ಪಡುಕುಡೂರು : ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಅರ್ಪಿಸಿದ ಜನನಿ ಟ್ರೋಫಿ 2024. : ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಕಾರ್ಯ ಎಲ್ಲರಿಗೂ ಮಾದರಿ : ಉದಯ ಕುಮಾರ್ ಶೆಟ್ಟಿ
ಪಡುಕುಡೂರು : ದುಡಿದ ಒಂದಂಶ ಒಟ್ಟು ಮಾಡಿ ಸಮಾಜ ಮುಖಿ ಕೆಲಸ ಮಾಡುವ ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಕಾರ್ಯ ಎಲ್ಲರಿಗೂ ಮಾದರಿ. ಸಮಾಜದ ಸರ್ವ ಮುಖ ಸೇವೆಯಲ್ಲಿ ಎಲ್ಲರೂ ಸಕ್ರೀಯವಾಗಿ ಕೆಲಸ ಮಾಡುವಂತಾಗಲಿ, ಕ್ರೀಡೆಯಿಂದ ಆರೋಗ್ಯದ ಬದುಕಿಗೆ ಭವಿಷ್ಯವಿದೆ ಎಂದು ಸರ್ಕಾರ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಹೇಳಿದರು.
ಅವರು ಇತ್ತೀಚೆಗೆ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆದ ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಅರ್ಪಿಸಿದ ಜನನಿ ಟ್ರೋಫಿ 2024 ಪಂದ್ಯಾಟದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರು ಬೀಡು ಎಂ.ಡಿ.ಅಧಿಕಾರಿ ಪುತ್ಥಳಿ ಪ್ರತಿಷ್ಠಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಡುಕುಪರ್ಕಳ ಹರೀಶ ಶೆಟ್ಟಿ ಮುಂಬಯಿ ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಸೇವಾ ಕಾರ್ಯವನ್ನು ಪ್ರಶಂಸಿದರು. ಪಡುಕುಡೂರು ಶ್ರೀ ಭದ್ರಕಾಳಿ ದೇವಸ್ಥಾನದ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ ಪಂದ್ಯಾಟ ಉದ್ಘಾಟಿಸಿದರು. ಪಡುಕುಡೂರು ಶಾಲೆಯ ಕ್ರೀಡಾ ಸಾಧಕ ವಿದ್ಯಾರ್ಥಿಗಳಾದ ದೀಕ್ಷಾ ಆಚಾರ್ಯ ಎಳ್ಳಾರೆ, ಸುಚಿತಾ ಮಾವಿನಕಟ್ಟೆ, ಪ್ರಣೀತಾ ಪಡುಕುಡೂರು, ಸಾನ್ವಿಕಾ ಕೆಳ ಖಜಾನೆ, ಕರಾಟೆಯಲ್ಲಿ ಸಾಧನೆ ಮಾಡಿದ ಮುನಿಯಾಲು ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಸನ್ವಿತ್ ಮತ್ತು ಮುಳ್ಕಾಡುವಿನ ಶರಣ್ಯ ಅವರನ್ನು ಸನ್ಮಾನಿಸಲಾಯಿತು. ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ ಅಧ್ಯಕ್ಷರಾದ ಚೇತನ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸೇವೆ ಮಾಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ವಿವಿಧ ಪ್ರಮುಖರಾದ ಮುದ್ರಾಡಿ ಮಂಜುನಾಥ ಪೂಜಾರಿ, ರತ್ನಾಕರ ಆಮೀನ್, ಸುಕೇಶ ಹೆಗ್ಡೆ ಕಡ್ತಲ, ಹರೀಶ್ ಶೀನಾ ಪೂಜಾರಿ, ನಾರಾಯಣ ಆಚಾರ್ಯ ಗರ್ಧರಬೆಟ್ಟು, ಜನನಿ ಫ್ರೆಂಡ್ಸ್ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಬ್ಬಿನಾಲೆ ಫ್ರೆಂಡ್ಸ್ ವಿನ್ನರ್ ಮತ್ತು ಜನನಿ ಫ್ರೆಂಡ್ಸ್ ರನ್ನರ್ ಪ್ರಶಸ್ತಿ ಪಡೆಯಿತು.