ಹೆಬ್ರಿ : ಕೃಷಿಕರಾದ ನಿವೃತ್ತ ಮುಖ್ಯ ಶಿಕ್ಷಕ ಶಿವಪುರ ಗ್ರಾಮದ ಯಳಗೋಳಿ ಭೋಜ ಶೆಟ್ಟಿ (95) ಬುಧವಾರ ನಿಧನರಾದರು.
ರಂಗಪ್ರೇಮಿಯಾಗಿದ್ದ ಭೋಜ ಶೆಟ್ಟಿಯವರು ನಾಟಕಗಳಲ್ಲಿ ಅಭಿನಯಿಸಿದ್ದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ನಿಕಟವರ್ತಿಯಾಗಿದ್ದರು. ಹೆಬ್ರಿ ಅಜೆಕಾರು ವಲಯ ಬಂಟರ ಸಂಘದಲ್ಲಿ ಹಲವಾರು ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದರು.
ಮೃತರಿಗೆ ಪತ್ನಿ, 3 ಗಂಡು 1 ಹೆಣ್ಣು ಮಗಳಿದ್ದಾರೆ.