ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೇರಾಲ್ದಬೆಟ್ಟು ರೆಂಜಾಳ ಇದರ 60ರ ಸಂಭ್ರಮದ ಪ್ರಯುಕ್ತ ವಾರ್ಷಿಕೋತ್ಸವ ಸಮಾರಂಭ ಡಿ.21 ರಂದು ಶಾಲಾ ವಠಾರದಲ್ಲಿ ನಡೆಯಿತು.
ಕಾರ್ಕಳ ಶಾಸಕ, ಮಾಜಿ ಸಚಿವರಾದ ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ರೆಂಜಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮೇಶ್ ವಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮಹಾವೀರ ಹೆಗ್ಡೆ ಬ್ರಾಣ ಬೆಟ್ಟು, ಸಮಿತಿಯ ಗೌರವ ಅಧ್ಯಕ್ಷ ರಮೇಶ್ ಶೆಟ್ಟಿ ಮಂಜೊಟ್ಟು, ಸಂಸ್ಕೃತಿ ಸಿಂಚನದ ಸಂಚಾಲಕ ರಾಜೇಶ್ ರೆಂಜಾಳ, ಗ್ರಾಮ ಪಂಚಾಯತ್ ಸದಸ್ಯೆ ಸುನಂದಾ, ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಆಚಾರ್ಯ, ಸಮಿತಿಯ ಅಧ್ಯಕ್ಷ ರವಿಚಂದ್ರ ಜೈನ್, ಮುಖ್ಯ ಶಿಕ್ಷಕಿ ಅನಿತಾ ಹೆಗ್ಡೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಧನ ಸಹಾಯ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ವೈಷ್ಣವಿ ಹಾಗೂ ಆರಾಧ್ಯ ಪ್ರಾರ್ಥಿಸಿದರು. ಅನಿತಾ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಬಹುಮಾನ ವಿಜೇತರ ಪಟ್ಟಿಯನ್ನು ಆಶಾಲತಾ ಆಚಾರ್ಯ, ಹಿರಿಯರ ಬಹುಮಾನ ವಿಜೇತರ ಪಟ್ಟಿಯನ್ನು ಸಂತೋಷ್ ಹೇಡ್ಮೆ ವಾಚಿಸಿದರು. ರಾಜೇಶ್ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಆಚಾರ್ಯ ಧನ್ಯವಾದವಿತ್ತರು. ನಾರಾಯಣ ಭಟ್ ದೇಜುಬೆಟ್ಟು, ನಾಗಪ್ಪ, ದಿವಾಕರ ಶೆಟ್ಟಿ, ಆನಂದ್ ಕೋಟ್ಯಾನ್, ರಾಜೇಶ್ ಶೆಟ್ಟಿ, ಸಮಿತಿಯ ಎಲ್ಲಾ ಸದಸ್ಯರ ಸಹಕರಿಸಿದರು.
ನಂತರ ಮೂಡಬಿದ್ರಿ ಪಿಂಗಾರ ಕಲಾವಿದರಿಂದ ನಾಟಕ ‘ಕದಂಬ’ ಪ್ರದರ್ಶನಗೊಂಡಿತು.