ಕಾರ್ಕಳ: ಬೋಳದಲ್ಲಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಚೈನನ್ನು ಎಳೆದು ಕೊಂಡು ಹೋದ ಘಟನೆ ವರದಿಯಾಗಿದೆ.
ವಸಂತಿ (59ವ ), ಬೋಳ, ಕಾರ್ಕಳ ಇವರು ದಿನಾಂಕ 9/12/2024ರಂದು ಬೆಳಗ್ಗೆ 10.45ಗಂಟೆಗೆ ಬೋಳ ಗ್ರಾಮದ ಸುಂಕಮಾರು-ಮಂಜರಪಲ್ಕೆ ಸಾರ್ವಜನಿಕ ರಸ್ತೆಯಲ್ಲಿ ತಮ್ಮ ಮನೆ ಕಡೆಗೆ ನಡೆದುಕೊಂಡು ಹೋಗುವಾಗ ಮೋಟಾರು ಸೈಕಲಿನಲ್ಲಿ ಬಂದ ಅಪರಿಚಿತ ಮೋಟಾರು ಸೈಕಲ್ ಸವಾರ ಮತ್ತು ಮತ್ತು ಸಹಸವಾರೆ ಮೋಟಾರು ಸೈಕಲನ್ನು ನಿಲ್ಲಿಸಿ, ಅವರನ್ನು ತಡೆದು “ ಭಾಸ್ಕರವರ ಮನೆ ಎಲ್ಲಿ ಬರುತ್ತೆ ಎಂದು ಕೇಳಿದಾಗ, ವಸಂತಿಯವರು “ ಇಲ್ಲಿ ಯಾರು ಭಾಸ್ಕರ ಎನ್ನುವವರು ಇರುವುದಿಲ್ಲ ಎಂದು ಹೇಳಿದಾಗ ಮೋಟಾರು ಸೈಕಲಿನಲ್ಲಿ ಹಿಂದೆ ಕುಳಿತಿದ್ದ ಹುಡುಗಿ ವಸಂತಿಯವರ ಕೈ ಹಿಡಿಯಲು ಬಂದಳು
ತಕ್ಷಣ ಅವರು ಕೈಯ್ಯನ್ನು ಹಿಂದಕ್ಕೆ ತೆಗೆದುಕೊಂಡ ಸಮಯ, ಮೋಟಾರು ಸೈಕಲ್ ಸವಾರನು ವಸಂತಿಯವರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 32ಗ್ರಾಂ ತೂಕದ ಚಿನ್ನದ ಚೈನನ್ನು ಎಳೆದುಕೊಂಡು ಹೋಗಿದ್ದಾರೆ.
ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
previous post
next post