Blog

ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ

ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ ಜೇಸಿ ಡಾ. ಮಾಧವ್ ರಾವ್ ಮೂಡುಕೊಣಜೆ ಇವರು ಮಾತನಾಡುತ್ತಾ, ಈ ಸಂಸ್ಥೆಯ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತೇನೆ. ಇಲ್ಲಿನ ಸಾಧನೆ ಕೇವಲ ಪ್ರಶಸ್ತಿ ಪುರಸ್ಕಾರಕ್ಕೆ ಸೀಮಿತವಾಗಿಲ್ಲ. ಅಷ್ಟಮಿ, ಶಾರದೋತ್ಸವ, ಬಲಿಂದ್ರ ಪೂಜೆಗಳ ಮೂಲಕ ಮಕ್ಕಳಿಗೆ ಸಂಸ್ಕೃತಿಯನ್ನು ತಿಳಿಸಿಕೊಡುವಂತಹ ಕಾಯ೯ ತುಂಬಾ ಸಂತೋಷವನ್ನು ಕೊಟ್ಟಿದೆ. ಮಕ್ಕಳಿಗೆ ಸಂಸ್ಕಾರ, ಸಮಯವನ್ನು ಕೊಡಿ. ಇಂದು ಹೆತ್ತವರು ಮಕ್ಕಳಿಗೆ ಯಾವುದೇ ಕಷ್ಟವಾಗಬಾರದು ಎಂದು ಎಲ್ಲವನ್ನೂ ರೆಡಿ ಮಾಡಿಕೊಡುತ್ತಾರೆ. ಮಕ್ಕಳು ಹೆತ್ತವರ ಒತ್ತಾಯಕ್ಕೆ ಓದುತ್ತಾರೆ ಎಂದರು.

ಜೇಸಿ ಅಭಿಲಾಷ್‌ರವರು ಮಾತನಾಡಿ ಶಾಲಾ ವಿದ್ಯಾರ್ಥಿ ನಾಯಕಿಯ ಮಾತು ನನಗೆ ಬಹಳ ಖುಷಿ ಕೊಟ್ಟಿದೆ. ನಮ್ಮ ಮಕ್ಕಳು ಕಲಿಯುತ್ತಿರುವ ಶಾಲೆಯಲ್ಲಿ ಏನೆಲ್ಲ ನಡೆಯುತ್ತದೆ, ಇಡೀ ವರ್ಷ ನಮ್ಮ ಮಗು ಶಾಲೆಯಲ್ಲಿ ಏನು ಕಲಿತಿದೆ ಎಂದು ತಿಳಿದುಕೊಳ್ಳುವ ವ್ಯವಧಾನ ಪೋಷಕರಿಗೆ ಇರಬೇಕು. ಜೇಸಿ ಚಿತ್ತರಂಜನ್ ರವರು ಬಹಳ ಉತ್ತಮವಾಗಿ ಶಾಲೆಯನ್ನು ಕೊಂಡೊಯ್ಯುತ್ತಿದ್ದಾರೆ. ಇಲ್ಲಿ ಉತ್ತಮ ಸಂಸ್ಕಾರವಿದೆ ಎಂದರು.

ಜೇಸಿ ಕಾರ್ತಿಕೇಯ ಮಧ್ಯಸ್ಥರವರು ಮಾತನಾಡಿ ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ನೋಡಿದ್ದೇನೆ. ಆದರೆ ಜೇಸಿ ಆಂಗ್ಲ ಮಾಧ್ಯಮ ಶಾಲೆ ರಾಜ್ಯಕ್ಕೆ ಸಂಸ್ಕಾರ ಭರಿತವಾದ, ಮೌಲ್ಯ ಆಧಾರಿತ ಶಿಕ್ಷಣ ಕೊಡುವುದರಲ್ಲಿ ಸಂಶಯವಿಲ್ಲ. ಇಲ್ಲಿನ ವಿದ್ಯಾರ್ಥಿಗಳು ನಮ್ಮ ಸಮಾಜಕ್ಕೆ ಮಾದರಿಯಾಗುವ ವ್ಯಕ್ತಿಗಳಾಗುತ್ತಾರೆ. ಇಷ್ಟೊಂದು ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ ನಡೆದದ್ದು ಇಲ್ಲಿ ಮಾತ್ರ. ಜೇಸಿ ಶಾಲೆ ಎಲ್ಲಾ ವಿಷಯಗಳಲ್ಲೂ ಮುಂಚೂಣಿಯಲ್ಲಿದೆ. ಇಲ್ಲಿನ ಶಿಕ್ಷಕರ ಕೆಲಸ ಶ್ಲಾಘನೀಯ ಎಂದರು.

