ಕಾರ್ಕಳ: ಬೆಳ್ಮಣ್‌ನಲ್ಲಿ 10 ಹುಂಜಗಳನ್ನು ಕೋಳಿ ಅಂಕದ ಹುಚ್ಚು ಇರುವ ವ್ಯಕ್ತಿಗಳು ಕಳವು ಮಾಡಿದ ಘಟನೆ ವರದಿಯಾಗಿದೆ.
ಇನ್ನಾದ ಉದಯ (53) ಎಂಬವರು ಬೆಳ್ಮಣ್ ಗ್ರಾಮದ ಚರ್ಚ್ ಬಳಿ ದಿವಾಕರ ಎಂಬವರ ಜಾಗದಲ್ಲಿ ಶೆಡ್ ಮಾಡಿ ಮಾರಾಟ ಮಾಡುವ ಕೋಳಿ ಹುಂಜಗಳನ್ನು ಸಾಕುತ್ತಿದ್ದರು.
ದಿನಾಂಕ 26.11.2024 ರಂದು ಸಂಜೆ 5 ಗಂಟೆಗೆ ಕೋಳಿಗಳನ್ನು ಕಬ್ಬಿಣದ ಗೂಡಿನಲ್ಲಿ ಹಾಕಿ ಮನೆಗೆ ಹೋಗಿದ್ದು, ದಿನಾಂಕ 27.11.2024 ರಂದು ಬೆಳಿಗ್ಗೆ 09.00 ಗಂಟೆಗೆ ಬಂದು ನೋಡಿದಾಗ 21 ಕೋಳಿಗಳ ಪೈಕಿ 10 ಹುಂಜ ಕೋಳಿಗಳನ್ನು ಶೆಡ್‌ನ ಮೇಲಿನ ಶೀಟ್‌ನ ಹುಕ್‌ನ್ನು ಯಾರೋ ಕಳ್ಳರು ಬಿಚ್ಚಿ ಶೀಟನ್ನು ಸರಿಸಿ ಶೆಡ್‌ನ ಒಳಪ್ರವೇಶಿಸಿ ರೂಪಾಯಿ 30000/ ಮೌಲ್ಯದ 10 ಹುಂಜಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.