ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ನಾಲ್ಕು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗೌರವ ಕಾರ್ಯಕ್ರಮ ನ. 26ರಂದು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರುವಾಜೆ, ಕಾರ್ಕಳ ಇಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು ವಿದ್ಯಾರ್ಥಿ, ಉದಯೋನ್ಮುಖ ಸಾಹಿತಿ/ಕವಯತ್ರಿ ಕುಮಾರಿ ಅವನಿ ಉಪಾಧ್ಯ ಇವರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಂಸ್ಥೆಯ ಮಾರ್ಗದರ್ಶಕರಾದ ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ.ಭರತೇಶ್ ಆದಿರಾಜ್, ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಉಪೇಂದ್ರ ವಾಗ್ಲೆ, ಆನ್ಸ್ ಅಧ್ಯಕ್ಷೆ ಶರ್ಮಿಳಾ ರಮೇಶ್ ಶೆಟ್ಟಿ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕುಮಾರಿ ಸಾನ್ವಿ ಶೆಟ್ಟಿ, ರೆಂಜಾಳ (100ಮೀ ಓಟ-ರಾಜ್ಯ ಮಟ್ಟದ ಆಟಗಾರ್ತಿ), ಕಾರ್ಕಳ ಪೆರುವಾಜೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸೃಜನ್ ಡಿ (600ಮೀ ರಾಜ್ಯ ಮಟ್ಟದ ಆಟಗಾರ), ಕುಮಾರಿ ಭುವನೇಶ್ವರಿ, ಕಾರ್ಕಳ (ಭಾರ ಎತ್ತುವ ಸ್ಪರ್ಧೆ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ), ಕುಮಾರಿ ಆರಾಧ್ಯ ಕಾರ್ಕಳ (ಚೇತನ ವಿಶೇಷ ಶಾಲೆ- ನೃತ್ಯ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಬಹುಮಾನ)ರನ್ನು ಗೌರವಿಸಲಾಯಿತು.
ಕುಮಾರಿ ಸೃಷ್ಟಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಧಾರಿಣಿ ಉಪಾಧ್ಯ ಪ್ರಾರ್ಥಿಸಿದರು. ಮಾಧವಿ ಕೆ ವಂದಿಸಿದರು.