಿ ಅವಿನಾಶ್ ಶೆಟ್ಟಿ, ಜೇಸಿ ಜಯಕುಮಾರ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಮಮತಾ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಕಾರ್ಕಳ ಶ್ರೀ ಶಾರದಾ ಪೂಜಾ ಸಮಿತಿಯ ನೂತನ ಕಾರ್ಯಾಲಯ ಉದ್ಘಾಟನೆ

Madhyama Bimba

ಹೆಬ್ರಿ: ವ್ಯಕ್ತಿ ನಾಪತ್ತೆ

Madhyama Bimba

ಅಜೆಕಾರು ಗುಡ್ಡೆಅಂಗಡಿ ಶ್ರೀ ಹರಿವಾಯು ಕೃಪಾಕ್ಕೆ ಪೇಜಾವರ ಶ್ರೀ ಭೇಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More