ಮಿಯ್ಯಾರು ನಲ್ಲಿ ನಡೆಯುತ್ತಿರುವ ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಶಾಲು ಹಾಕಿ ಗೌರವಿಸಲಾಯಿತು.
ದೇವಸ್ಥಾನದ ಬ್ರಹ್ಮ ಕಲಶ ಕಾರ್ಯಕ್ರಮ ಜನವರಿ 16ರಿಂದ ಆರಂಭ ಗೊಂಡಿದೆ. ಬ್ರಹ್ಮ ಕಲಶ ಸಂದರ್ಭದಲ್ಲಿ ಇಲ್ಲಿಗೆ ಬರುವ ಸಾವಿರಾರು ಮಂದಿಗೆ ಇಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಆರೋಗ್ಯ ಸೇವೆಯನ್ನು ನೀಡುತ್ತಿದ್ದಾರೆ.
ಮಾಧ್ಯಮ ಬಿಂಬ ಪತ್ರಿಕೆ ಹಾಗು ಸ್ವಯಂ ಟೈಮ್ಸ್ ನ್ಯೂಸ್ ಸಮೂಹ ವಾರ್ತಾ ಸಂಸ್ಥೆಗಳ ವ್ಯವಸ್ಥಾಪಕ ಸಂಪಾದಕರಾದ ವಸಂತ್ ಕುಮಾರ್ ರವರು ಅರೋಗ್ಯ ಇಲಾಖೆ ಸಿಬ್ಬಂದಿಗಳಾದ ಸಮುದಾಯ ಆರೋಗ್ ಅಧಿಕಾರಿ ಮೆಹ್ತಾಬ್, ಆಶಾಲತಾ, ಆಶಾ ಕಾರ್ಯ ಕರ್ತೆ ಮಮತಾ, ಕುಶಲ, ಗ್ರೂಪ್ ಡಿ ನೌಕರ ಸಂಜಯ್ ಉಮೇಶ್ ಶಾಲು ಹಾಕಿ ಗೌರವಿಸಿದರು.
ಈ.ಸಂದರ್ಭದಲ್ಲಿ ಅಲ್ಲಿನ ಸ್ವಚ್ಛತಾ ವ್ಯವಸ್ಥೆ ಹಾಗು ಆರೋಗ್ಯ ವ್ಯವಸ್ಥೆ ಸಂಚಾಲಕ ಪ್ರಕಾಶ್ ಬಲಿಪ ಹಾಗು ತಂಡದ ಸದಸ್ಯರು ಉಪಸ್ಥಿತರಿದ್ದರು.
ಬ್ರಹ್ಮ ಕಲಶ ಸಂದರ್ಭದಲ್ಲಿ ಸ್ವಚ್ಛತೆ ಹಾಗು ಆರೋಗ್ಯ ಸೇವೆ ಮೆಚ್ಚುಗೆ ಪಡೆದಿದೆ







