ಪಡುಕುಡೂರು : ಗ್ರಾಮೀಣ ಪ್ರದೇಶ ಮುನಿಯಾಲಿನ ಲಯನ್ಸ್ ಕ್ಲಬ್ ಜನಸೇವೆಯ ಮೂಲಕ ಅತ್ಯುನ್ನತವಾಗಿ ಬೆಳೆಯುತ್ತಿದೆ. ಸಮಾಜಮುಖಿ ಕಾರ್ಯ, ಆರೋಗ್ಯ, ಶಿಕ್ಷಣ ಹಾಗೂ ಶಾಶ್ವತ ಕಾರ್ಯಗಳನ್ನು ನಿರಂತರವಾಗಿ ಜನಮನ ಗೆದ್ದಿದೆ. ನಮಗೆ ಲಯನ್ಸ್ ಮೂಲಕ ಜನಸೇವೆ ಮಾಡಲು ದೊರೆತ ಅವಕಾಶವನ್ನು ಬಳಸಿ ಸೇವೆಯನ್ನು ಮಾಡುವ ಎಂದು ಲಯನ್ಸ್ ಜಿಲ್ಲಾ ಪ್ರಥಮ ಉಪ ಜಿಲ್ಲಾ ಉಪ ಗವರ್ನರ್ ಸಪ್ನಾ ಸುರೇಶ್ ಹೇಳಿದರು.
ಅವರು ಮುನಿಯಾಲು ಲಯನ್ಸ್ ಕ್ಲಬ್ ಗೆ ಲಯನ್ಸ್ ಜಿಲ್ಲಾ ಪ್ರಥಮ ಉಪ ಜಿಲ್ಲಾ ಉಪ ಗವರ್ನರ್, ಪ್ರಾಂತೀಯ ಹಾಗೂ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧೀಕೃತ ಭೇಟಿ ಕಾರ್ಯಕ್ರಮದಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಬೇಳಂಜೆ ಹರೀಶ್ ಪೂಜಾರಿ ಹಾಗೂ ವಲಯಾಧ್ಯಕ್ಷ ಪ್ರಕಾಶ ಶೆಟ್ಟಿ ಭಾಗವಹಿಸಿ ಮಾತನಾಡಿದರು.
ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಭುಜಂಗ ಶೆಟ್ಟಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಲಯನ್ಸ್ ಮುಖಂಡ ಹೆಬ್ರಿ ಟಿ.ಜಿ.ಆಚಾರ್ಯ ಪ್ರಶಂಸನೀಯ ಮಾತು ಹೇಳಿದರು. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನಕ್ಕೆ ಮೌನ ಪ್ರಾರ್ಥನೆಯ ಮೂಲಕ ನಮನ ಸಲ್ಲಿಸಲಾಯಿತು.
ಹಿರಿಯಡ್ಕ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧೀರ ಹೆಗ್ಡೆ, ಪೇತ್ರಿ ಲಯನ್ಸ್ ಅಧ್ಯಕ್ಷ ಚಂದ್ರ ನಾಯ್ಕ್, ಮುನಿಯಾಲು ಲಯನ್ಸ್ ಕ್ಲಬ್ ಕಾರ್ಯದರ್ಶಿ ಗೋಪಿನಾಥ ಭಟ್, ಕೋಶಾಧಿಕಾರಿ ಅಶೋಕ್ ಎಂ ಶೆಟ್ಟಿ, ಪದಾಧಿಕಾರಿಗಳು, ವಿವಿಧ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಭಾಗವಹಿಸಿದ್ದರು. ಮುನಿಯಾಲು ಲಯನ್ಸ್ ಕ್ಲಬ್ ನ ಶಂಕರ ಶೆಟ್ಟಿ ನಿರೂಪಿಸಿ ಗೋಪಿನಾಥ ಭಟ್ ವಂದಿಸಿದರು.