Blog

ಮೂಡುಬಿದಿರೆ ಲಾಡಿಯಲ್ಲಿ ಫೆ.12 ರಿಂದ 16ರವರೆಗೆ ಬ್ರಹ್ಮಕಲಶೋತ್ಸವ ಸಂಭ್ರಮ

 

ಮೂಡುಬಿದಿರೆ ಲಾಡಿ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನದ  ನೂತನ ಶಿಲಾಮಯ ದೇವಳದ ಅನಾವರಣ
ಹಾಗೂ ಬ್ರಹ್ಮಕಲಶೋತ್ಸವ ಫೆ 12ರಿಂದ 16ವರೆಗೆ ನಡೆಯಲಿದೆ.


ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಜರುಗಲಿರುವುದು.


ಶ್ರೀ ಬ್ರಹ್ಮ ದೇವರು, ಶ್ರೀ ಗಣಪತಿ ಹಾಗೂ ನಾಡುವಿನ ಪ್ರತಿಷ್ಠೆ ವೇದಮೂರ್ತಿ ಮುರಳೀಧರ ತಂತ್ರಿ ಎಡಪದವು ಇವರ ನೇತೃತ್ವದಲ್ಲಿ ಮತ್ತು ಕೊಡಮಣಿತ್ತಾಯ ಮತ್ತು ರಕ್ತೇಶ್ವರಿ ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವ ವೇದ ಮೂರ್ತಿ ರಾಮದಾಸ ಅಸ್ರಣ್ಣ ಖಂಡಿಗ ಇವರ ನೇತೃತ್ವದಲ್ಲಿ ನಡೆಯಲಿದೆ.

ಫೆ. 12ರಂದು ಪೂರ್ವಾಹ್ನ ಗಂಟೆ 8-00ರಿಂದ ಋತ್ವಿಜರ ಸ್ವಾಗತ. ಸಾಮೂಹಿಕ ದೇವತಾ ಪ್ರಾರ್ಥನೆ, ಪ್ರಾಸಾದ ಪರಿಗ್ರಹ, ತೋರಣಮುಹೂರ್ತ, ಉಗ್ರಾಣ ಮುಹೂರ್ತ, ಆಚಾರ್ಯಾದಿ ಋತ್ನಿಗ್ಧರಣ, ಅಥರ್ವಶೀರ್ಷ ಗಣಯಾಗ, ಬ್ರಹ್ಮ ಕೂರ್ಚ ಹೋಮ, ಕಂಕಣಬಂಧ, ಅರಣಿಮಥನ ಸಾಯಂಕಾಲ ಗಂಟಿ 5-00ರಿಂದ ಸಪ್ತಶುದ್ಧಿ, ಪ್ರಾಸಾದಶುದ್ಧಿ, ರಾಕೋಘ್ನಹೋಮ, ವಾಸ್ತು ಪೂಜೆ, ವಾಸ್ತುಬಲಿ, ಪ್ರಾಕಾರಬಲಿ ನಡೆಯಲಿದೆ.
ಫೆ. 13ರಂದು ಧಾರ್ಮಿಕ ಕಾರ್ಯಕ್ರಮ ಪೂರ್ವಾಹ್ನ ಗಂಟೆ 8-00ರಿಂದ ಬಿಂಬ ಶುದ್ಧಿ, ಪ್ರಾಯಶ್ಚಿತ್ತ ಹೋಮ, ನವಗ್ರಹ ಹೋಮ, ಸಾಯಂಕಾಲ ಗಂಟೆ 5-00ರಿಂದ  ದುರ್ಗಾನಮಸ್ಕಾರ ಪೂಜೆ, ಚಕ್ರಾಬ್ಬಮಂಡಲ ಪೂಜೆ ಜರಗಲಿದೆ.
ಫೆ. 12 ರಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಗಂಟೆ 6-30 ಗಂಟೆಯಿಂದ 7-30ರ ವರೆಗೆ –
ಉದಯರಾಗ ವಿದೂಷಿ ಶ್ರೀಮತಿ ಅನುಪಮ ರಾಮದಾಸ ಶೆಣೈ 7-30 ಗಂಟೆಯಿಂದ 9-30ರ ವರೆಗೆ – ಸ್ಯಾಕ್ರೋಫೋನ್ ವಾದನ ಎ. ಸುರೇಶ್ ಮತ್ತು ಬಳಗದವರಿಂದ 10-00 ಗಂಟೆಯಿಂದ 11-30ರ ವರೆಗೆ .ಭಜನಾ ಕಾರ್ಯಕ್ರಮ ರಾಮಕ್ಷತ್ರಿಯ ಭಜನಾ ಸಮಿತಿ ಮೂಡುಬಿದಿರೆ ಇವರಿಂದ ಜರಗಲಿದೆ. ಅಪರಾಹ್ನ 2-30 ಗಂಟೆಯಿಂದ 5-00ರ ವರೆಗೆ – ತಾಳಮದ್ದಲೆ-ಯಕ್ಷೇಪಾಸನಂ ಮೂಡುಬಿದಿರೆ ಇವರಿಂದ,
ಸಾಯಂಕಾಲ 6-00 ಗಂಟೆಯಿಂದ 7.30ರ ವರೆಗೆ – ಸ್ಥಳೀಯ ಪ್ರತಿಭೆಗಳಿಂದ ಪ್ರತಿಭಾ ಪ್ರದರ್ಶನ,7-30 ಗಂಟೆಯಿಂದ 9-30ರವರೆಗೆ- ಯಕ್ಷಗಾನ-ಯಕ್ಷದೇವ ಮಿತ್ರಮಂಡಳಿ, ಬೆಳುವಾಯಿ ಇವರಿಂದ ನಡೆಯಲಿದೆ.

