Blog

ಗ್ಯಾರಂಟಿಯಿಂದಾಗಿ ಗ್ರಾಮೀಣ ಜನ ಜೀವನ ಇಕ್ಕಟ್ಟಿಗೆ

ಹಣದ ಹೊಳೆ ಗ್ಯಾರಂಟಿಗೆ

ಗ್ರಾಮೀಣ ಜನಜೀವನ ಇಕ್ಕಟ್ಟಿಗೆ

ಕಾರ್ಕಳ ಕ್ಷೇತ್ರಕ್ಕೆ
ಬ್ರಹತ್ ನೀರಾವರಿ ಇಲಾಖೆಯಿಂದ 16 ಕೋಟಿ ಹಣ ಬಿಡುಗಡೆಯೂ ಬಾಕಿ.

ತತ್ ಕ್ಷಣವೇ ಹಣ  ಬಿಡುಗಡೆಗೆ ಬಿಜೆಪಿ ಆಗ್ರಹ

ಕಾರ್ಕಳ: ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಘೋಷಿಸಿದ ಗ್ಯಾರಂಟಿ ಯೋಜನೆಗಳಿಗೆ ಹಣದ ಹೊಳೆ ಹರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರವು ಅಭಿವೃದ್ದಿ ಕಾರ್ಯಗಳಿಗೆ ಹಣ ನೀಡದೆ ವಂಚಿಸುತ್ತಿದೆ.
ಬ್ರಹತ್ ನೀರಾವರಿ ಇಲಾಖೆಯಿಂದ ತಾಲೂಕಿನ ಅಭಿವೃದ್ದಿಗೆ 16 ಕೋ.ರೂ. ಬಿಡುಗಡೆಯಾಗಬೇಕಿದ್ದು ಆ  ಹಣವನ್ನು ಸರಕಾರ ತಡೆ ಹಿಡಿದಿದೆ. ಈ ಕೂಡಲೆ ಹಣ  ಬಿಡುಗಡೆಗೊಳಿಸುವಂತೆ ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆಗ್ರಹಿಸಿದ್ದಾರೆ.

ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿಗಳಾದ
ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರದ ಅವಧಿಯ 2022-23ನೇ ಸಾಲಿನಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಬ್ರಹತ್ ನೀರಾವರಿ ಇಲಾಖೆಯಿಂದ ( ವಾರಾಹಿ) 16 ಕೋ.ರೂ  ಮಂಜೂರಾತಿ ನೀಡಿತ್ತು. ಟೆಂಡರ್ ಪ್ರಕ್ರೀಯೆಯೂ ನಡೆದಿದೆ. ಕಾಮಗಾರಿ ಕೈಗೆತ್ತಿಕೊಳ್ಳುವ ಸಲುವಾಗಿ ಹಣ ಬಿಡುಗಡೆಗೆ ಕಾಂಗ್ರೆಸ್ ಸರಕಾರ ಹಣ ಬಿಡುಗಡೆಗೊಳಿಸುತಿಲ್ಲ ಎಂದು ಆರೋಪಿಸಿದರು.
ಇದರಿಂದಾಗಿ ಕಾಮಗಾರಿಗಳು ನಡೆಯದೆ ಗ್ರಾಮೀಣ ಭಾಗದ ಜನ ಇಕ್ಕಟ್ಟಿಗೆ ಸಿಲುಕಿದ್ದಾರೆ. ಬ್ರಹತ್ ನೀರಾವರಿ ಸೇರಿ ಕ್ಷೇತ್ರಕ್ಕೆ ಸುಮಾರು  75 ಕೋ. ರೂ. ಅಧಿಕ ಮೊತ್ತದ ಅನುದಾನ ಸರಕಾರದಿಂದ ಬಿಡುಗಡೆಯಾಗಬೇಕಿದೆ. ಇದೆಲ್ಲದಕ್ಕೂ ತಡೆ ನೀಡಿರುವ ಕಾಂಗ್ರೆಸ್ ಸರಕಾರ ಕ್ಷೇತ್ರದ ಅಭಿವೃದ್ದಿಯಲ್ಲಿ ತಾರತಮ್ಯ ಮಾಡುತ್ತಿದೆ ಎಂದರು.
ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಅವರು ಸಚಿವರಾಗಿದ್ದ ವೇಳೆ ಅವರ ನಿರಂತರ  ಪ್ರಯತ್ನದಿಂದ ಕ್ಷೇತ್ರಕ್ಕೆ ಸಾಕಷ್ಟು  ಪ್ರಮಾಣದಲ್ಲಿ ಅನುದಾನಗಳು ಲಭ್ಯವಾಗಿ ಅಭಿವೃದ್ದಿ ಕೆಲಸಗಳಾಗಿವೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ಕ್ಷೇತ್ರದ  ಅಭಿವೃದ್ದಿಗೆ ಕಿಂಚಿತ್ತು ಹಣ ಬಿಡುಗಡೆಯಾಗಿಲ್ಲ ಎಂದರು.
ನಮ್ಮ ಶಾಸಕ ವಿ. ಸುನಿಲ್ ಕುಮಾರ್ ಅವರು  ಕ್ಷೇತ್ರಕ್ಕೆ ಮಂಜೂರಾತಿಗೊಂಡ ಹಣ ಬಿಡುಗಡೆಗೊಳಿಸುವಂತೆ ಮತ್ತು ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಈಗಾಗಲೆ  ರಾಜ್ಯದ ಕಾಂಗ್ರೆಸ್ ಸರಕಾರದ ಮೇಲೆ ಒತ್ತಡ ಹೇರಿದ್ದು ಆಗ್ರಹ ವ್ಯಕ್ತಪಡಿಸಿದ್ದಾರೆ. ಹಿಂದಿನ ಸರಕಾರದ ಅವಧಿಯಲ್ಲಿ ಟೆಂಡರ್ ನಡೆದು  ತಡೆಹಿಡಿದ ಬಾಕಿ ಹಣದ ಬಿಡುಗಡೆಯ ನಿರೀಕ್ಷೆಯಲ್ಲಿ ಕ್ಷೇತ್ರದ ಜನರಿದ್ದಾರೆ ಎಂದಿದ್ದಾರೆ.

Related posts

ಸ್ಪೆಷಲ್ ಡಿಶ್

Madhyama Bimba

ಸಂಕಷ್ಟದಲ್ಲಿ ಬೆಳೆಗಾರರು

Madhyama Bimba

ನಲ್ಲೂರು ಬಳಿ ಬೈಕ್ ಕಾರು ಅಪಘಾತ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More