ಇಂದು ಆದಿತ್ಯವಾರದ ದಿನ ಕಾರ್ಕಳದ ಸ್ವರಾಜ್ ಮೈದಾನಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಆಗಮಿಸಲಿದ್ದಾರೆ.
ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ ಕಾರ್ಲೊತ್ಸವದ ಸಂಭ್ರಮದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿದ್ದಾರೆ. ನಿನ್ನೆ ಶನಿವಾರದ ದಿನ ಸುಮಾರು 50 ಸಾವಿರಕ್ಕೂ ಮೀರಿದ ಜನ ಸಮೂಹ ಕಾರ್ಲೊತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ಸು ಮಾಡಿದ್ದು ಅದ್ದೂರಿ ಕಾರ್ಯಕ್ರಮ ಎಂದು ಸಾಬೀತು ಆಗಿತ್ತು.
ಇಂದು ಉಪೇಂದ್ರರವರ ನೃತ್ಯ ಹಾಗು ಆರ್ಕೆಸ್ಟ್ರಾ ಈ ದಿನದ ವಿಶೇಷ ಸಂಭ್ರಮವಾಗಿದೆ.
ಇಂದು ಬೆಳಿಗ್ಗೆಯಿಂದಲೇ ಆಹಾರ ಮೇಳ ಹಾಗು ವಸ್ತು ಪ್ರದರ್ಶನ ಆರಂಭಗೊಂಡಿದೆ.
ರಾತ್ರಿ 10 ಗಂಟೆವರೆಗೆ ಮಾತ್ರ ಕಾರ್ಯಕ್ರಮ ಮಾಡಲು ಅನುಮತಿ ನೀಡಲಾಗಿದ್ದು ಜನ ಆದಷ್ಟು ಬೇಗ ಕಾರ್ಲೊತ್ಸವದ ಮೈದಾನಕ್ಕೆ ಬರುವಂತೆ ಕಾರ್ಲೊತ್ಸವ ಸಮಿತಿ ಹಾಗು ಬೋಳ ಪ್ರಶಾಂತ್ ಕಾಮತ್ ಹಾಗು ಬಾಯ್ ಜೋನ್ ನ ಕಿಶೋರ್ ತಿಳಿಸಿದ್ದಾರೆ.
next post