ಫೆ. 13ರಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬೆಳಿಗ್ಗೆ6-30 ಗಂಟೆಯಿಂದ 7-30ರ ವರೆಗೆ ಉದಯರಾಗ ವಿದೂಷಿ ಶ್ರೀಮತಿ ಅನುಪಮ ರಾಮದಾಸ ಶೆಣ್ಣೆ,7-30 ಗಂಟೆಯಿಂದ 9-30ರ ವರೆಗೆ – ನಾಗಸ್ವರ ವಾದನ ಬಿ ದಿನೇಶ್ ದೇವಾಡಿಗ ಅಶ್ವತ್ಥಪುರ ಮತ್ತು ಬಳಗ,10-00 ಗಂಟೆಯಿಂದ 11-30ರ ವರೆಗೆ-ಭಜನಾ ಕಾರ್ಯಕ್ರಮ ಸ್ವಾಮಿ ಶ್ರೀ ನಿತ್ಯಾನಂದ ಬಂಟರ ಮಹಿಳಾ ಭಜನಾ ಸಂಘ ಮೂಡುಬಿದಿರೆ ಇವರಿಂದ,ಅಪರಾಹ್ನ2-30 ಗಂಟೆಯಿಂದ 5-00ರ ವರೆಗೆ -ತಾಳಮದ್ದಲೆ ಯಕ್ಷಕಲಾ ಮಹಿಳಾ ಮಂಡಳಿ ಸುರತ್ಕಲ್, ಸಾಯಂಕಾಲ5-30 ಗಂಟೆಯಿಂದ 8-00ರ ವರೆಗೆ -ಪಂಚವೀಣಾವಾದನ ಹಾಗೂ ಕರ್ನಾಟಕ ಸಂಗೀತ ಹಾಡುಗಾರಿಕೆ ಶ್ರೀಮತಿ ಯಶೋದ ಆಚಾರ್ಯ ಮತ್ತು ಶಿಷ್ಯ ವೃಂದದವರಿಂದ,8-00 ಗಂಟೆಯಿಂದ 9-00ರ ವರೆಗೆ – ನೃತ್ಯ ಸಿಂಚನ, ಅರಾಧನ ನೃತ್ಯ ಕೇಂದ್ರ.ವಿದೂಷಿ ಸುಖದಾ ಬಾರ್ವೆ ಶಿಷ್ಠೆಯರಿಂದ ಜರಗಲಿದೆ.

