ಶತಮಾನಗಳ ಇತಿಹಾಸವಿರುವ ನಡ್ಯೋಡಿ ದೈವಸ್ಥಾನ ಮಾರ್ಪಾಡಿ-ಕಲ್ಲಬೆಟ್ಟು ಇದರ ನಾಲ್ಕನೇ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ನೇಮೋತ್ಸವವು ಫೆ.25ರಿಂದ ಮಾರ್ಚ್ ೩ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ, ಅಧ್ಯಕ್ಷರಾದ ದಿಲೀಪ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಮಾಯಂದಲೆ ದೇವಿಯ ಮೂರ್ತಿ ಪುನರ್ ಪ್ರತಿಷ್ಠೆ, ನೂತನ ಮುಖಮಂಟಪ ಮತ್ತು ರಾಜಗೋಪುರ ಲೋಕಾರ್ಪಣೆಗೊಳ್ಳಲಿದೆ.
ಫೆ.25ರಂದು ಸಂಜೆ 4 ಗಂಟೆಗೆ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಿಂದ ನಡ್ಯೋಡಿ ದೈವಸ್ಥಾನಕ್ಕೆ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮೂಡಾ ಅಧ್ಯಕ್ಷರಾದ ಹರ್ಷವರ್ಧನ ಪಡಿವಾಳ್ ಹೊರೆಕಾಣಿಕೆ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಸಂಜೆ 6-30 ಕ್ಕೆ ಮಾರೂರು ಖಂಡಿಗ ಶ್ರೀರಾಮದಾಸ್ ಅಸ್ರಣ್ಣರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಎಂ.ಜೆ ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊ ಇವರಿಂದ ನೃತ್ಯ ವೈವಿಧ್ಯ ಬಳಿಕ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.
ಫೆ.26 ರಂದು ರಾತ್ರಿ 7 ಕ್ಕೆ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ, ಬಳಿಕ ನಡ್ಯೋಡಿ ಮಹಿಳಾ ಮಂಡಲ ಹಾಗೂ ಸ್ಥಳೀಯ ಕಲಾವಿದೆಯವರ ಕೂಡುವಿಕೆಯಿಂದ ‘ನನ ಏಪಲ ಇಂಚೆನೆ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಫೆ.27 ಕ್ಕೆ ರಾತ್ರಿ 7 ರಿಂದ ನಡ್ಯೋಡಿ ದೈವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ, ದಾವಿಗಳಿಗೆ ಸನ್ಮಾನ, ರಾತ್ರಿ ಗಂಟೆ 9 ಕ್ಕೆ ಸ್ಥಳೀಯ ಹಾಗೂ ಅತಿಥಿ ಕಲಾವಿದರಿಂದ ‘ಪರಕೆದ ಹೊಟೈಲ್’ ತುಳು ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಫೆ.28 ರಂದು ಬೆಳಿಗ್ಗೆ 7 ಕ್ಕೆ ಮಾಯಂದಲೆ ದೇವಿಯ ಮೂರ್ತಿ ಪುನರ್ ಪ್ರತಿಷ್ಠೆ, 7-30 ರಿಂದ ಬ್ರಹ್ಮಕಲಶಾಭಿಷೇಕ, ಸಂಜೆ 5 ಕ್ಕೆ ದೈವದ ಗಗ್ಗರ ಸೇವೆ, 6-30 ಕ್ಕೆ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಕ್ಷೇತ್ರ ಒಡಿಯೂರು ಇವರಿಂದ ನೂತನ ರಾಜಗೋಪುರದ ಲೋಕಾರ್ಪಣೆ, ನಂತರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಶ್ಮಿತಾ ಯುವರಾಜ್ ಜೈನ್, ಸತೀಶ್ಚಂದ್ರ ಸಾಲ್ಯಾನ್ ಪಾಣಿಲ ಹಾಗೂ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವೈ.ಶಶಿಕಾಂತ್ ಜೈನ್ ಹಾಗೂ ಕ್ಷೇತ್ರದ ವಿವಿಧ ದಾನಿಗಳನ್ನು ಸನ್ಮಾನಿಸಲಾಗುವುದು. ಬಳಿಕ ಉಡುಪಿ ಕೃಷ್ಣ ಕಲಾವಿದರ ತಂಡದಿಂದ ’ಆನಿದ ಮನದಾನಿ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಮಾರ್ಚ್ 1 ಮತ್ತು 2 ರಂದು ರಾತ್ರಿ ವಾರ್ಷಿಕ ನೇಮೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷರಾದ ಎಂ.ಪುರುಷೋತ್ತಮ ಶೆಟ್ಟಿ ನಡ್ಯೋಡಿ ದೈವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ರೈ, ಕಾರ್ಯದರ್ಶಿ ಯತೀಶ್ ಕೋಟ್ಯಾನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.