ಮೂಡಬಿದಿರೆ ತಾಲೂಕಿನ ಜನತೆಗೆ ಸರ್ಕಾರದ ಸಾರಿಗೆ ಯೋಜನೆಗಳು ಸಿಗಬೇಕೆಂಬ ರೈತ ಸೇನೆ ದ. ಕ. ಜಿಲ್ಲೆ ಮನವಿಗೆ ಸರಕಾರ ಸ್ಪಂದಿಸಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಮನವಿಗೆ ಸಂಬಂಧಪಟ್ಟ ಇಲಾಖೆಯವರು ಸರಿಯಾಗಿ ಸ್ಪಂದಿಸದಿದ್ದಾಗ ನಮ್ಮ ಸಂಘವು ದಿನಾಂಕ 04/03/2023 ರಂದು ಕರ್ನಾಟಕ ಲೋಕಾಯುಕ್ತ ನ್ಯಾಯಲಯಕ್ಕೆ ದೂರು ಅರ್ಜಿ ಸಲ್ಲಿಸಲಾಗಿದೆ. ಈ ದೂರು ಅರ್ಜಿಯು ನ್ಯಾಯಾಲಯದ ಪ್ರಕರಣ ಸಂಖ್ಯೆ: LOK/MYS/10393/2023 ರಂತೆ ಪ್ರಕರಣ ದಾಖಲಾಗಿ, ವಿಚಾರಣೆಯಲ್ಲಿರುತ್ತದೆ ಎಂದು ಹೇಳಿದ್ದಾರೆ. ಈ ಮಧ್ಯೆ ನಮ್ಮ ಸಂಘದ ನಿರಂತರ ಮನವಿಗೆ ಸ್ಪಂದಿಸಿದ ಕರ್ನಾಟಕ ಸರ್ಕಾರ, ಸಾರಿಗೆ ವ್ಯವಸ್ಥೆಯಲ್ಲಿರುವ ಸೌಲಭ್ಯವನ್ನು ಮಂಗಳೂರು, ಮೂಡಬಿದಿರೆ, ಕಾರ್ಕಳ ಮಾರ್ಗವಾಗಿ ವ್ಯವಸ್ಥೆ ಮಾಡಿರುವುದರಿಂದ, ಸರ್ಕಾರದ ಸೌಲಭ್ಯವು ಮೂಡಬಿದಿರೆ ಜನತೆಗೆ ಸಿಗುವಂತಾಗಿದೆ ಎಂದು ಗೋಷ್ಠಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇಂದು ಪೂರ್ವಾಹ್ನ ಸಮಯ 7.45 ಕ್ಕೆ ಪ್ರಾಯೋಗಿಕ ಸಂಚಾರ ಸಾರಿಗೆಯ ಪ್ರಯುಕ್ತ ಸರಕಾರಿ ಬಸ್ಸು ಮೂಡಬಿದಿರೆಗೆ ಬಂದಾಗ ಸಂಘದ ವತಿಯಿಂದ ಸರ್ಕಾರಿ ಸಾರಿಗೆ ಬಸ್ಸನ್ನು ರೈತ ಸೇನೆ ಸ್ವಾಗತಿಸಿದೆ.
ಹಿರಿಯ ನಾಗರಿಕರಿಗೆ 25% ರಿಯಾಯಿತಿ ಬಸ್ಸು ಪಾಸ್ ಸಾರ್ವಜನಿಕರ ದಿನನಿತ್ಯದ ಕೆಲಸಕ್ಕಾಗಿ ಅನುಕೂಲವಾಗುವ ಸಾರಿಗೆ ಮಾಸಿಕ ಬಸ್ಸು ಪಾಸ್, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಅಂಗವಿಕಲರಿಗೆ ಉಚಿತ ಬಸ್ ಪಾಸ್, ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಬಸ್ ಪಾಸ್, ಎಂಡೋಸಲ್ಫಾನ್ ಪೀಡಿತ ವ್ಯಕ್ತಿಗಳಿಗೆ ಉಚಿತ ಬಸ್ ಪಾಸ್, ಅಂಧರಿಗೆ ಬಸ್ ಪಾಸ್ ಪತ್ರಕರ್ತರಿಗೆ ಬಸ್ ಪಾಸ್ ನಿವೃತ್ತ ನೌಕರರ ಬಸ್ ಪಾಸ್, ವ್ಯವಸ್ಥೆ, ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವರೇ ಸಂಘವು ಹಲ ವಾರು ಮನವಿಗಳನ್ನು ಸಂಬಂಧಪಟ್ಟ ಇಲಾಖೆಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಹರಿಪ್ರಸಾದ್ ನಾಯಕ್, ಉಪಾಧ್ಯಕ್ಷರಾದ ಎಂ. ರಮೇಶ್ ಬೋಧಿ, ಸಂಘಟನಾ ಕಾರ್ಯದರ್ಶಿಯವರಾದ ಶಿವರಾಮ್ ಜೆ ಶೆಟ್ಟಿ, ಜೊತೆ ಸಂಘಟನಾ ಕಾರ್ಯದರ್ಶಿಯವರಾದ ವಿಶ್ವನಾಥ ಬೋವಿ, ಸಂಘದ ಮಹಿಳಾ ಸಂಘಟನಾ ಕಾರ್ಯದರ್ಶಿಯವರಾದ ಶ್ರೀಮತಿ ಕವಿತಾ ನಾಯಕ್, ಸಂಘದ ಪ್ರಧಾನ ಕಾರ್ಯದರ್ಶಿಯವರಾದ ನಾರಾಯಣ ಕಡಲಕೆರೆ ಉಪಸ್ಥಿತರಿದ್ದರು.