ಮೂಡುಬಿದಿರೆ

ಪುತ್ತಿಗೆ ಹೊರೆ ಕಾಣಿಕೆಗೆ ಪೊಲೀಸ್ ಪ್ರಕಟಣೆ

ಮೂಡಬಿದರೆ ಪೊಲೀಸ್ ಠಾಣೆ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಪುತ್ತಿಗೆ ಇದರ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತನಾಳೆ ದಿನಾಂಕ 28ರಂದು ಮಧ್ಯಾಹ್ನ 2.00 ಗಂಟೆಗೆ ಮೂಡಬಿದರೆ ಪೇಟೆಯಿಂದ ಹಸಿರು ಹೊರೆ ಕಾಣಿಕೆ ನಡೆಯಲಿದ್ದು, ಹಸಿರು ಹೊರೆ ಕಾಣಿಕೆಯು ಮೂಡಬಿದರೆ ಮುಖ್ಯ ಪೇಟೆಯಿಂದ ಹೊರಡುವುದರಿಂದ ಸಾವಿರಾರು ಭಕ್ತಾದಿಗಳು ಹಾಗೂ ಹೊರೆ ಕಾಣಿಕೆ ಹೊತ್ತ ಹೆಚ್ಚಿನ ವಾಹನಗಳು ಸೇರುವ ನಿರೀಕ್ಷೆ ಇರುತ್ತದೆ.

ಆದುದರಿಂದ ಮಧ್ಯಾಹ್ನ 2.00 ಗಂಟೆಯ ನಂತರ ಮೂಡಬಿದರೆ ಪೇಟೆಯಲ್ಲಿನ ಸಂಚಾರ ಮಾರ್ಗದಲ್ಲಿ ಕೆಲವೊಂದು ಬದಲಾವಣೆಗಳನ್ನು ಸಾರ್ವಜನಿಕರು ಮಾಡಲಾಗಿದ್ದು, ಮೂಡಬಿದರೆಯ ನಗರಕ್ಕೆ ಬಾರದೇ ಮೂಡಬಿದರೆಯ ಹೊರ ವರ್ತುಲಾ (ಬೈಪಾಸ್) ರಸ್ತೆಯಲ್ಲಿ ಹಾಗೂ ವಿದ್ಯಾಗಿರಿ-ಮಾಸ್ತಿಕಟ್ಟೆ ಬೊಗ್ರುಗುಡ್ಡೆ ಪೇಪರ್ మిಲ್ಲ್ ಒಳ ರಸ್ತೆಯಿಂದಾಗಿ ಹಸಿರು ಹೊರೆ ಕಾಣಿಕೆ ಮುಗಿಯುವ ವರೆಗೂ ಸಂಚರಿಸಿ ಸಹಕರಿಸಬೇಕಾಗಿ ಸಾರ್ವಜನಿಕರಲ್ಲಿ ಮೂಡಬಿದರೆ ಪೊಲೀಸ್‌ ಠಾಣೆ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ವಿನಂತಿಸಿಕೊಂಡಿದ್ದಾರೆ.

Related posts

ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಆಹಾರೋತ್ಸವ 2024

Madhyama Bimba

ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವರ ಬ್ರಹ್ಮಕಲಶೋತ್ಸವಕ್ಕೆ ಹಲವು ಆಕರ್ಷಣೆ

Madhyama Bimba

ಕಡಂದಲೆ -ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾರಿ ಸಿಡಿಲು ಗಾಳಿ ಮಳೆಗೆ ತೀವ್ರ ಹಾನಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More