ಕಾರ್ಕಳ

ಮೂಡುಬಿದಿರೆ ಸ್ವಸ್ತಿಶ್ರೀ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಕಾರ್ಯಗಾರ

ಅಧಿವಕ್ತಾ ಪರಿಷತ್ ಕರ್ನಾಟಕ-ದಕ್ಷಿಣ ಪ್ರಾಂತ ಮೂಡುಬಿದಿರೆ ಘಟಕದ ಕಾನೂನು ಕಾರ್ಯಗಾರ ಸ್ವಸ್ತಿಶ್ರೀ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ನ್ಯಾಯವಾದಿ ಮತ್ತು ಎಂ.ಸಿ.ಎಸ್ ಬ್ಯಾಂಕ್ ಮೂಡುಬಿದಿರೆ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಉದ್ಘಾಟಿಸಿದರು.


ನಮ್ಮ ದೇಶದ ಸಂವಿಧಾನ ಪ್ರಪಂಚದಲ್ಲಿ ಅತೀ ಉತ್ತಮವಾದ ಸಂವಿಧಾನವಾಗಿರುತ್ತದೆ. ಅದು ನಮ್ಮ ದೇಶದ ಶ್ರೇಷ್ಠ ಕಾನೂನು ಆಗಿರುತ್ತದೆ. ಭಾರತದ ಪ್ರಜಾಪ್ರಭುತ್ವ ಸುಗಮವಾಗಿ ಕಾರ್ಯ ನಿರ್ವಹಿಸಲು ಸಂವಿಧಾನದ ಚೌಕಟ್ಟು ಕಾರಣ. ನಮ್ಮ ನೆರೆಯ ರಾಷ್ರ್ಟದಲ್ಲಿ ಕಾನೂನನ್ನು ಪಾಲಿಸದ ಕಾರಣ ಅರಾಜಕತೆಯಿಂದ ಶಾಂತಿ ನೆಮ್ಮದಿ ಬಾಳ್ವೆ ಅಸಾದ್ಯವಾಗಿರುತ್ತದೆ. ಸಂವಿಧಾನ ರಚನೆ ಮತ್ತು ರಕ್ಷಣೆಯಲ್ಲಿ ವಕೀಲರ ಪಾತ್ರ ಹಿರಿದಾಗಿರುತ್ತದೆ. ಸಂವಿಧಾನದಲ್ಲಿ ಜನರಿಗೆ ಕೊಟ್ಟ ಹಕ್ಕು- ಕರ್ತವ್ಯ ಹಾಗೂ ತಿದ್ದುಪಡಿಗಳ ಬಗ್ಗೆ ವಿದ್ಯಾರ್ಥಿಗಳ ಗಮನ ಸೆಳೆದರು.


ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ ಜಯಪ್ರಕಾಶ್ ಭಂಡಾರಿ, ಮೋಟಾರು ವಾಹನ ಕಾಯ್ದೆಯ ಬಗ್ಗೆ ವಿವರಿಸಿದರು. ಇತ್ತೀಚಿನ ದಿನಗಳಲ್ಲಿ ವಾಹನ ಚಾಲಕರು ಸರಿಯಾದ ದಾಖಲೆಗಳಿಲ್ಲದೆ ವಾಹನ ಚಲಿಸುದರಿಂದ ಜೈಲು ಶಿಕ್ಷೆ ಮತ್ತು ದಂಡ ಕಟ್ಟಲು ಬದ್ಧರಾಗಿರುತ್ತಾರೆ. ಸಮಾರಂಭದ ಅಧ್ಯಕ್ಷತೆಯನ್ನು ಅಧಿವಕ್ತಾ ಪರಿಷತ್ ಮೂಡುಬಿದಿರೆ ಘಟಕದ ಅಧ್ಯಕ್ಷ ಎಂ ಕೆ ದಿವಿಜೇಂದ್ರ ಕುಮಾರ್ ವಹಿಸಿದರು.


ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸೌಮಶ್ರೀ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ನಾಯಕ ರೋಹಿತ್ ಅತಿಥಿಗಳನ್ನು ಗೌರವಿಸಿದರು. ಉಪನ್ಯಾಸಕಿ ಸುಜಾತ ವಂದಿಸಿದರು.

Related posts

ಕ್ರೈಸ್ಟ್‌ಕಿಂಗ್: ಕಾನೂನು ಮಾಹಿತಿ ಕಾರ್ಯಕ್ರಮ

Madhyama Bimba

ರಾಮಾಯಣ- ಮಹಾಭಾರತ ಪರೀಕ್ಷೆ

Madhyama Bimba

ಕಾರ್ಕಳ ಶ್ರೀ ಲಕ್ಷ್ಮೀ ಜ್ಯುವೆಲ್ಲರ್‍ಸ್‌ನಲ್ಲಿ ವಿಶೇಷ ಬೋನಸ್ ಸ್ಕೀಮ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More