ಏಕ ವಿನ್ಯಾಸ ನಕ್ಷೆ ಅನುಮೋದಿಸುವ ಆದೇಶ ವನ್ನು ರದ್ದು ಪಡಿಸುವಂತೆ ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಕೇಶ್ ಹೆಗ್ಡೆ ಆಗ್ರಹಿಸಿದ್ದಾರೆ.
.ಪಟ್ಟಣ ಪ್ರದೇಶದ ಕಾನೂನುಗಳು ಗ್ರಾಮೀಣ ಪ್ರದೇಶಕ್ಕೆ ಅನುಗುಣ ಆಗುವುದಿಲ್ಲ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ತುಂಡು ಭೂಮಿ ಹೊಂದಿದ್ದು.ಸಾರ್ವಜನಿಕರಿಗೆ ತುಂಬಾ ಸಮಸ್ಯೆ ಆಗುತ್ತಿದೆ.
ಈಗಿರುವ ಕಾನೂನು ಪ್ರಕಾರ ಏಕ ವಿನ್ಯಾಸ ನಕ್ಷೆಗಾಗಿ ಒಂದೋ ಕಾಪುಗೆ ಹೋಗಬೇಕಾಗುತ್ತದೆ. ಇಲ್ಲವಾದರೆ ತಿಂಗಳಿಗೆ ಎರಡು ಬಾರಿ ಮಾತ್ರ ಕಾರ್ಕಳದವರಿಗೆ ಅವಕಾಶ ಸಿಗುತ್ತದೆ.
ಈ ರೀತಿಯ ಪರಿಸ್ಥಿತಿಯಿಂದಾಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ.
ಸರ್ಕಾರ ಈ ಹಿಂದೆ ಇದ್ದಂತೆ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಆದೇಶ ಮಾಡಬೇಕಾಗಿ ಅವರು ವಿನಂತಿ ಮಾಡಿದ್ದಾರೆ.
previous post