ಬಜಗೋಳಿ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಕುಣಿತ ಭಜನೆ ಕಾರ್ಯಕ್ರಮ ಇಂದು ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಕೆದಿಂಜೆಯ ಪ್ರಖ್ಯಾತ ಜ್ಯೋತಿಷಿಗಳಾದ ವಾಸುದೇವ ಹೆಬ್ಬಾರ್ ರವರು ಧಾರ್ಮಿಕ ಕಾರ್ಯಗಳ ಮೂಲಕ ಆರಂಭ ಮಾಡಿದರು.
ರಾಜ್ಯ ಫೆಡರೇಷನ್ ಆಫ್ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ, ಮುಡಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಸದಸ್ಯರಾದ ಪ್ರಶಾಂತ್, ದೇವದಾಸ್ ಪ್ರಭು, ಗಣೇಶ್ ಪೂಜಾರಿ, ರಾಮಕೃಷ್ಣ ಪ್ರವೀಣ್ ಶೆಟ್ಟಿ ಈದು ಮತ್ತಿತರರು ಭಾಗವಹಿಸಿದ್ದರು.
ಕುಣಿತ ಭಜನೆ ಇವತ್ತು ಆರಂಭಗೊಂಡಿದ್ದು ಜನವರಿ 22ರ ವರೆಗೆ ನಡೆಯಲಿದೆ.
ಅಯೋಧ್ಯೆಗೆ ನೆಲ್ಲಿಕಾರು ಶಿಲೆಯನ್ನು ಕೊಂಡೊಯ್ದ ಪುಣ್ಯ ನೆನಪಿಗಾಗಿ 18 ದಿನ ಕಾರ್ಯಕ್ರಮ ನಡೆಯಲಿದೆ.
ಜನವರಿ 21ರವರೆಗೆ ಕುಣಿತ ಭಜನೆ, ಜನವರಿ 22 ರಂದು ಸೂರ್ಯೋದಯದಿಂದ ಸೂರ್ಯಾಸ್ತವರೆಗೆ ಶ್ರೀ ರಾಮ ತಾರಕ ಜಪ ಯಜ್ಞ ನಡೆಯಲಿದೆ.
ಈ ಸಂದರ್ಭದಲ್ಲಿ ಸಾರ್ವಜನಿಕರು ಶ್ರೀ ರಾಮ ಜಪ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಭಾರತದ ಸಂವಿಧಾನ ವ್ಯವಸ್ಥೆಯಲ್ಲಿ ಎಲ್ಲ ಮತ ಪಂಗಡಗಳಿಗೆ ಜೀವಿಸುವ ಹಕ್ಕನ್ನು ನೀಡಿದ ವ್ಯವಸ್ಥೆ ಭಾರತದಲ್ಲಿದೆ.ಅಲ್ಪ ಸಂಖ್ಯಾತ ರ ಓಲೈಕೆಗಾಗಿ ಬಹು ಸಂಖ್ಯಾತ ಹಿಂದೂ ಧರ್ಮವನ್ನು ಕಡೆಗಣಿಸುವ ಹಾಗು ರಾಜಕೀಯವಾಗಿ ಬಳಸುವ ವ್ಯವಸ್ಥೆಯಿಂದಾಗಿ ಹಿಂದೂ ಧರ್ಮವನ್ನು ಅಧ ಪತನ ಮಾಡಲಾಗುತ್ತಿದೆ.
ಎಲ್ಲಾ ಹಿಂದೂ ಬಾಂಧವರು ರಾಜಕೀಯ ವೈಷ್ಣಮ್ಯ ಹಾಗು ಒಡಕನ್ನು ಬದಿ ಗಿಟ್ಟು ಎಲ್ಲರೂ ಒಗ್ಗೂಡ ಬೇಕಾದ ಕಾಲ ಘಟ್ಟದಲ್ಲಿ ನಾವಿದ್ದೇವೆ.
ಈ ಒಂದು ದೇವರ ಪ್ರಾರ್ಥನೆಗಾಗಿ ಶ್ರೀ ರಾಮ ದೇವರಿಗೇ ಪುಷ್ಪಾರ್ಚನೆ ಮಾಡಲು ಶ್ರೀ ರಾಮ ಜಯ ರಾಮ ಜಯ ಜಯ ರಾಮ ಎಂಬ ನಾಮ ಸಂಕೀರ್ತನೆಯೊಂದಿಗೆ ದೇವರನ್ನು ಪ್ರಾರ್ಥಿಸುವ ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸ ಬೇಕಾಗಿ ವಿನಂತಿ ಮಾಡಲಾಗಿದೆ.
ಕೈ ಯಲ್ಲಿ ಹಣತೆ ಹಿಡಿದು ಅಯೋಧ್ಯೆ ಕಡೆಗೆ ಮುಖ ಮಾಡಿ ಆರತಿ ಎತ್ತುವ ಕಾರ್ಯ ಕೂಡ ನಡೆಯಲಿದೆ.
ಗಣ್ಯರ ಉಪಸ್ಥಿತಿಯಲ್ಲಿ ವಾಗ್ಮಿಗಳಾದ ದಾಮೋದರ್ ಶರ್ಮರಿಂದ ಪ್ರವಚನ, ವಿಠಲ ನಾಯಕ್ ರಿಂದ ಗೀತೆ ಸಾಹಿತ್ಯ ಸಂಭ್ರಮ ನಡೆಯಲಿದೆ