ಜೇಸಿ ಶ್ವೇತಾ ಎಸ್.ಜೈನ್ ಅವರು ಮಾತನಾಡಿ ಸಮರ್ಥ ಶಿಕ್ಷಕರ ತಂಡ ಮತ್ತು ಪೋಷಕರ ಸಹಕಾರದಿಂದ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಬಹುದು. ಪೋಷಕರು ಮಕ್ಕಳಲ್ಲಿ ಶಿಕ್ಷಕರ ಬಗ್ಗೆ ತಿರಸ್ಕಾರ ಭಾವನೆ ಮೂಡಿಸಬೇಡಿ. ಹಿಂದಿನ ಕಾಲದ ಹಿರಿಯರು ಮಕ್ಕಳಿಗೆ ಕಥೆ ಹೇಳುತ್ತಾ ಸಂಸ್ಕಾರ ಹೇಳುತ್ತಿದ್ದರು. ಈಗ ಮೊಬೈಲ್, ಟಿವಿ ಯಿಂದಾಗಿ ಮಕ್ಕಳಿಗೆ ಸಂಸ್ಕಾರದ ಕೊರತೆ ಇದೆ. ಎಲ್ಲಾ ರೀತಿಯ ಸಾಧನೆ ಮಾಡಿದ ಇತಿಹಾಸ ಜೇಸಿ ಸಂಸ್ಥೆಗೆ ಇದೆ.

ಜೇಸಿ ಚಿತ್ತರಂಜನ್ ರವರು ಈ ಶಾಲೆಯಲ್ಲಿ ವಿಷ್ಣು ಸಹಸ್ರನಾಮ ಪ್ರಾರಂಭವಾದಾಗಿನಿಂದ ಶಾಲೆ ದೇವರ ಕಳೆಯೊಂದಿಗೆ ಕಂಗೊಳಿಸುತ್ತಿದೆ. ಈ ಶಾಲೆ ಚೆನ್ನಾಗಿ ಮುಂದುವರೆಯಲು ಕಾರಣ ಶಿಕ್ಷಕರು. ಇಲ್ಲಿ ಮಕ್ಕಳು ಕಠಿಣವಾಗಿ ದುಡಿಯುವಂತೆ ಪ್ರತಿಯೊಬ್ಬ ಶಿಕ್ಷಕರು ಮಾಡುತ್ತಾರೆ. ಮಕ್ಕಳು ಕಠಿಣ ದುಡಿಮೆಯನ್ನು ಕಲಿತಾಗ ಶಾಲೆ ಯಶಸ್ಸು ಆಗುತ್ತದೆ. ಅಂತಹ ಒಂದು ಶಿಕ್ಷಣ ಇಲ್ಲಿ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಸುರೇಖಾ ರಾಜ್. ಶಾಲಾ ಸಂಚಾಲಕರಾದ ಡಾ. ಮುರಳಿಧರ್ ಭಟ್. ಜೇಸಿ ಪ್ರಚೆತ್ ಕುಮಾರ್ ಹಾಗೂ ಶಾಲಾ ನಾಯಕಿ ನಿರೀಕ್ಷಾ ಭಟ್ ಉಪಸ್ಥಿತರಿದ್ದರು.

ನಂತರ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನೆರವೇರಿತು.

Related posts

ಹೆಬ್ರಿ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ

Madhyama Bimba

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸ್ಪಂದನೆ ಮಾಡಿದ ಅಧಿಕಾರಿಗಳಿಗೆ ಸನ್ಮಾನ

Madhyama Bimba

ರೈತರಿಗೆ ನ್ಯಾಯ ಸಿಗೋವರೆಗೂ ಹೋರಾಟ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More