ಕಾರ್ಕಳ : ಮಿನಿ ಟೆಂಪೊವೊಂದು ಬ್ರೆಕ್ ವೈಪಲ್ಯಗೊಂಡು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮವಾಗಿ ಓರ್ವ ಮ್ರತಪಟ್ಟು ನಾಲ್ವರು ಗಾಯಗೊಂಡ ಘಟನೆ ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಮಾಳ ಮುಳ್ಳೂರು ಎಂಬಲ್ಲಿ ನಡೆದಿದೆ
ಮ್ರತನನ್ನು ಮಹಾರಾಷ್ಟ್ರ ಮೂಲದ ಜಿತೇಂದರ್ (38) ಎಂದು ಗುರುತಿಸಲಾಗಿದೆ
ವಾಹನದಲ್ಲಿ ಪ್ರಯಾಣಿಕರೆಲ್ಲಾ ಜಾತ್ರಾ ವ್ಯಾಪಾರಿಗಳಾಗಿದ್ದು
ಕಳಸ ಜಾತ್ರೆ ಮುಗಿಸಿ ಮಂದಾರ್ತಿ ಜಾತ್ರೆಗೆ ಹೋಗುತ್ತಿದ್ದ ವ್ಯಾಪಾರಿಗಳು ಪ್ರಯಾಣಿಸುತ್ತಿದ್ದ ವಾಹನ ಮಾಳ ಮುಳ್ಳೂರು ಘಾಟಿ ಕೆಳಗೆ ಪೆಟ್ರೋಲ್ ಬಂಕ್ ಬಳಿ ಬ್ರೇಕ್ ವೈಫಲ್ಯಕ್ಕೊಳಗಾಗಿ ಪಲ್ಟಿ ಹೊಡೆದಿದ್ದು, ನಾಲ್ವರು ಗಂಭೀರಗೊಂಡಿದ್ದು, ಚಿಂತಾಜನಕ ಸ್ಥಿತಿ ಯಲ್ಲಿದ್ದ
ಜಿತೆಂದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಲಕಾರಿಯಾಗದೆ ಮ್ರತ ಪಟ್ಟಿದ್ದಾರೆ
ಗಾಯಾಳುಗಳಲ್ಲಿ ಹುಬ್ಬಳ್ಳಿ
ರಾಜ(37) , ಆದಿತ್ಯ (೨೦) ಭದ್ರಾವತಿಯ ಬಾಬು (55)
ಶಾಬಾಸ್ (25) ಗಂಬೀರ ಗಾಯಗೊಂಡವರು.
ಗಾಯಾಳುಗಳು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