ಫೆ. 14ರಂದು ಪೂರ್ವಾಹ್ನ ಗಂಟೆ 8-00ರಿಂದ ಚಂಡಿಕಾಹೋಮ, ಮೃತ್ಯುಂಜಯ ಹೋಮ, ಶಾಂತಿಪ್ರಾಯಶ್ಚಿತ್ತ ಹೋಮಗಳು,ನಾಗದೇವರಿಗೆ ಕಲಶಾಭಿಷೇಕ, ದಿನಾಂಕ 14-02-2025ನೇ ಶುಕ್ರವಾರ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬೆಳಿಗ್ಗೆ ಗಂಟೆ 6-30 ಗಂಟೆಯಿಂದ 7-30ರ ವರೆಗೆ -ಉದಯರಾಗ
ವಿದೂಷಿ ಶ್ರೀಮತಿ ಅನುಪಮ ರಾಮದಾಸ ಶೆಣ್ಣೆ,7-30 ಗಂಟೆಯಿಂದ 9-30ರ ವರೆಗೆ – ಶಹನಾಯ್ ವಾದನ ಸಾಯಂಕಾಲ ಗಂಟೆ 5-00ರಿಂದಶಯ್ಯಾಧಿವಾಸ, ಅಧಿವಾಸ ಹೋಮಗಳು, ಆಶ್ಲೇಷಾ ಬಲಿ, ಬಲಿಶಿಲಾ ಪ್ರತಿಷ್ಠೆ,ಬೆಳಿಗ್ಗೆ 10-00 ಗಂಟೆಯಿಂದ 11-30ರ ವರೆಗೆ- ಭಜನಾ ಕಾರ್ಯಕ್ರಮ ಶ್ರೀ ಹಜಂಕಾಲಬೆಟ್ಟ ಭಜನಾ ಮಂಡಳಿ, ತಾಳಮದ್ದಲೆ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ಜರಗಲಿದೆ.
ಭಜನ್ ಸಂಧ್ಯಾ ಯೋಗೀಶ್ ಕಿಣಿ, ಕಾರ್ಕಳ, 8-00 ಗಂಟೆಯಿಂದ 9-00ರ ವರೆಗೆ -ನಾರೀಶಕ್ತಿ – ನೃತ್ಯರೂಪಕ ಬಂಟರ ಸಂಘ ಮಹಿಳಾ ಘಟಕ ಮೂಡುಬಿದಿರೆ ಇವರಿಂದ ನಡೆಯಲಿದೆ.

ದಿನಾಂಕ 15-02-2025ನೇ ಶನಿವಾರ ಪೂ.ಕುಂಭ ಲಗ್ನ ಸುಮೂಹೂರ್ತದಲ್ಲಿ ಪರಮಪೂಜ್ಯ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಉಪಸ್ಥತಿಯಲ್ಲಿ ಶಿಖರ ಪ್ರತಿಷ್ಠೆ, ನೂತನ ಶಿಲಾಮಯ ದೇವಳದ ಅನಾವರಣ, ಚತುರ್ಮುಖ ಬ್ರಹ್ಮ – ಬಲಮುರಿ ಗಣಪತಿ, ನಾಡು ಸಹಿತ ಕುಂಭಕಂಠಿಣಿ, ರಕ್ತಶ್ವರಿ ದೈವಗಳ ಬಿಂಬ ಪ್ರತಿಷ್ಠೆ, ತತ್ತ್ವ ಹೋಮ, ತತ್ತ್ವ ಕಲಶಾಭಿಷೇಕ, ಸಾಂಸ್ಕೃತಿಕ ಕಾರ್ಯಕ್ರಮ ಬೆಳಿಗ್ಗೆ6-30 ಗಂಟೆಯಿಂದ 7-30ರ ವರೆಗೆ -ಉದಯರಾಗ ವಿದೂಷಿ ಶ್ರೀಮತಿ ಅನುಪಮ ರಾಮದಾಸ ಶೆಣೈ ಸಾಯಂಕಾಲ ಗಂಟೆ 5-00ರಿಂದ ಮಂಡಲ ಪೂಜೆ, ಸಹಸ್ರ (1001) ಕಲಶ ಬ್ರಹ್ಮ ದೇವರಿಗೆ 108 ಕಲಶ, ಗಣಪತಿ ದೇವರಿಗೆ 48 ಕಲಶ ನಾಡುವಿಗೆ 48 ಕಲಶ, ಪರಿವಾರ ದೈವಗಳಿಗೆ ದ್ರವ್ಯ ಸಹಿತ ಬ್ರಹ್ಮಕಲಶ ಪ್ರತಿಷ್ಠೆ, ಅಧಿವಾಸ ಹೋಮಗಳು ಬೆಳಿಗ್ಗೆ 7-30 ಗಂಟೆಯಿಂದ 9-30ರ ವರೆಗೆ -ಸ್ಯಾಕ್ರೋಫೋನ್ ವಾದನ ಪ್ರೇಕ್ಷಾ, ಧನ್ನ ಮತ್ತು ಹೈಸ್ಪಿ ಎಸ್.ಇವರಿಂದ,10-00 ಗಂಟೆಯಿಂದ 11-00ರ ವರೆಗೆ – ಭಜನಾ ಕಾರ್ಯಕ್ರಮ ಅಪರಾಹ್ನ2-30 ಗಂಟೆಯಿಂದ 4-00ರ ವರೆಗೆ ಯಕ್ಷ-ಗಾನ-ನಾಟ್ಯ-ವೈಭವ ಸಾಯಂಕಾಲ 6-00 ಗಂಟೆಯಿಂದ 8-30ರ ವರೆಗೆ-
ನೃತ್ಯಾರ್ಪಣಂ -ನಾಟ್ಯನಿಲಯಂ, ಬಾಲಕೃಷ್ಣ ಮಂಜೇಶ್ವರ ಮತ್ತು ಬಳಗದವರಿಂದ ( ಭರತನಾಟ್ಯ ಮತ್ತು ಜಾನಪದ ನೃತ್ಯ ) ಯಕ್ಷಗಾನ, ಯಕ್ಷಕೃಷ್ಣ ಬಳಗ ಮೂಡುಬಿದಿರೆ ಇವರಿಂದ ಜರಗಲಿದೆ. ಫೆ 15ರಂದು ಶನಿವಾರ ಕುಂಭ ಲಗ್ನ ಸುಮೂಹೂರ್ತದಲ್ಲಿ ಪರಮಪೂಜ್ಯ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಶಿಖರ ಪ್ರತಿಷ್ಠೆ, ನೂತನ ಶಿಲಾಮಯ ದೇವಳದ ಅನಾವರಣ,ಚತುರ್ಮುಖ ಬ್ರಹ್ಮ- ಬಲಮುರಿ ಗಣಪತಿ, ನಾಡು ಸಹಿತ ಕುಂಭಕಂಠಿಣಿ, ರಕೇಶ್ವರಿ ದೈವಗಳ ಬಿಂಬ ಪ್ರತಿಷ್ಠೆ ತನ್ನ ಹೋಮ, ತತ್ವಕಲಶಾಭಿಷೇಕ ಜರಗಲಿದೆ. ಸಂಜೆ ಮಂಡಲ ಪೂಜೆ,ಸಹಸ್ರ (1001) ಕಲಶ ಬ್ರಹ್ಮ ದೇವರಿಗೆ 108 ಕಲಶ, ಗಣಪತಿ ದೇವರಿಗೆ 48 ಕಲಶ ನಾಡುವಿಗೆ 48 ಕಲಶ, ಪರಿವಾರ ದೈವಗಳಿಗೆ ದ್ರವ್ಯ ಸಹಿತ ಬ್ರಹ್ಮಕಲಶ ಪ್ರತಿಷ್ಠೆ, ಅಧಿವಾಸ ಹೋಮಗಳು ನಡೆಯಲಿವೆ.

