ಮೂಡುಬಿದಿರೆ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ದೇವರ ಬ್ರಹ್ಮಕಲಶೋತ್ಸವ ಸಂಭ್ರಮವನ್ನು ಕಂಡು ಕಣ್ಣುತುಂಬಿಕೊಳ್ಳುವ ಕ್ಷಣಕ್ಕೆ ಮತ್ತಷ್ಟು ಆಕರ್ಷಣೆಗೊಳಪಡಿಸಲು ಊರ ಭಕ್ತಾಧಿಗಳು ದೇವಸ್ಥಾನ ಸಂಪರ್ಕಿಸುವ ರಸ್ತೆಗಳನ್ನು ಶೃಂಗರಿಸಿ ಅಲಂಕರಿಸಿದ್ದಾರೆ.
ಸ್ಥಳೀಯ ಸಂಘ ಸಂಸ್ಥೆಗಳವರು ರಸ್ತೆಯ ಇಕ್ಕೆಲಗಳಲ್ಲಿ ಕಲಾಕೃತಿಗಳನ್ನು ಅಳವಡಿಸಿ ಮತ್ತಷ್ಟು ಮೆರುಗು ತುಂಬಿದ್ದಾರೆ.
ಹೊರೆಕಾಣಿಕೆ ತುಂಬಿರುವ ಉಗ್ರಾಣ ಕೂಡ ತುಂಬಿ ತುಳುಕುತ್ತಿದೆ.