
ಖ್ಯಾತ ಉದ್ಯಮಿ,ಮೂಡುಬಿದಿರೆ ಕಡಲಕೆರೆ ಸುಜಯ ಹೊಲೋ ಬ್ಲಾಕ್, ಸುಜಯ ಇಂಟರ್ಲಾಕ್ ಮಾಲಕ ಮೂಡುಬಿದಿರೆಯ ಸದಾಶಿವ ಬಂಗೇರ (71) ಇಂದು ಸಂಜೆ 5ರ ಸುಮಾರಿಗೆ ಹೃದಯಾಘಾತದಿಂದ ಮನೆಯಲ್ಲೇ ಕುಸಿದು ಬಿದ್ದು ಇಹಲೋಕವನ್ನು ತ್ಯಜಿಸಿದ್ದಾರೆ. ಅವರು ಪತ್ನಿ ತುಳು ಸಾಹಿತಿ ಜಯಂತಿ ಬಂಗೇರ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.