ಕಾರ್ಕಳ ತಾಲೂಕು ಮಹಿಳಾ ಒಕ್ಕೂಟ (ರಿ) ಇದರ 2023 – 24ನೇ ಸಾಲಿನ ಮಹಾಸಭೆಯು ಒಕ್ಕೂಟದ ಕಚೇರಿಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಯಶೋಧ ಎಸ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿತು.
2023 -24ನೇ ಸಾಲಿನ ವರದಿಯನ್ನು ಅರುಂಧತಿ ಬಿ ಆಚಾರ್ ವಾಚಿಸಿದರು. ಸ್ವಾಗತವನ್ನು ಜಯಂತಿ ಶೆಟ್ಟಿ ನೆರವೇರಿಸಿದರು.
2024 -25 ನೇ ಸಾಲಿನ ಅಧ್ಯಕ್ಷರಾಗಿ ಶ್ರೀಮತಿ ಯಶೋಧ ಎಸ್. ಶೆಟ್ಟಿ ಸರ್ವಾನುಮತದಿಂದ ಪುನರಾಯ್ಕೆಗೊಂಡರು.
ಕಾರ್ಯದರ್ಶಿಯಾಗಿ, ಅರುಂಧತಿ ಬಿ ಆಚಾರ್ ಉಪಾಧ್ಯಕ್ಷರಾಗಿ, ಸಾವಿತ್ರಿ ಮನೋಹರ್ ಕೋಶಾಧಿಕಾರಿಯಾಗಿ, ಶ್ರೀಲತ ಶರ್ಮ ಜೊತೆ ಕಾರ್ಯದರ್ಶಿಯಾಗಿ ಶೋಭಾ ಪ್ರಸಾದ್ ಕಾರ್ಯಕಾರಿ ಸಮಿತಿಯಲ್ಲಿ ರತ್ನಾವತಿ ನಾಯಕ್ ,ಶಾಂತ ಕೆ,ಜಯಂತಿ ಶೆಟ್ಟಿ ,ವಸಂತಿ ಸುವರ್ಣ ,ಜ್ಯೋತಿ ಲಕ್ಷ್ಮಿ, ಕಾಂತಿ ಶೆಟ್ಟಿ ,ಆಯ್ಕೆಗೊಂಡರು.
ವಿವಿಧ ಮಹಿಳಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ರತ್ನಾವತಿ ಧನ್ಯವಾದ ನೀಡಿದರು.ಮಹಿಳಾ ಒಕ್ಕೂಟದ ಮಹಾಸಭೆಯಲ್ಲಿ ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಹಾಗೂ ಶಿಶು ಪಾಲನ ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು .ಮಹಿಳಾ ಒಕ್ಕೂಟದಲ್ಲಿ ಮಹಿಳಾ ಸಾಂತ್ವನ ಕೇಂದ್ರ ಹಾಗೂ ಶಿಶು ಪಾಲನ ಕೇಂದ್ರ ಉಚಿತವಾಗಿ ಲಭ್ಯವಿದೆ ಎಂದು ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದರು.