Blog

ಶಿಲ್ಪಿ ಕೃಷ್ಣ ನಾಯಕ್ ಮೇಲ್ಮನವಿ ತಿರಸ್ಕಾರ

ಕಾರ್ಕಳದಲ್ಲಿ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿದ  ಶಿಲ್ಪಿ ಕೃಷ್ಣ ನಾಯಕ್ ರವರ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣವನ್ನು  ವಜಾಗೊಳಿಸಿಲು ನಿರಾಕರಿಸಿದ ಮಾನ್ಯ ಉಚ್ಛ ನ್ಯಾಯಾಲಯ:


ಕಾರ್ಕಳ ತಾಲೂಕಿನ ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ನಲ್ಲಿ ನಿರ್ಮಿಸಿರುವ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿದ  ಶಿಲ್ಪಿ ಕೃಷ್ಣ ನಾಯಕ್ ರವರ ವಿರುದ್ಧ ಕೃಷ್ಣ ಶೆಟ್ಟಿ ಯವರು ನೀಡಿದ ದೂರಿನ ಆಧಾರದ ಮೇಲೆ  ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣದ ವಿರುದ್ಧ ಕೃಷ್ ಆರ್ಟ್ ವರ್ಲ್ಡ್ ನ ಕೃಷ್ಣ ನಾಯಕ್ ರವರು ಉಚ್ಛ ನ್ಯಾಯಾಲದಲ್ಲಿ ಸಲ್ಲಿಸಿದ ಮೇಲ್ಮನವಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಏಕ ಸದಸ್ಯ ಪೀಠ ಇಂದು ತಿರಸ್ಕಾರ ಮಾಡಿ ಆದೇಶ ಹೊರಡಿಸಿದೆ.


      ಕೃಷ್ಣ ಶೆಟ್ಟಿ ಯವರ ಪರವಾಗಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಬೆಂಗಳೂರಿನ ವಿ ಕೆ ಶ್ರೀಕಾಂತ್ ರವರು ವಾದ ವನ್ನು ಮಂಡಿಸಿರುತ್ತಾರೆ. ಆರೋಪಿ ಪರ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ರವರು, ನಿರ್ಮಿತಿ ಕೇಂದ್ರದ ಪರ ದಿನೇಶ್ ಹೆಗ್ಡೆ ಉಳಿಪಾಡಿ ಹಾಗೂ ಸರಕಾರದ ಪರವಾಗಿ ಬಿ ಏನ್ ಜಗದೀಶರವರು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿರುತ್ತಾರೆ.

Related posts

ಮತದಾರ ಪಟ್ಟಿ ಪರಿಷ್ಕರಣೆ ವೋಟ್ ಚೋರಿದಾರರಿಗೆ ಆತಂಕ: ಸುನಿಲ್ ಕುಮಾರ್

Madhyama Bimba

ಮಲೆನಾಡು ರಕ್ಷಣಾ ಸೇನೆಯಿಂದ ಪಾದಯಾತ್ರೆ ಮಾಡುವವರಿಗಾಗಿ ಉಚಿತ ಆಂಬುಲೆನ್ಸ್ ಸೇವೆ

Madhyama Bimba

ಪದ್ಮನಾಭ ಭಟ್ ಮುನಿಯಾಲು ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More