ಕಾರ್ಕಳ ಹಿರಿಯಂಗಡಿ ಪರಿಸರದ ನಿವಾಸಿಗಳಿಗೆ ನಿತ್ಯ ನೀರು ವಿತರಣೆ ಮಾಡುವ ನೀರಿನ ಟ್ಯಾಂಕ್‌ನಲ್ಲಿ ತೂತು ಬಿದ್ದಿದೆ.
ಕಾರ್ಕಳದ ಆನೆಕೆರೆಯಿಂದ ತಾಲೂಕು ಕಚೇರಿಯತ್ತ ಸಾಗುವ ಚತುಷ್ಪಥ ರಸ್ತೆಯ ದೈವಸ್ಥಾನದ ಪಕ್ಕವೇ ಇರುವ ಈ ನೀರಿನ ಟ್ಯಾಂಕ್‌ನಿಂದ ಹಲವಾರು ವರ್ಷಗಳಿಂದ ಈ ಪರಿಸರದ ನಿವಾಸಿಗಳಿಗೆ ನೀರು ನೀಡಲಾಗುತ್ತಿದೆ.
ಆದರೆ ಕಳೆದ ಕೆಲವು ಸಮಯ ಗಳಿಂದ ಈ ನೀರಿನ ಟ್ಯಾಂಕ್ ತೂತು ಬಿದ್ದಿದೆ. ಅದು ಕೂಡಾ ಕಾಂಕ್ರೀಟ್ ಮೇಲ್ಭಾಗದಲ್ಲಿ .
ತೂತು ಬಿದ್ದ ಈ ನೀರಿನ ಟ್ಯಾಂಕ್ ನಲ್ಲಿ ಮನುಷ್ಯ ಒಳ ಹೋಗುವಷ್ಠರ ಮಟ್ಟಿಗೆ ಸ್ಥಳಾವಕಾಶವಿದೆ.
ಯಾವುದೇ ಹೊತ್ತಿನಲ್ಲಿ ಈ ನೀರನ್ನು ಟ್ಯಾಂಕ್‌ನ ಹೊರಗಿನಿಂದ ಯಾವುದೇ ಕಾಡು ಪ್ರಾಣಿಗಳು ಅಥವಾ ಹಾವುಗಳು ಅಥವಾ ನಾಯಿಯಂತಹ ಪ್ರಾಣಿಗಳು ಕುಡಿಯುವಷ್ಠರ ಮಟ್ಟಿಗೆ ಈ ಟ್ಯಾಂಕ್‌ನಲ್ಲಿ ಅವಕಾಶಗಳಿವೆ.
ಹಿರಿಯಂಗಡಿಯ ಆಸು ಪಾಸಿನ ಮನೆಗಳಿಗೆ ನೀರು ನೀಡುವ ಈ ನೀರಿನ ಟ್ಯಾಂಕ್‌ನ ನೀರನ್ನು ಹಲವಾರು ಮಂದಿ ಬಳಕೆ ಮಾಡುತ್ತಾರೆ. ಹಲವಾರು ಮನೆಗಳಲ್ಲಿ ಕುಡಿಯಲು ಕೂಡಾ ಉಪಯೋಗ ಮಾಡುತ್ತಾರೆ.
ಜನರ ಸುರಕ್ಷತೆಯ ನಿಟ್ಟಿನಲ್ಲಿ ಈ ಕಾಂಕ್ರೀಟ್ ಟ್ಯಾಂಕ್ ವ್ಯವಸ್ಥೆಯನ್ನು ಸುರಕ್ಷತೆಯ ನಿಟ್ಟಿನಲ್ಲಿ ಸರಿಪಡಿಸುವುದು ಒಳಿತು. ಅದರ ಪಕ್ಕದಲ್ಲೇ ಇರುವ ಶೆಡ್‌ಗೆ ಕೂಡಾ ಯಾವುದೇ ಸುರಕ್ಷತೆಯಿಲ್ಲ. ಆ ಶೆಡ್‌ಗೆ ಬೀಗ ಹಾಕದೆ ಹಲವಾರು ಸಮಯಗಳೇ ಕಳೆದು ಹೋಗಿದೆ ಎಂದು ಸ್ಥಳೀಯರು ತಿಳಿಸುತ್ತಾರೆ. ಇವೆಲ್ಲದರ ಬಗ್ಗೆ ಕಾರ್ಕಳ ಪುರಸಭೆ ತಕ್ಷಣಕ್ಕೆ ಗಮನ ಕೊಡುವ ಅಗತ್ಯವಿದೆ.