ಅದ್ದೂರಿಯಾಗಿ ಸಂಪನ್ನಗೊಂಡ ನಾನಿಲ್ತಾರ್ ಕುಲಾಲ ಕ್ರೀಡಾಕೂಟ 2025..
ಕುಲಾಲ ಸಂಘ ರಿ ನಾನಿಲ್ತಾರ್ ಮುಲ್ಲಡ್ಕ mundk ಇದರ ವತಿಯಿಂದ ಯುವ ವೇದಿಕೆ ಆಶ್ರಯದಲ್ಲಿ ಡಿಸೆಂಬರ್ 21 ಆದಿತ್ಯವಾರ ನಾನಿಲ್ತಾರ್ ದಿ. ಗಿರಿಜಾ ಸುಂದರ ಮೂಲ್ಯ ಕ್ರೀಡಾಂಗಣದಲ್ಲಿ ನಡೆಯಿತು. ಕುಂಭ ಶ್ರೀ ರೆಸಿಡೆನ್ಸಿಯಲ್ ಶಾಲೆ ಮತ್ತು ಕಾಲೇಜು ವೇಣೂರು ಇದರ ಸಂಸ್ಥಾಪಕರಾದ ಶ್ರೀ ಗಿರೀಶ್ ಕೆ ದೀಪ ಹಚ್ಚಿ ಕ್ರೀಡಾಕೂಟ ಉದ್ಘಾಟಿಸಿ ಶುಭ ಹಾರೈಸಿದರು.
ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ರಾಮ್ ದಾಸ್ ಭಟ್ ಆಶಿರ್ವಚನ ನೀಡಿದರು. ಮುಖ್ಯ ಅತಿಥಿಗಳಾದ ಸುಕುಮಾರ್ ಸಾಲ್ಯಾನ್ ಶುಭ ಹಾರೈಸಿದರು ಸಂಘದ ಅಧ್ಯಕ್ಷರಾದ ಶ್ರೀ ಜಯರಾಮ ಕುಲಾಲ್ ಅಗರಟ್ಟ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀ ಗಿರೀಶ್ ಕೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುಧಾಕರ್ ಸಾಲ್ಯಾನ್ ಸಂಕಲಕರಿಯ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕು. ಮಣಿ ಶ್ರೀ ಇವರುಗಳಿಗೆ ಸನ್ಮಾನಿಸಲಾಯಿತು.
ಸಭೆಯಲ್ಲಿ ಕುಂಭ ನಿಧಿ ಸೊಸೈಟಿ ಬೆಳ್ಮಣ್ ಅಧ್ಯಕ್ಷರಾದ ಶ್ರೀ ಕುಶ ಆರ್ ಮೂಲ್ಯ ಇನ್ನಾ, ಸಂಘದ ಕೋಶಾಧಿಕಾರಿ ಗೋಪಾಲ್ ಮೂಲ್ಯ ಮಡಿಕೆ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್, ಯುವ ವೇದಿಕೆ ಅಧ್ಯಕ್ಷೆ ಕು. ಹರ್ಷಿತಾ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಚೈತ್ರ ಸಂತೋಷ್, ಉಪಾಧ್ಯಕ್ಷರಾದ ಬೊಗ್ಗು ಮೂಲ್ಯ ಬೆಲಾಡಿ, ಜಗನ್ನಾಥ್ ಮೂಲ್ಯ ಬೆಳ್ಮಣ್, ವಾರಿಜಾ ಬಿ ಕೊಡಿಮಾರ್ ಸಹ ಕಾರ್ಯದರ್ಶಿ ರಾಜೇಶ್ ಕುಲಾಲ್ ಸಾತೂರು, ಉಪಸ್ಥಿತರಿದ್ದರು. ಶ್ರೀಮತಿ ಪವಿತ್ರ ಗಿರೀಶ್ ಮತ್ತು ಶ್ರೀಶಾ ಪವನ್ ಪ್ರಾರ್ಥನೆ ನೆರವೇರಿಸಿ ಉಪನ್ಯಾಸಕಿ ಶ್ರೀಮತಿ ಅರುಣಾ ಕುಲಾಲ್ ಸ್ವಾಗತಿಸಿ ಶ್ರೀಮತಿ ಆಶಾ ವರದರಾಜ್ ವಂದಿಸಿದರು ಶಿಕ್ಷಕರಾದ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.
ಸಂಘದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಂದ ಸ್ಪರ್ಧಾಳುಗಳು ಭಾಗವಹಿಸಿದ್ದರು ಪುರುಷರ ವಾಲಿಬಾಲ್, ಮಹಿಳೆಯರ ತ್ರೋಬಾಲ್, ಜಗ್ಗಾಟ, 100 ಮಿಟರ್ ಓಟ ಇನ್ನಿತರ ಸ್ಪರ್ದೆ ವಿಜೇತರಿಗೆ ನಗದು, ಟ್ರೋಫಿ, ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು
