ಕಾರ್ಕಳ

ಜ್ಞಾನಸುಧಾದ 47 ಜೆ.ಇ.ಇ ಮೈನ್ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ- 3.075ಲಕ್ಷ ರೂಪಾಯಿ ಪ್ರೋತ್ಸಾಹಧನ ವಿತರಣೆ- ನಾಲ್ವರು ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂಪಾಯಿ ನಗದು ಪುರಸ್ಕಾರ

ಕಾರ್ಕಳ: ತಂದೆ-ತಾಯಿ-ಗುರುಗಳಿಗೆ ವಂದಿಸಿ ಪಡೆದ ವಿದ್ಯೆಯು ವಿದ್ಯಾರ್ಥಿಯ ಸಾಧನೆಗೆ ಕಾರಣವಾಗುತ್ತದೆ. ಸಂಕಲ್ಪ ಶುದ್ಧದಿಂದ ಇಟ್ಟ ಹೆಜ್ಜೆಯು ಯಶಸ್ಸನ್ನೇ ತಂದು ಕೊಡುತ್ತದೆ. ಯಶಸ್ವಿ ಬದುಕಿನ ಸಾರ್ಥಕತೆ ಪೋಷಕರದ್ದಾಗುತ್ತದೆ ಎಂದು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಹೇಳಿದರು.

ಅವರು ರಾಷ್ಟ್ರೀಯ ಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕೆ ಎನ್.ಟಿ.ಎ ನಡೆಸಿದ ಪ್ರಥಮ ಹಂತದ ಜೆ.ಇ.ಇ ಮೈನ್ ಫಲಿತಾಂಶದಲ್ಲಿ 97ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ 47 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಸಾಧಕರಿಗೆ ಸನ್ಮಾನ ಹಾಗೂ ನಗದು ಪುರಸ್ಕಾರ
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ 99.6ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳಾದ ಧನುಶ್ ನಾಯಕ್, ತರುಣ್ ಎ. ಸುರಾನ, ಚಿಂತನ್ ಜೆ.ಎಂ ಮತ್ತು ಆಕಾಶ್ ಎಚ್ ಪ್ರಭು ಇವರಿಗೆ ತಲಾ 50ಸಾವಿರ ರೂಪಾಯಿಯನ್ನು, 99ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಹೃತ್ವಿಕ್ ಶೆಟ್ಟಿ, ಮನೋಜ್ ಕಾಮತ್, ವೇದಾಂತ್ ಶೆಟ್ಟಿ ಮತ್ತು ಸತೀಶ್ ಎಸ್.ಕೆ. ಇವರಿಗೆ ತಲಾ 20 ಸಾವಿರ ರೂಪಾಯಿ ನೀಡಿ ಗೌರವಿಸಲಾಯಿತು.
98ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳಾದ ಪ್ರೇರಣ್ ಕೆ..ಎ, ವಿಷ್ಣು ಧರ್ಮ ಪ್ರಕಾಶ್, ಸನತ್.ವಿ..ರಾವ್, ಅಪೂರ್ವ್ ವಿ.ಕುಮಾರ್, ಚಿರಾಗ್‌ಆರ್ ಶೆರಿಗಾರ್, ಮನೋಜ್‌ಎಸ್.ಎ, ಅಮರ್ಥ್ಯ ಭಟ್, ಅಮೋಘ್ ಎ, ಸರ್ವಜಿತ್ ಕೆ.ಆರ್. ಅದ್ವೈತ್ ಬೀಡು, ಆದಿತ್ಯ ಕೃಷ್ಣ ಟಿ., ಸೃಷ್ಠಿ, ಸಿದ್ಧಾರ್ಥ್ ಎ, ಅಭಿರಾಮ್‌ತೇಜ ಪಿ, ಆದಿತ್ಯಅಡಿಗ, ಹರ್ಷಿತ್, ಮಯೂರ್ ಎಂ ಗೌಡ., 97ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಶ್ರೀಹರಿ ಎಸ್.ಜಿ. ಯವ ತನ್ಮಯ್ ಜಿ.ಎಸ್, ಆಕಾಶ್ ಡಿ, ಸನಿಹ ದೇವಾಡಿಗ, ವಿಷ್ಣು ಜಿ. ನಾಯಕ್, ಪ್ರಣೀತ್ ನಾಯಕ್, ವಿಶ್ವಾಸ್ ಆರ್ ಆತ್ರೇಯಾಸ್, ನಿರಂಜನ್ ಎಂ. ಕೆ, ಶ್ರಾವ್ಯ, ಪ್ರತೀಕ್ ನಾಯಕ್, ವೈಷ್ಣವಿ ಶೆಟ್ಟಿ, ನಿಹಾರ್ ಜೆ. ಎಸ್, ಗೌರವ್ ಎನ್, ಹರ್ಷಾ ಯು ಪೂಜಾರಿ, ಚಿರಾಗ್ ಶೆಟ್ಟಿ ಬಿ, ವಿನುತ್ ನಾಯ್ಕವಾಡಿ, ಚೈತನ್ಯಎನ್. ಭಟ್, ರಕ್ಷಿತ್, ಉತ್ಸವ್ ಸಿ.ಪಟೇಲ್, ರಿಯಾ ರೀಶಾಲ್ ಡಿಸೋಜ, ವರುಣ್ ಪ್ರಭು ಮತ್ತು ದ್ರುವ ಗಂಗಾಧರ್ ವಾಲಿ ಇವರನ್ನು ತಲಾ ಒಂದು ಸಾವಿರ ನಗದು ನೀಡಿ ಸನ್ಮಾನಿಸಲಾಯಿತು.


