ಅಜೆಕಾರು ವ್ಯವಸಾಯಿಕ ಸಹಕಾರಿ ಸಂಘ ಮುಂದಿನ 5 ವರ್ಷದ ಅವಧಿಗೆ ಅಧ್ಯಕ್ಷರಾಗಿ ಶಾಂತಿರಾಜ್ ಜೈನ್, ಉಪಾಧ್ಯಕ್ಷರಾಗಿ ಪ್ರಶಾಂತ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅವಧಿಯಲ್ಲಿ ಶಾಂತಿರಾಜ್ ಜೈನ್ ಅಧ್ಯಕ್ಷರಾಗಿ ಹಾಗೂ ಪ್ರಶಾಂತ್ ಶೆಟ್ಟಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಜ. 23ರಂದು ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಿತು.
ನಿರ್ದೇಶಕರಾದ ಅರುಣ್ ಕುಮಾರ್ ಹೆಗ್ಡೆ, ಬಾಲಕೃಷ್ಣ ಪಿ., ಲಕ್ಷ್ಮಣ್ ವಾಗ್ಳೆ, ರವೀಂದ್ರ ಪಿ., ದಿನೇಶ್ ನಾಯಕ್, ಶ್ರೀಮತಿ ಜಲಜಾ ಶೆಟ್ಟಿ, ಶ್ರೀಮತಿ ವಿಜೇತ ಪೈ, ಸತೀಶ್ ಪೂಜಾರಿ, ಕೆ. ಪ್ರಶಾಂತ್ ಶೆಟ್ಟಿ, ರಾಘವೇಂದ್ರ, ರಾಕೇಶ್ ನಾಯ್ಕ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರತಿನಿಧಿ ವಲಯ ಮೇಲ್ವಿಚಾರಕರಾದ ಜಯಂತ್ ಕುಮಾರ್ ಉಪಸ್ಥಿತರಿದ್ದರು.