ಮೂಡುಬಿದಿರೆ

ಯುವವಾಹಿನಿ ಕೇಂದ್ರ ಸಮಿತಿ  ವಾರ್ಷಿಕ ಸಮಾವೇಶ

ಯುವವಾಹಿನಿ (ರಿ.)ಕೇಂದ್ರ ಸಮಿತಿ ಮಂಗಳೂರು ಇದರ 37 ನೇ ವಾರ್ಷಿಕ ಸಮಾವೇಶ ಮೂಡುಬಿದಿರೆ ಘಟಕದ ಆಶ್ರಯದಲ್ಲಿ ಮೂಡುಬಿದಿರೆ ಕನ್ನಡ ಭವನದಲ್ಲಿ ಇಂದು ನಡೆಯಿತು. ಶಾಸಕ ಉಮಾನಾಥ್ ಎ ಕೋಟ್ಯಾನ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರತಿಭೆಗೆ ಫಲ ಖಂಡಿತ ಸಿಗುತ್ತದೆ. ಸ್ಪರ್ಧೆ ಯನ್ನು ಪ್ರತಿಭೆ ಬೆಳೆಯಲು ಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು. ಸಾಮಾಜಿಕ ಸಂಘಟನೆ ಪರಸ್ಪರ ಪ್ರೀತಿಗಾಗಿ ಹೊರತು ಯಾವುದೇ ಯಾವುದೇ ಸಮುದಾಯದ ದ್ವೇಷಕ್ಕಲ್ಲ ಎಂದು ಅಭಿಪ್ರಾಯಪಟ್ಟರು.

ಸಭಾಧ್ಯಕ್ಷತೆಯನ್ನು ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ. ಪೂಜಾರಿ ವಹಿಸಿದ್ದರು.
ಭಾರತ್ ಕೋ ಆಪರೇಟವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ಯುವ ಸಿಂಚನ ವಿಶೇಷಾಂಕ ಬಿಡುಗಡೆ ಮಾಡಿದರು.

ಹಿರಿಯ ನ್ಯಾಯವಾದಿ ಇರುವೈಲ್ ತಾರಾನಾಥ್ ಪೂಜಾರಿ, ವಿಕಾಸ್ ಎಜುಕೇಷನ್ ಟ್ರಸ್ಟ್ ಟ್ರಷ್ಟಿ ಸೂರಜ್ ಕುಮಾರ್ ಕಲ್ಯಾ, ರತ್ನ ವುಮೆನ್ಸ್ ಕ್ಲಿನಿಕ್ ಡಾ ರಮೇಶ್, ಉದ್ಯಮಿ ದಿನೇಶ್ ಅಮೀನ್, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ರವಿ ಪೂಜಾರಿ, ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ. ಪೂಜಾರಿ ಉಡುಪಿ ಸರಕಾರಿ ಪಪೂ ಕಾಲೇಜಿನ ಪ್ರಾಧ್ಯಾಪಕಿ ಡಾ. ಸುನೀತಾ ವಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 35 ಘಟಕದ ಅಧ್ಯಕ್ಷರುಗಳು ವೇದಿಕೆಯಲ್ಲಿದ್ದರು. ಯುವವಾಹಿನಿ ಕೇಂದ್ರ ಸಮಿತಿ ನೂತನ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಹಾಗು ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಪ್ರಶಸ್ತಿ, ಪುರಸ್ಕಾರ:
ಬಿಲ್ಲವ ಸಮಾಜದ ಸಾಧಕರಿಗೆ ನೀಡುವ ಸಾಧನ ಶ್ರೀ ಪ್ರಶಸ್ತಿಯನ್ನು ಸಹಕಾರಿ ಧುರೀಣ ಭಾಸ್ಕರ್ ಎಸ್. ಕೋಟ್ಯಾನ್ ಅವರಿಗೆ ಶಾಲು ಹಾರ ಫಲವಸ್ತು ಸ್ಮರಣಿಕೆ ಸನ್ಮಾನ ಪತ್ರ ದೊಂದಿಗೆ ಗೌರವಿಸಲಾಯಿತು. ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಸಾಧನ ಶ್ರೇಷ್ಠ ಪ್ರಶಸ್ತಿ, ಸಂಗೀತ ಸಾಧಕ ಸಚಿತ್ ಪೂಜಾರಿ ನಂದಳಿಕೆ, ಸಂಶೋಧಕ ದಿನೇಶ್ ಸುವರ್ಣ ರಾಯಿ, ಕ್ರೀಡಾ ಸಾಧಕಿ ರಕ್ಷಾ ರೆಂಜಾಳ ರಿಗೆ ಯುವ ಸಾಧನಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಸಮಾಜ ಕ್ಷೇತ್ರದ ಸಾಧಕ ಕುಮಾರ್ ಪೂಜಾರಿ, ಡಾ. ಆನಂದ ಬಂಗೇರರಿಗೆ ಯುವವಾಹಿನಿ ಗೌರವ ಅಭಿನಂದನೆ ಸಲ್ಲಿಸಲಾಯಿತು. ಡಾ. ಶಿಲ್ಪಾ ದಿನೇಶ್ ಯುವವಾಹಿನಿ ಅಭಿನಂದನೆ ಮತ್ತು ಪ್ರಕೃತಿ ಮಾರೂರು ಅವರಿಗೆ ಯುವವಾಹಿನಿ ಸಾಧಕ ಪುರಸ್ಕಾರ ಪ್ರದಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾಸ್ಕರ್ ಎಸ್. ಕೋಟ್ಯಾನ್ ವಿದ್ಯಾಭ್ಯಾಸ ಪ್ರತಿಯೊಬ್ಬರನ್ನು ಸಾಧನೆಯ ದಾರಿಯಲ್ಲಿ ಮುನ್ನಡೆಯಲು ಸಹಕರಿಸುತ್ತದೆ. ಅವಮಾನಗಳು ಸಾಧನೆ ಮಾಡಲು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.
ಹನಿ ಮತ್ತು ತಂಡದವರು ಪ್ರಾರ್ಥನೆಗೈದರು. ಸಮಾವೇಶ ಸಂಚಾಲಕ ಮೂಡುಬಿದಿರೆ ಘಟಕ ಅಧ್ಯಕ್ಷ ಶಂಕರ್ ಕೋಟ್ಯಾನ್ ಸ್ವಾಗತಿಸಿದರು. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಢಿ. ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾವೇಶ ನಿರ್ದೇಶಕ ಗಣೇಶ್ ವಿ. ಕೋಡಿಕಲ್ ಧನ್ಯವಾದವಿತ್ತರು. ಪ್ರಜ್ಞಾ ಓಡಿಲ್ನಾಳ, ಸ್ಮಿತೇಶ್ ಕಾರ್ಯಕ್ರಮ ನಿರೂಪಿಸಿದರು.

Related posts

ಕಡಂದಲೆ -ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾರಿ ಸಿಡಿಲು ಗಾಳಿ ಮಳೆಗೆ ತೀವ್ರ ಹಾನಿ

Madhyama Bimba

ದೀಪಾವಳಿ ಹಬ್ಬಕ್ಕೆ ಕಾರ್ಕಳದ ನ್ಯೂ ಪವನ್ ಜ್ಯುವೆಲ್ಲರ್ಸ್ ಆಕರ್ಷಕ ಬಂಪರ್ ಆಫರ್

Madhyama Bimba

ಡಾ. ಎಂ. ವೀರಪ್ಪ ಮೊಯಿಲಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More