ಕಾರ್ಕಳಹೆಬ್ರಿ

ಹೆಬ್ರಿ: ಕಾರಿಗೆ ಪಿಕ್ ಅಫ್ ವಾಹನ ಡಿಕ್ಕಿ- ಗಾಯ

ಹೆಬ್ರಿ: ನಾಡ್ಪಾಲು ಗ್ರಾಮದ ಆಗುಂಬೆ ಘಾಟಿ ಸಮೀಪ ಕಾರಿಗೆ ಪಿಕ್ ಅಫ್ ವಾಹನ ಡಿಕ್ಕಿಯಾಗಿ ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ಡಿ. 07ರಂದು ವರದಿಯಾಗಿದೆ.


ತುಮಕೂರು ತುರುವೇಕೆರೆಯ ವರುಣ ಪ್ರಸಾದ ಬಿ.ಪಿ. (42)ರವರು ರಶ್ಮಿ, ಜ್ಯೋತಿ, ಹಾಗೂ ರೀಧಿಕಾರವರೊಂದಿಗೆ ಕಾರಿನಲ್ಲಿ ತುರುವೇಕೆರೆಗೆ ಹೋಗುತ್ತಿರುವಾಗ ಆಗುಂಬೆ ಘಾಟಿ ಬಳಿ ಪಿಕ್ ಅಫ್ ವಾಹನವನ್ನು ಅದರ ಚಾಲಕ ಯಾಸಿನ್ ಓವರ್ ಟೇಕ್ ಮಾಡುವ ಬರದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.


ಡಿಕ್ಕಿಯ ಪರಿಣಾಮ ಕಾರಿನಲ್ಲಿದ್ದವರು ಗಾಯಗೊಂಡು ಹೆಬ್ರಿ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.


ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕಾರ್ಕಳ ವಕೀಲರ ಸಂಘದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ

Madhyama Bimba

ಸಂಕಷ್ಟದಲ್ಲಿರುವ ಮಹಿಳೆಯರು ಹಾಗೂ ಮಕ್ಕಳಿಗೆ ನೆರವಾಗಲು ಅಕ್ಕ ಪಡೆ ಸನ್ನದ್ಧ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

Madhyama Bimba

ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧಿ ಜಯಂತಿ – ಲಾಲ್ ಬಹುದ್ದೂರ್ ಶಾಸ್ತ್ರೀ ಅವರ ಜನ್ಮ ದಿನಾಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More