ಮೂಡುಬಿದಿರೆ ಮಹಿಳಾ ವಿವಿಧೋದ್ಧೇಶ ಸಹಕಾರಿ ಸಂಘ ನಿ. ಇದರ 2025ರಿಂದ 30ನೇ ಸಾಲಿನ 5 ವರ್ಷಗಳ ಅವಧಿಗೆ ಆಯ್ಕೆಗೊಂಡ ಆಡಳಿತ ಮಂಡಳಿ ಅಧ್ಯಕ್ಷರಾಗಿ ಶ್ರೀಮತಿ ಶಾಲಿನಿ ಎನ್. ಕೋಟೆ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಜಯಲಕ್ಷ್ಮೀ ದೇವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಸುಮಂಗಳಾ, ಪದ್ಮಶ್ರೀ ಜೈನ್, ರಂಜನಿ ಶೆಟ್ಟಿ, ಸಬಿತಾ ಜೈನ್, ಗಿರಿಜಾ ಎಂ., ರೇಣುಕಾ, ವಸಂತಿ, ಮೋಹಿನಿದಾಸ್, ನಿವೇದಿತಾ, ಹೇಮಲತಾ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿ ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ವಿಲಾಸ್ ಚುನಾವಣಾ ಪ್ರಕ್ರಿಯೆ ನಡೆಸಿದರು. ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಲಲನ್ ಸಹಕರಿಸಿದರು.