ಕಾರ್ಕಳ

ರಾಜ್ಯ ಕಾಂಗ್ರೆಸ್ ಸರ್ಕಾರ ಗಾಂಧಿವಾದದಿಂದ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಆಕ್ರೋಶ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಗಾಂಧಿವಾದದಿಂದ ಮಾವೋವಾದಕ್ಕೆ ಹೊರಳಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಸರ್ಕಾರದ ನಕ್ಸಲ್ ಪ್ಯಾಕೇಜ್ ಬಗ್ಗೆ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ಫೇಸ್ಬುಕ್‌ನಲ್ಲಿ ಸರ್ಕಾರದ ನಡೆಯನ್ನು ಖಂಡಿಸಿದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವವರು, ಈಗ ಬಂದೂಕು ಹಿಡಿದು ಗುಂಡಿಟ್ಟು ಭಯ ಸೃಷ್ಟಿಸುವವರಿಗೆ ಹೂಗುಚ್ಚ ಕೊಟ್ಟು ಸ್ವಾಗತಿಸಿ ಸಮೋಸಾ ನೀಡುತ್ತಿದೆ ಎಂದು ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವರು, ಕಾರ್ಕಳ ಶಾಸಕರು ವಿ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.


ಸಿಎಂ ಸಿದ್ದರಾಮಯ್ಯ ಅವರ ಗೃಹಕಚೇರಿ ಅರ್ಬನ್ ನಕ್ಸಲರ ಪಾಲಿಟ್ ಬ್ಯೂರೋ ಆಗಿ ಬದಲಾಗಿದೆ. ಖುದ್ದು ಸಿದ್ದರಾಮಯ್ಯನವರೇ ಅರ್ಬನ್ ನಕ್ಸಲರ ಕೋರ್ ಕಮಿಟಿ ಸದಸ್ಯರಾಗಿದ್ದಾರೆ. ಕಾಂಗ್ರೆಸ್ ತತ್ವ- ಸಿದ್ಧಾಂತ ಅರ್ಬನ್ ನಕ್ಸಲರು ಹೈಜಾಕ್ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಅಮಾಯಕರಿಗೆ ಕ್ಷಮಾದಾನ ನೀಡಲೇಬಾರದು ಎಂಬುದು ನಮ್ಮವಾದವಲ್ಲ. ಆದರೆ ಶರಣಾದ ರೀತಿ, ಪ್ಯಾಕೇಜ್ ಘೋಷಣೆ ವಿಧಾನ, ಪ್ರಕರಣ ರದ್ಧತಿ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿಯ ಬಗ್ಗೆ ಆಕ್ಷೇಪವಿದೆ. ಸಿದ್ದರಾಮಯ್ಯನವರ ಕೋರ್ ಕಮಿಟಿ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಅರಚಿದರೂ ನಾವು ಹೆದರುವುದಿಲ್ಲ. ಅಷ್ಟಕ್ಕೂ ಬೇಕಾಬಿಟ್ಟಿಪ್ಯಾಕೇಜ್ ಘೋಷಿಸುವುದಕ್ಕೆ ರಾಜ್ಯದ ಬೊಕ್ಕಸದ ಹಣ ಯಾರದೋ ಜಮೀನು ನುಂಗಿ- ನೀರು ಕುಡಿದು ಸಂಪಾದಿಸಿದ ಸ್ವಯಾರ್ಜಿತ ಸೈಟಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಶರಣಾಗತಿ ಪ್ರಕ್ರಿಯೆ ಬಗ್ಗೆ ಸಾಕಷ್ಟು ಅನುಮಾನಗಳಿವೆ. ವಿಕ್ರಮ್ ಗೌಡ ಎನ್‌ಕೌಂಟರ್ ಬಳಿಕ ಅರ್ಬನ್ ನಕ್ಸಲರು ಶರಣಾಗತಿಪ್ರಕ್ರಿಯೆ ಬಗ್ಗೆ ನಡೆಸಿದ ಪ್ರಹಸನದಲ್ಲಿ ಸಿಎಂ ನಿರ್ದೇಶನದ ಭಾಗವೆಷ್ಟು ಎಂಬುದು ಬಹಿರಂಗವಾಗಬೇಕು ಎಂದು ಆಗ್ರಹಿಸಿದ್ದಾರೆ.

ಒಂದೆಡೆ ನಕ್ಸಲರ ಶರಣಾಗತಿ ಬಗ್ಗೆ ಮಾತನಾಡುವ ಸರ್ಕಾರ, ಅರಣ್ಯವಾಸಿಗಳಿಗ ಪುನರ್ಸತಿ ಬಗ್ಗೆ ಯಾವ ನಿಲುವು ಹೊಂದಿದೆ ಎಂಬುದನ್ನೂ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದ್ದಾರೆ.

Related posts

ಶ್ರೀ ಮಾರಿಯಮ್ಮ ದೇವಸ್ಥಾನ ಕೌಡೂರು ಬೈಲೂರು ಚಂಡಿಕಾ ಹೋಮ

Madhyama Bimba

ಕಂಪೆನಿ ಸೆಕ್ರೇಟರಿ ಪ್ರವೇಶ ಪರೀಕ್ಷೆ- ಕಾರ್ಕಳ ಜ್ಞಾನಸುಧಾದ 28 ವಿದ್ಯಾರ್ಥಿಗಳ ಸಾಧನೆ

Madhyama Bimba

ನೀರೆಯ ವ್ಯಕ್ತಿ ಹೊಳೆ ಬದಿಯಲ್ಲಿ ಮೃತ್ಯು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More