ಮೂಡುಬಿದಿರೆ, : ಪಾಲಡ್ಕ ಗ್ರಾಮ ವ್ಯಾಪ್ತಿಯ ನಿನ್ನೆ ಸುರಿದ ಬಾರಿ ಗಾಳಿ ಮಳೆಗೆ 1ನೇ ವಾರ್ಡಿನ ರಾಮಮೋಹನ ನಗರ ಕಾಲೋನಿಯ ಲೀಲಾ ಶೆಟ್ಟಿ ಯುವರ ಮನೆಗೆ ನಿನ್ನೆ ರಾತ್ರಿ 9ಗಂಟೆಗೆ ಸುಮಾರಿಗೆ ಭಾರೀ ಗಾತ್ರದ ಮರವೊಂದು ಬಿರುಗಾಳಿಗೆ ಉರುಳಿ ಬಿದ್ದು ಮನೆಗೆ ತೀವ್ರ ಹಾನಿ ಯುಂಟಾಗಿದೆ. ಯಾವುದೇ ಜೀವಾಪಾಯವಾಗಿಲ್ಲ.
ಸ್ಥಳೀಯರು ಕೂಡಲೇ ಧಾವಿಸಿ ಮನೆಗೆ ಬಿದ್ದ ಮರವನ್ನು ತೆರವು ಮಾಡಲು ಸಹಕರಿಸಿದರು.
ಕಡಂದಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊನ್ನಮ್ಮ ಗೌಡ್ತಿ ಯವರ ಮನೆಯ ತೆಂಗಿನ ಮರಕ್ಕೆ ಸಿಡಿಲು ಬಡಿದು ಮನೆಗೆ ಹಾಗೂ ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿ ಆಗಿದೆ.
ಸ್ಥಳಕ್ಕೆ ಗ್ರಾ.ಪಂ. ಉಪಾಧ್ಯಕ್ಷ ಪ್ರವೀಣ್ ಸೀಕ್ವೆರ, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರಾದ ಗಣೇಶ್ ಅಳಿಮರ್, ಗ್ರಾ.ಪಂ ಸದಸ್ಯ ಸುರೇಶ್ ಪೂಜಾರಿ ,ಜಗದೀಶ್ ಕೋಟ್ಯಾನ್. ಪಿಡಿಓ ರಕ್ಷಿತಾ, ಗ್ರಾಮ ಆಡಳಿತ ಅಧಿಕಾರಿ ಅನಿಲ್ ಕುಮಾರ್,ಗ್ರಾಮ ಸಹಾಯಕ ರೀತೇಶ್ ಆಗಮಿಸಿ ಪರಿಶೀಲನೆ ನಡೆಸಿದರು.