ಕಾರ್ಕಳ: ಮೋಟಾರ್ ಸೈಕಲಿಗೆ ಹಿಂದಿನಿಂದ ಟಿಪ್ಪರ್ ಢಿಕ್ಕಿಯಾದ ಘಟನೆ ಬೆಳ್ಮಣ್ ಶಿವನೇತ್ರ ಪ್ರಿಂಟರ್‍ಸ್ ಬಳಿ ಫೆ. 12ರಂದು ನಡೆದಿದೆ.
ಕಿಶೋರ ಗಾಯಗೊಂಡವರು. ಇವರು ತಮ್ಮ ಬಜಾಜ್ ಪಲ್ಸರ್ ಮೋಟಾರ್ ಸೈಕಲ್‌ನಲ್ಲಿ ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಹೋಗುತ್ತಿದ್ದಾಗ, ಅದೇ ಸಮಯದಲ್ಲಿ ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಟಿಪ್ಪರ್ ಚಾಲಕ ವಿಠಲ ಎಂಬಾತನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಟಿಪ್ಪರನ್ನು ತನ್ನ ಬಲಗಡೆಗೆ ತಿರುಗಿಸಿ ಕಿಶೋರ ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಸೈಕಲ್ ಸವಾರ ಕಿಶೋರ್ ರಸ್ತೆಗೆ ಬಿದ್ದು ಬಲಕೈಯ ಅಂಗೈಗೆ ಮತ್ತು ಎಡಕಾಲಿನ ತೊಡೆಗೆ ರಕ್ತ ಗಾಯವಾಗಿದ್ದು, ಮೋಟಾರು ಸೈಕಲ್ ಜಖಂಗೊಂಡಿರುತ್ತದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.