ಶ್ರೀ ಪದ್ಮಭ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವರಂಗ ಇಲ್ಲಿಮಕ್ಕಳ ಸುರಕ್ಷತೆ ಹಾಗೂ ಕಾನೂನು ಮಾಹಿತಿ ಕಾರ್ಯಕ್ರಮ ಫೆ 28 ರಂದು ನಡೆಯಿತು.
ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ಮುಖ್ಯ ಶಿಕ್ಷಕರಾದ ರತ್ನಕರ ಅರಿಗ ರವರು ವಹಿಸಿದರು. ವರಂಗ ಶಾಲಾ ಹಳೇವಿದ್ಯಾರ್ಥಿ ಹಾಗೂ ವಕೀಲರಾದ ವಿ ಸುರೇಶ್ ಪೂಜಾರಿ ಯವರು ಮಕ್ಕಳ ಸುರಕ್ಷತೆ ಹಾಗೂ ಕಾನೂನು ಮಾಹಿತಿ ನೀಡಿದರು.
ಸಹ ಶಿಕ್ಷಕಿಯವರಾದ ಶ್ರೀಮತಿ ಸುಜಾತಾ ಸ್ವಾಗತಿಸಿ ಪ್ರಮೀಳಾ ಧನ್ಯವಾದ ವಿತ್ತರು. ಜಯಂತಿ ಕಾರ್ಯಕ್ರಮ ನಿರೂಪಿಸಿದರು.