ಜೆ.ಇ.ಇ ಮೈನ್ ಮೊದಲ ಹಂತದ ಪರೀಕ್ಷಾ ಫಲಿತಾಂಶದಲ್ಲಿ ಜ್ಞಾನಸುಧಾದ 4 ವಿದ್ಯಾರ್ಥಿಗಳು 99.6ಕ್ಕೂ ಅಧಿಕ ಪರ್ಸಂಟೈಲ್, 8 ವಿದ್ಯಾರ್ಥಿಗಳು 99ಕ್ಕೂ ಅಧಿಕ ಪರ್ಸಂಟೈಲ್, 25 ವಿದ್ಯಾರ್ಥಿಗಳು 98 ಪಸಂಟೈಲ್‌ಗಿಂತ ಅಧಿಕ,47 ವಿದ್ಯಾರ್ಥಿಗಳು 97 ಪಸಂಟೈಲ್‌ಗಿಂತ ಅಧಿಕ, 98 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ ಪರ್ಸಂಟೈಲ್, 194ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪಸಂಟೈಲ್ ಗಳಿಸಿರುತ್ತಾರೆ.


ವೇದಿಕೆಯಲ್ಲಿ ಎ.ಪಿ.ಜಿ.ಇ.ಟಿ. ಟ್ರಸ್ಟಿ ಅನಿಲ್ ಕುಮಾರ್‌ಜೈನ್, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ಹಾಗೂ ಪ್ರಾಂಶುಪಾಲರಾದ ದಿನೇಶ್ ಎಂ. ಕೊಡವೂರ್, ಉಡುಪಿ ಜ್ಞಾನಸುಧಾ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸಂತೋಷ್, ಕಾರ್ಕಳ ಜ್ಞಾನಸುಧಾ ಪ.ಪೂ. ಉಪಪ್ರಾಂಶುಪಾಲರುಗಳಾದ ಸಾಹಿತ್ಯ, ಶ್ರೀಮತಿ ಉಷಾ ರಾವ್‌ಯು, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲೆ ಶ್ರೀಮತಿ ವಾಣಿಕೆ., ಪಿ.ಆರ್.ಒ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಹಾರಗಳ ಡೀನ್ ಡಾ.ಮಿಥುನ್ ಯು, ಡೀನ್ ಸ್ಟೂಡೆಂಟ್ಸ್ ಅಫೈರ್ ಶ್ರೀಮತಿ ಶಕುಂತಲಾ ಎಂ ಸುವರ್ಣ, ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯ ಮುಖ್ಯ ಸಂಯೋಜಕ ಹಾಗೂ ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಸಂದೀಪ, ಕಾರ್ಕಳ ಜ್ಞಾನಸುಧಾದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಅಭೀಶ್ ಜೈನ್, ಉಡುಪಿಯ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಸಹಸಂಯೋಜಕ ಪ್ರವೀಣ್ ಜಾನ್ ಡಿ. ಅಲ್ಮೆಡಾ, ಉಡುಪಿ ಜ್ಞಾನಸುಧಾ ಪ.ಪೂ.ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀನಿಧಿ ಭಾಗವತ್, ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಜ್ಞಾನಗೋಪಾಲ ವಿದ್ಯಾರ್ಥಿನಿಲಯದ ಮುಖ್ಯ ನಿಲಯಪಾಲಕ ಮಂಜುನಾಥ ಮುದ್ರಾಡಿ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಜೂಲಿಯೆಟ್ ಬಬಿತಾಕ್ವಾಡ್ರಸ್, ಜ್ಞಾನಪದ್ಮ ವಿದ್ಯಾರ್ಥಿ ನಿಲಯದ ಮುಖ್ಯ ನಿಲಯಪಾಲಕಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆ, ಹಿತೈಶಿ ಶ್ರೀ ತ್ರಿವಿಕ್ರಮಕಿಣಿ ಉಪಸ್ಥಿತರಿದ್ದರು.


ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪ್ರಜ್ವಲ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

Related posts

ಉಡುಪಿ: ಉಚಿತ ವಾಕ್ ಮತ್ತು ಶ್ರವಣ ದೋಷ ತಪಾಸಣಾ ಶಿಬಿರ ಹಾಗೂ ಶ್ರವಣ ಯಂತ್ರ ವಿತರಣೆ

Madhyama Bimba

ಅಂಗನವಾಡಿ ಕಾರ್ಯಕರ್ತೆ- ಸಹಾಯಕಿಯರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

Madhyama Bimba

ಹೆಬ್ರಿಯಲ್ಲಿ ಹಣ ಕಳವು- ಪ್ರಕರಣ ದಾಖಲು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More