ಕಾರ್ಕಳದ ಜೋಡುರಸ್ತೆಯ ಕುಂಭ ಶ್ರೀ ವಿವಿದೋದ್ದೇಶ ಸಹಕಾರ ಸಂಘದ ಸ್ವಂತ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭವು ಫೆಬ್ರವರಿ 9 ರಂದು ಆದಿತ್ಯವಾರ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಮೂಲ್ಯ ಹಾಗು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೃದಯ ಕುಲಾಲ್ ತಿಳಿಸಿದ್ದಾರೆ.
ನಾಳೆ ಆದಿತ್ಯವಾರ ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
ವಿಶೇಷ ಕೊಡುಗೆ
ಕುಂಭಶ್ರೀ ವಿವಿದೋದ್ದೇಶ ಸಹಕಾರ ಸಂಘವು ಹೊಸ ಕಟ್ಟಡ ಉದ್ಘಾಟನಾ ಸಂದರ್ಭದಲ್ಲಿ ವಿಶೇಷ ಡಿಪಾಸಿಟ್ ಕೊಡುಗೆಯನ್ನು ನೀಡಲಿದೆ.
ಫೆಬ್ರವರಿ 28ರೊಳಗಾಗಿ ಈ ಸಂಘದಲ್ಲಿ ಠೇವಣಿ ಇರಿಸಿದವರಿಗೆ ಶೇಕಡಾ 10 ಬಡ್ಡಿ ನೀಡುವುದಾಗಿ ಸಂಘವು ತಿಳಿಸಿದೆ.
ಇದರ ಜೊತೆಗೆ 8.5 ವರ್ಷದಲ್ಲಿ ಡಿಪಾಸಿಟ್ ದ್ವಿಗುಣ ಮಾಡುವ ಯೋಜನೆ ಕೂಡ ಹಮ್ಮಿ ಕೊಳ್ಳಲಾಗಿದೆ.
ಗ್ರಾಹಕರಿಗಾಗಿ ಹಲವಾರು ಸಾಲ ಯೋಜನೆ ಗಳು ಈ ಸಹಕಾರಿ ಸಂಘದಲ್ಲಿ ನೀಡಲಿದ್ದೇವೆ ಎಂದು ಸಹಕಾರ ಸಂಘವು ತಿಳಿಸಿದೆ
previous post
next post