ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬಾಲಕಿಯರ 16 ವರ್ಷ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಕಾಂತವಾರ ಗ್ರಾಮದ ಬಾರಾಡಿಯ ಸೃಜನ ಕುಲಾಲ್ ಇವರು ಭಾಗವಹಿಸಿ ಚಿನ್ನದ ಪದಕ ಕುಮಿಟೆಯಲ್ಲಿ(ಫೈಟಿಂಗ್ ನಲ್ಲಿ) ಹಾಗೂ ಬೆಳ್ಳಿಯ ಪದಕವನ್ನು ಕಟ ವಿಭಾಗದಲ್ಲಿ ಪಡೆದಿರುತ್ತಾರೆ.
ಇವರು ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರು ಇಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿನಿ ಯಾಗಿದ್ದಾರೆ. ಇವರು ಕಾಂತಾವರ ಗ್ರಾಮದ ಬಾರಾಡಿ ಶ್ರೀ ಜಗದೀಶ್ ಕುಲಾಲ್ ಹಾಗೂ ಶ್ರೀಮತಿ ಜ್ಯೋತಿ ಕುಲಾಲ್ ದಂಪತಿಗಳ ಪುತ್ರಿ. ಇವರಿಗೆ ಕರಾಟೆ ಶಿಕ್ಷಕರಾದ ಸತೀಶ್ ಬೆಳ್ಮಣ್ ಹಾಗೂ ಮೃಣಾಲಿ ಶೆಟ್ಟಿ ಇವರು ತರಬೇತಿ ನೀಡಿರುತ್ತಾರೆ. ಕಾಂತವಾರ ಕುಲಾಲ ಸಂಘದಿಂದ ಶುಭ ಹಾರೈಸಿದ್ದಾರೆ.