ಧಾರ್ಮಿಕ ಸಭೆ: ಫೆ 15ರಂದು ಸಂಜೆ 4.30ರಿಂದ ಜರಗುವ ಧಾರ್ಮಿಕ ಸಭೆಯನ್ನು ಶ್ರೀಕ್ಷೇತ್ರ
ಧರ್ಮಸ್ಥಳದ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಉಡುಪಿ ಅಧೋಕ್ಷಜ ಮಠ ಪೇಜಾವರದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅನಂತಕೃಷ್ಣ ರಾವ್ ಅಧ್ಯಕ್ಷತೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಪುರಸಭಾಧ್ಯಕ್ಷೆ ಶ್ರೀಮತಿ ಜಯಶ್ರೀ ಕೇಶವ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ, ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ, ಪುರಸಭಾ ಸದಸ್ಯ ಸುರೇಶ್ ಪ್ರಭು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಫೆ 16ರಂದು ಅಪರಾಹ್ನ 12.105 ವೃಷಭ ಲಗ್ನ ಸುಮೂಹೂರ್ತದಲ್ಲಿ ಶ್ರೀ ಪೇಜಾವರ ಮಠಾಧೀಶರಿಂದ ಬ್ರಹ್ಮಕಲಶಾಭಿಷೇಕ,ಮಹಾಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ಜರಗಲಿದೆ. ಪೂರ್ವಹ್ನದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ರಂಗಪೂಜೆ, ಬಲಿ ಮಹೋತ್ಸವ, ಹಾಗೂ ಪರಿವಾರ ಧರ್ಮದೈವಗಳಿಗೆ ನೇಮೋತ್ಸವ ಫೆ 17ರಂದು ಮಂಗಲ ಗಣಯಾಗ, ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ ನಡೆಯಲಿದೆ.

Related posts

ಲೋಕಸಭೆಯಲ್ಲಿ ಅಂಬೇಡ್ಕರ್ ಅವಹೇಳನ – ರಾಜ್ಯದಲ್ಲಿ ಮಹಿಳಾ ಸಚಿವರ ಮೇಲೆ ಅಶ್ಲೀಲ ಪದ ಪ್ರಯೋಗ ಇದು ಬಿಜೆಪಿ ಸಂಸ್ಕೃತಿ

Madhyama Bimba

ಸಾಧು ಪೂಜಾರಿ ನಿಧನ

Madhyama Bimba

ಶಾಲಾ ಬಸ್ ಬೈಕ್ ಅಪಘಾತ * ಬೈಕ್ ಸವಾರ ಮೃತ್ಯು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More