6ಪಿಸಿಎ ಮತ್ತು ಆರ್‌ಡಿ ಬ್ಯಾಂಕ್ ಬಿಲ್ಡಿಂಗ್ ಎಸ್. ಸಿ. ಡಿ. ಸಿ. ಸಿ. ಬ್ಯಾಂಕ್ ಮೇಲ್ಗಡೆ 2ನೇ ಮಹಡಿ ಮಂಗಳೂರು ರಸ್ತೆ ಕಾರ್ಕಳ ಇಲ್ಲಿ ಫೆ.2 ರಂದು ಸೇಫ್‌ಗಾರ್ಡ್ ಸೆಕ್ಯೂರಿಟಿ ಸಂಸ್ಥೆ ಶುಭರಾಂಭಗೊಂಡಿತು. ಕಾರ್ಕಳ ನಗರ ಪೊಲೀಸ್ ಠಾಣೆಯ ಜಯಂತ್ ಕಚೇರಿ ಉದ್ಘಾಟನೆ ಹಾಗೂ ಶಿವರಾಜ್ ವೈಬ್‌ಸೈಟ್ ಅನಾವರಣಗೊಳಿಸಿ ಶುಭಹಾರೈಸಿದರು.
*ಸೇಫ್‌ಗಾರ್ಡ್ ಸೆಕ್ಯುರಿಟಿ ಸಂಸ್ಥೆಯ ಕಾರ್ಯ*
ಸೇಫ್ ಗಾರ್ಡ್ ಸೆಕ್ಯೂರಿಟಿ ಸಂಸ್ಥೆಯು ಪೊಲೀಸ್ ಇಲಾಖೆಯ ಸಮ್ಮತಿಯೊಂದಿಗೆ ನಿಯಂತ್ರಣ ಕೊಠಡಿ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಕಳ್ಳತನ ಪ್ರಕರಣಗಳನ್ನು ತಡೆ ಹಿಡಿಯುವ ಉದ್ದೇಶದಿಂದ ಮತ್ತು ಕಳ್ಳತನ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರಿಗೆ ಮತ್ತು ಸಂಬಂಧಪಟ್ಟ ವ್ಯಕ್ತಿಗೆ ಸೇಫ್ ಗಾರ್ಡ್ ಸೆಕ್ಯೂರಿಟಿ ಸಂಸ್ಥೆ ಸಹಕರಿಸುತ್ತದೆ. ಸಂಸ್ಥೆ ಉಚಿತವಾಗಿ ಸಿ.ಸಿ. ಕ್ಯಾಮರಾವನ್ನು ಅಳವಡಿಸಲಿದ್ದು, ತಿಂಗಳ ಬಾಡಿಗೆ 2 ಸಾ. ರೂ. ಆಗಿದೆ. ಗ್ರಾಹಕರು ಶುಲ್ಕವನ್ನು ಪ್ರತಿ ತಿಂಗಳ ಆರಂಭದಲ್ಲಿ ಪಾವತಿಸಬೇಕು. ಪ್ರತಿ ದಿನ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6ರ ತನಕ ನೇರ ವೀಕ್ಷಣೆಯಿದೆ. ಬೇಕಾದಲ್ಲಿ 24 ಗಂಟೆಗಳ ಕಾಲ ನೇರ ವೀಕ್ಷಣೆಯೂ ಲಭ್ಯವಿದೆ. ಸಂಸ್ಥೆಯಿಂದ ಸಿ.ಸಿ. ಕ್ಯಾಮೆರಾ ಅಳವಡಿಸಿದ ಸ್ಥಳದ ನೇರ ವೀಕ್ಷಣೆ ಮಾಡುತ್ತಿರುವಾಗ ಯಾವುದೇ ಘಟನೆ ಸಂಭವಿಸುವುದು ಗಮನಕ್ಕೆ ಬಂದ ಕೂಡಲೇ ಆ ದೃಶ್ಯಾವಳಿಯನ್ನು ಆ ಸಂಸ್ಥೆಯ ಮುಖ್ಯಸ್ಥರಿಗೆ ವಾಟ್ಸಾಪ್ ಮುಖಾಂತರ ಕಳುಹಿಸಲಾಗುವುದು.
ಬ್ಯಾಂಕ್‌ಗಳು, ಸೊಸೈಟಿ, ಅಭರಣ ಮಳಿಗೆಗಳು, ದೇವಸ್ಥಾನಗಳು, ಚರ್ಚ್, ಮಸೀದಿ, ಮನೆಗಳು, ಶಾಲೆ-ಕಾಲೇಜು, ಕಾರ್ಖಾನೆಗಳು, ಗೋಡಾನ್
ಕಟ್ಟಡ ಕಾಮಗಾರಿ ನಡೆಯುವ ಸ್ಥಳ, ಕೃಷಿ ಭೂಮಿ ಅಥವಾ ಅಡಿಕೆ ತೋಟ, ಚಾರ್ಜ್ ಮಾಡುವ ವಾಹನಗಳು ಮತ್ತು ರಸ್ತೆ ಬದಿಯಲ್ಲಿ ನಿಲ್ಲಿಸಿದ ವಾಹನಗಳು ಇರುವ ಸ್ಥಳ, ತಾತ್ಕಾಲಿಕವಾಗಿ ಮದುವೆ ಸಭಾಂಗಣ ಹಾಗೂ ಇನ್ನಿತರ ಸಾರ್ವಜನಿಕ ಸಮಾರಂಭ ಹಾಗೂ ಉತ್ಸವ ಹೀಗೆ ಮುಂತಾದೆಡೆ ಸಿ.ಸಿ. ಕ್ಯಾಮೆರಾ Mob : 9972770851 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.
