*ದಕ್ಷ ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರಿಗೆ ವೀರ ಕನ್ನಡತಿ ಪ್ರಶಸ್ತಿ*
*ತಹಶಿಲ್ದಾರ್ ಡಾ.ಪ್ರತಿಭಾ.ಆರ್ ಅವರ ಅಪ್ರತಿಮ ಸೇವೆಗೆ ಒಲಿದು ಬಂದ “ವೀರ ಕನ್ನಡತಿ” ಪುರಸ್ಕಾರ*
*ಡಾ.ಪ್ರತಿಭಾ ಆರ್ : ವೀರ ಕನ್ನಡತಿ ಪ್ರಶಸ್ತಿಗೆ ,; ದಕ್ಷತೆಗೆ ಸಂದ ಗೌರವ*
ಕಾರ್ಕಳದಲ್ಲಿ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಪ್ರತಿಭಾರಿಗೆ ವೀರ ಕನ್ನಡತಿ ಪ್ರಶಸ್ತಿ ನೀಡಲಾಗಿದೆ. ಅವರು ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ತಹಶಿಲ್ದಾರ್, ದಂಡಾಧಿಕಾರಿ ಆಗಿದ್ದಾಗ ಮಾಡಿದ ಸೇವೆಯನ್ನು ಗುರುತಿಸಿ ಝೀ ಟಿವಿ ವಾಹಿನಿಯವರು ರಾಜ್ಯ ಮಟ್ಟದ ಪ್ರಶಸ್ತಿಯಾದ “ವೀರ ಕನ್ನಡಿಗ” ಪ್ರಶಸ್ತಿ ನೀಡಿ ಗೌರವಿಸಿದೆ.

ಉಡುಪಿಯಲ್ಲಿ ದಂಡಾಧಿಕಾರಿ/ತಹಶಿಲ್ದಾರ್ ಕರ್ತವ್ಯ ನಿರ್ವಹಿಸಿದ ಡಾ.ಪ್ರತಿಭಾ ಆರ್ ರವರು ತಮ್ಮ ವಿಶಿಷ್ಟ ಸೇವಾಪರತೆಯಿಂದ ಜನಮನ್ನಣೆ ಗಳಿಸಿದ್ದರು…
♦️ ತಾವೇ ಸ್ವತಃ ಬಸ್ ಹತ್ತಿ ಸಂಚರಿಸಿ ಸಾರಿಗೆ ಸಮಸ್ಯೆಗೆ ಪರಿಹಾರ
♦️ಎಷ್ಟೋ ವರ್ಷಗಳಿಂದ ಬೆಳಕು-ನೀರು- ಶೌಚಾಲಯ ಸೌಲಭ್ಯಗಳಿಲ್ಲದ ಕೆಳ ಸಮುದಾಯದವರ ಮನೆಗೆ ಮೂಲ ಭೂತ ಸೌಲಭ್ಯ ಒದಗಿಸಿರುತ್ತಾರೆ.
♦️ಪ್ರವಾಹ ಉಂಟಾದಾಗ ಸ್ವತಃ ಬೋಟ್ ನಲ್ಲಿ ತೆರಳಿ ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಿಸಿರುತ್ತಾರೆ.
♦️ ಅನಾಥ ವೃದ್ಧರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಆಶ್ರಯ ನೀಡಿರುತ್ತಾರೆ.

♦️ದುರ್ಬಲರ ಮನೆಗೆ ತೆರಳಿ ಆಧಾರ್ ಮಾಡಿಸಿ ಕೊಟ್ಟಿರುತ್ತಾರೆ
♦️ಮನೆ ಬಾಗಿಲಿಗೆ ಬಂದು ಪಿಂಚಣಿ ಮಂಜೂರು ಮಾಡಿರುತ್ತಾರೆ.
♦️ ಪಟ್ಟಣದ ಸ್ವಚ್ಚತೆಯಲ್ಲಿ ತೊಡಗಿರುತ್ತಾರೆ
♦️ ಬಾಲ ಕಾರ್ಮಿಕರ ರಕ್ಷಣೆ ಮಾಡಿರುತ್ತಾರೆ
♦️ ಪರಿಸರ ಮಾಲಿನ್ಯ ಉಂಟು ಮಾಡುವ ಕಾರ್ಖಾನೆ ಮುಟ್ಟುಗೋಲು ಹಾಕಿಕೊಂಡಿರುತ್ತಾರೆ
♦️ಕಡಲ್ಕೊರೆತದ ಬಗ್ಗೆ ರಕ್ಷಣಾ ಕಾರ್ಯ ಕೈಗೊಂಡಿರುತ್ತಾರೆ
♦️ ವೃದ್ಧರಿಗೆ ಕಾಲು ಸಂಕ ಕಟ್ಟಿಕೊಟ್ಟಾರುತ್ತಾರೆ
♦️ಮಳೆಯಿಂದಾಗ ಮನೆ ಬಿದ್ದವರ ಮನೆಗೆ ಸಂತೈಸಿ ಪರಿಹಾರ ಮಂಜೂರು ಮಾಡಿರುತ್ತಾರೆ.

♦️ಪರಿಸರ ರಕ್ಷಣೆಗಾಗಿ “ಉಸಿರಿಗಾಗಿ ಹಸಿರು” ಅಭಿಯಾನದ ಮೂಲಕ ಗಿಡ-ಮರ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ.
♦️ ಜನಸಾಮಾನ್ಯರ ಕಂದಾಯ ಕರ್ತವ್ಯಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿರುತ್ತಾರೆ
♦️ “ನೀತಿ ಆಯೋಗ” ತಾಲ್ಲೂಕಿಗೆ ಭೇಟಿ ನೀಡಿ ನೆರೆ ಸಂರಕ್ಷಣಾ ಕಾರ್ಯಾಚರಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.
*”ರಾಜ್ಯ ಮಟ್ಟದ ಪ್ರಶಸ್ತಿಯಾದ ವೀರ ಕನ್ನಡತಿ ಪ್ರಶಸ್ತಿ ದೊರಕಿರುವುದು ಸಂತಸದ ವಿಷಯ… ಪ್ರಾಮಾಣಿಕತೆಗೆ, ದಕ್ಷತೆಗೆ ಸಂದ ಗೌರವ… ಒಬ್ಬ ಸರ್ಕಾರಿ ಅಧಿಕಾರಿಗೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ… ಸಮಾಜದ ಮೇಲಿನ ಹೊಣೆಗಾರಿಕೆ ಹೆಚ್ಚಾಗಿದೆ… ಇನ್ನೂ ಹೆಚ್ಚಿನ ಬದ್ಧತೆಯಿಂದ ಕರ್ತವ್ಯ ನಿರ್ವಹಿಸಲು ಪ್ರೇರೇಪಣೆ ನೀಡಿದೆ”*
-ಡಾ.ಪ್ರತಿಭಾ ಆರ್, ತಹಶಿಲ್ದಾರ್
ಡಾ. ಪ್ರತಿಭಾ ಆರ್, ತಹಶಿಲ್ದಾರ್
ರವರಿಗೆ *ವೀರ ಕನ್ನಡತಿ* ಪ್ರಶಸ್ತಿ ದೊರಕಿರುವುದಕ್ಕೆ ತಾಲ್ಲೂಕಿನ ಜನತೆ ಮತ್ತು ಕಚೇರಿ ಸಿಬ್ಬಂದಿ ಸಂತಸ ವ್ಯಕ್ತಪಡಿಸಿರುತ್ತಾರೆ.ಪ್ರಸ್ತುತ ಅವರು ಬೆಂಗಳೂರುವಿನಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
