ಕೌಡೂರು ಗ್ರಾಮದ ರಂಗನಪಲ್ಕೆಯ ಶೇಡಿಗುಡ್ಡೆ ಕರಿಕುಮೆರಿ ಪಾತಾವುಗೆ ಸಂಪರ್ಕಿಸಿವ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ ದುರಸ್ತಿಗೆ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಶುಭೊಧ್ ರಾವ್ ಹಾಜರಾಗಿ ಕಾರ್ಕಳ ತಾಲೂಕಿನಲ್ಲಿ ಈ ರೀತಿಯ ರಸ್ತೆ ಎಲ್ಲಿಯೂ ನೊಡಲಿಲ್ಲ. ರಸ್ತೆಯು ತೀವ್ರವಾಗಿ ಹದೆಗೆಟ್ಟಿದೆ. ಸ್ಥಳೀಯ ಪಂಚಾಯತ್ ಆದ ಬೈಲೂರು ಗ್ರಾಮ ಪಂಚಾಯತ್ ಸದಸ್ಯರು ಈ ಬಗ್ಗೆ ಗಮನಹರಿಸದಿರುದು ಬೇಸರದ ಸಂಗತಿಯೆಂದು ತಮ್ಮ ಮಾತಿನಲ್ಲಿ ವ್ಯಕ್ತಪಡಿಸಿದರು ಹಾಗೂ ಪ್ರತಿಭಟನೆ ಸ್ಥಳದಲ್ಲಿಯೇ ಪಂಚಾಯತ್ ಅಭಿವೃದ್ಧಿ ಅದಿಕಾರಿಗೆ ಕರೆ ಮೂಲಕ ಮಾತನಾಡಿ ರಸ್ತೆಯ ಬಗ್ಗೆ ವಿವರಣೆ ಕೇಳಿದರು ಹಾಗೆಯೇ ರಸ್ತೆ ಬಗ್ಗೆ ಯಮ್. ಯಲ್. ಸಿ. ಪಂಡ್ ಮನವಿಪತ್ರ ತಯರಿಸಲು ಸೂಚಿಸಿದರು ಮತ್ತು ಎಮ್. ಯಲ್. ಸಿ ಮಂಜುನಾಥ್ ಭಂಡಾರಿ ಯವರಿಗೆ ಕರೆಮಾಡಿ ರಸ್ತೆಯ ಪರಿಸ್ಥಿತಿ ಬಗ್ಗೆ ವಿವರಿಸಿದರು.
ಮಂಜುನಾಥ್ ಭಂಡಾರಿಯವರು ಗ್ರಾಮಸ್ಥರಿಗೆ ರಸ್ತೆಯನ್ನು ಸರಿಪಡಿಸುವ ಬಗ್ಗೆ ಆಶ್ವಾಸನೆ ನೀಡಿದರು. ಅಂತೆಯೇ ಕಾಂಗ್ರೆಸ್ ಮುಖಂಡರಾದ ಉದಯ ಕುಮಾರ್ ಶೆಟ್ಟಿಯವರನ್ನು ಕರೆಮುಖಾಂತರ ಮಾತನಾಡಿ ಪ್ರತಿಭಟನಾಕಾರಿಗೆ ಬರವಸೆಯನ್ನು ಕೊಟ್ಟರು.
ಗ್ರಾಮಸ್ಥರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ದ್ವನಿ ಎತ್ತಿದರು. ಅಂತೊನಿ ಮಿರಾಂದಾ, ಕು. ಪ್ರಿಯಾ ಯಲ್. ಜಿ, ಶ್ರಿಮತಿ ರಾಧಾ, ಶ್ರೀಮತಿ ಜೆನೆವಿವ್ ಡಿಸೊಜಾ, ಶ್ರೀಮತಿ ಟ್ರೆಸ್ಸಿ ಮಿರಾಂದಾ ಸೇರಿದಂತೆ ಹತ್ತಾರು ಗ್ರಾಮಸ್ಥರು ರಸ್ತೆಯ ಕುಂದುಕೊರತೆಗಳನ್ನು ನಿವಾರಿಸಲು ಕ್ರಮಗೊಳ್ಳಬೆಕು ಇಲ್ಲವಾದರೆ ಬೈಲೂರು ಗ್ರಾಮಪಂಚಾಯತ್ ಕಚೇರಿಯೆದುರು ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದರು
ಈ ಪ್ರತಿಭಟನೆಗೆ ಬೈಲೂರು ಗ್ರಾಮೀಣ ಕಾಂಗ್ರೆಸ್ ಅದ್ಯಕ್ಷರಾದ ಉದಯ ಶೆಟ್ಟಿ, ಬೈಲೂರು ಹಾಗೂ ಬೈಲೂರು, ಕಣಜಾರು, ಕೌಡೂರು ಬ್ಲಾಕ್ ಅದ್ಯಕ್ಷರು ಹಾಜರಾಗಿದ್ದರು.
ಹಾಗೆಯೆ ಸಂಪದ, ಉಡುಪಿ ಸಂಸ್ಥೆಯ ಕಾರ್ಯಕರ್ತೆ ಪ್ರಿಯಾ ಕ್ವಾಡ್ರಾಸ್ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಗೆ ಹಾಜರಿದ್ದರು.
ಈ ಪ್ರತಿಭಟನೆಯು ಶ್ರೀ ಅಂತೊನಿ ಮಿರಾಂದಾರ ನೇತ್ರತ್ವದಲ್ಲಿ ನಡೆಯಿತು.